Advertisement

ಪುತ್ತೂರು: ಅನುಮಾನಾಸ್ಪದ ರೀತಿಯಲ್ಲಿ ಮಹಿಳೆ ಶವ ಪತ್ತೆ

09:34 PM Mar 10, 2023 | Team Udayavani |

ಪುತ್ತೂರು : ಚಿಕ್ಕಮುಟ್ನೂರು ಗ್ರಾಮದ ಬೀರ್ನಹಿತ್ಲಿನಲ್ಲಿ ಮನೆಯಂಗಳದಲ್ಲೇ ಮಹಿಳೆ ಅನುಮಾನಾಸ್ಪದ ರೀತಿಯಲ್ಲಿ ಕೊರಗಪ್ಪ ಅವರ ಪತ್ನಿ ಗಿರಿಜಾ (45)ಅವರ ಶವ ಪತ್ತೆಯಾದ ಘಟನೆ ಮಾ. 10ರಂದು ಸಂಜೆ ಬೆಳಕಿಗೆ ಬಂದಿದೆ.

Advertisement

ಮನೆಯಲ್ಲಿ ಪತಿ ಮತ್ತು ಪತ್ನಿಯೊಂದಿಗೆ ಇಬ್ಬರು ಪುಟ್ಟ ಮಕ್ಕಳು ವಾಸಿಸುತ್ತಿದ್ದರು. ಶುಕ್ರವಾರ ಸಂಜೆ ವೇಳೆ ಗಿರಿಜಾ ಮನೆ ಅಂಗಳದಲ್ಲಿ ಬಿದ್ದಿರುವುದನ್ನು ಗಮನಿಸಿದ ನೆರೆಮನೆಯ ಮಹಿಳೆ ತತ್‌ಕ್ಷಣ ಪರಿಚಿತರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಸ್ಥಳಕ್ಕೆ ಪೊಲೀಸರು ಹಾಗೂ ಪಂಚಾಯತ್‌ ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸಾವಿನ ಬಗ್ಗೆ ಅನುಮಾನ
ಪತಿ, ಪತ್ನಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಶುಕ್ರವಾರ ಇಬ್ಬರೂ ಮಕ್ಕಳ ಜತೆ ಮನೆಯಲ್ಲಿ ಇದ್ದರು. ಆದರೆ ಸಂಜೆ ಮಹಿಳೆ ಮನೆ ಅಂಗಳದಲ್ಲಿ ಬಿದ್ದಿದ್ದು ಈ ವೇಳೆ ಕೊರಗಪ್ಪ ಮನೆಯಲ್ಲಿ ಇರಲಿಲ್ಲ. ಸ್ಥಳೀಯರು, ಪೊಲೀಸರು ಹುಡುಕಾಟ ನಡೆಸಿದ್ದು ಈ ವೇಳೆ ಅವರು ಹತ್ತಿರದ ತೋಡಿನ ಬಳಿ ಕುಳಿತು ಜೋರಾಗಿ ಕಿರುಚಾಡುತ್ತಿದ್ದ ಎನ್ನಲಾಗಿದೆ. ಅಲ್ಲಿಂದ ಆತನನ್ನು ಕರೆ ತಂದಿದ್ದು ಪೊಲೀಸರು ವಿಚಾರಣೆಗೆ ಒಳಪಡಿಸಿರುವ ಮಾಹಿತಿ ಲಭ್ಯವಾಗಿದೆ. ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next