Advertisement
ಕೊಂಬೆಟ್ಟು ತಾ| ಕ್ರೀಡಾಂಗಣದಲ್ಲಿ ಜಿಲ್ಲಾ ಹಿರಿಯರ ಕ್ರೀಡಾಕೂಟ ಸಂಘಟನ ಸಮಿತಿ, ತಾಲೂಕು ಹಿರಿಯರ ಕ್ರೀಡಾ ಸಂಘ ಕಾಣಿಯೂರು ಹಾಗೂ ದ.ಕ. ಜಿಲ್ಲಾ ಹಿರಿಯರ ಕ್ರೀಡಾ ಸಂಘದ ಆಶ್ರಯದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆದ ಜಿಲ್ಲಾ ಮಟ್ಟದ 14ನೇ ಹಿರಿಯರ ಕ್ರೀಡಾಕೂಟ-2017ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೈಹಿಕ ಸಾಮರ್ಥ್ಯ ಕಾಪಾಡಿಕೊಂಡು, ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಿ ದೇಶಕ್ಕೆ ಗೌರವ ತರಬೇಕು ಎಂದು ಅವರು ಹೇಳಿದರು.
ಸಭಾ ಕಾರ್ಯಕ್ರಮದ ಮೊದಲು ಸಹಾಯಕ ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿ ಮಾಮಚ್ಚನ್ ಎಂ. ಧ್ವಜಾರೋಹಣದ ಮೂಲಕ ಕ್ರೀಡಾಕೂಟಕ್ಕೆ
ಚಾಲನೆ ನೀಡಿದರು. ಶ್ಲಾಘನೀಯ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಇಳಿ ವಯಸ್ಸಿನಲ್ಲಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಹಿರಿಯರ ಮನಸ್ಸು ತುಡಿದರೂ ದೈಹಿಕ ಸಾಮರ್ಥ್ಯದಿಂದ ಅದು ಅಸಾಧ್ಯ ಎಂಬ ಭಾವನೆ ಮೂಡುವುದು ಇದೆ. ಈ ಸಂದರ್ಭದಲ್ಲಿ ಅಂತಹ ಆಸಕ್ತರಲ್ಲಿ ಪ್ರೋತ್ಸಾಹ, ಹುರುಪು ತುಂಬುವ ನಿಟ್ಟಿನಲ್ಲಿ ಹಿರಿಯರ ಕ್ರೀಡಾಕೂಟ ಆಯೋಜಿಸುತ್ತಿರುವುದು ಶ್ಲಾಘನೀಯ
ಎಂದು ಹೇಳಿದರು.
Related Articles
ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ವೈ. ಶಿವರಾಮಯ್ಯ ಮಾತನಾಡಿ, ಮಾನಸಿಕ, ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದು ಎಲ್ಲರ ಇಚ್ಛೆ. ಇಂತಹ ಕ್ರೀಡಾಕೂಟ ಅದಕ್ಕೂಂದು ಉತ್ತಮ ವೇದಿಕೆ ಎಂದರು. ರಾ.ಹಿರಿಯರ ಕ್ರೀಡಾ ಸಂಘದ ಪ್ರಧಾನ ಕಾರ್ಯದರ್ಶಿ ಜೆರಾಲ್ಡ್ ಡಿ’ಸೋಜಾ ಮಾತನಾಡಿ, ಹಿರಿಯರ ಕ್ರೀಡಾಕೂಟಕ್ಕೆ ಪ್ರೋತ್ಸಾಹದ ಅಗತ್ಯವಿದೆ. ಸಂಘಟಕರು ಮನೆ ಮನೆ ಭೇಟಿ ನೀಡಿ ಹಿರಿಯರನ್ನು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಪ್ರಯತ್ನ ನಿರಂತರವಾಗಿ ಸಾಗಬೇಕು ಎಂದರು.
Advertisement
ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಯ ಸಂಚಾಲಕ ಕೆ. ಸೀತಾರಾಮ ರೈ ಸವಣೂರು, ರೋಟರಿ ಕ್ಲಬ್ ಅಧ್ಯಕ್ಷ ಎ.ಜೆ. ರೈ, ಜಿಲ್ಲಾ ಹಿರಿಯರ ಕ್ರೀಡಾ ಸಂಘದ ಅಧ್ಯಕ್ಷ ಕೋದಂಡರಾಮೇಗೌಡ, ಕಾರ್ಯದರ್ಶಿ ಜೆ. ಆನಂದ ಸೋನ್ಸ್, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಕೊಂಬೆಟ್ಟು ಸರಕಾರಿ ಶಾಲಾ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಜೋಕಿಂ ಡಿ’ಸೋಜಾ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ಸೂಡಿಮುಳ್ಳು, ಪಡೀಲು ಚೈತನ್ಯ ಮಿತ್ರವೃಂದ ಅಧ್ಯಕ್ಷ ರಮೇಶ್, ಗುತ್ತಿಗೆದಾರ ಆನಂದ ಕುಲಾಲ್ ಕೇಪುಳು, ಜಿಲ್ಲಾ ಹಿರಿಯರ ಕ್ರೀಡಾಕೂಟ ಸಂಘಟನ ಸಮಿತಿ ಅಧ್ಯಕ್ಷ ಮಾಧವ ಬಿ.ಕೆ. ಉಪಸ್ಥಿತರಿದ್ದರು.
ತಾ| ಹಿರಿಯರ ಕ್ರೀಡಾ ಸಂಘದ ಕಾರ್ಯದರ್ಶಿ ಗಿರಿಶಂಕರ ಸುಲಾಯ ಸ್ವಾಗತಿ ಸಿದರು. ಜಿಲ್ಲಾ ಹಿರಿಯರ ಕ್ರೀಡಾ ಕೂಟ ಸಂಘಟನ ಸಮಿತಿ ಉಪಾಧ್ಯಕ್ಷ ಮಾಮಚ್ಚನ್ ಎಂ. ವಂದಿಸಿದರು. ಮುಂಜಾನೆ ನಡೆದ 5 ಕಿ.ಮೀ. ನಡಿಗೆ, 5 ಸಾವಿರ ಮೀ. ಓಟದಲ್ಲಿ ಹಿರಿಯ ಕ್ರೀಡಾಪಟು ನಾರಾಯಣ ಭಟ್ ಸುಳ್ಯ ಅವರು ಪ್ರಥಮ ಸ್ಥಾನ ಪಡೆದುಕೊಂಡರು. ಕ್ರೀಡಾಕೂಟಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಯುವಜನ ಒಕ್ಕೂಟ, ಪಡೀಲು ಚೈತನ್ಯ ಮಿತ್ರವೃಂದ, ಕೊಂಬೆಟ್ಟು ಸ.ಪ.ಪೂ ಕಾಲೇಜು, ಸವಣೂರು ಯುವಕ ಮಂಡಲ ಹಾಗೂ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಹಕಾರ ನೀಡಿತ್ತು.
14 ಕೋ. ರೂ. ಅಂದಾಜು ಪಟ್ಟಿ ಕೊಂಬೆಟ್ಟು ತಾ| ಕ್ರೀಡಾಂಗಣವನ್ನು ಸಿಂಥೆಟಿಕ್ ಟ್ರಾಫಿಕ್ ಸಹಿತ ಸುಸಜ್ಜಿತ ಕ್ರೀಡಾಂಗಣವಾಗಿ ಅಭಿವೃದ್ಧಿ ಪಡಿಸಲು 14 ಕೋ.ರೂ. ಅಂದಾಜು ಪಟ್ಟಿ ಯನ್ನು ಸರಕಾರಕ್ಕೆ ಕಳುಹಿಸಲಾಗಿದೆ. ಸಿಂಥೆಟಿಕ್ ಟ್ರ್ಯಾಕ್‌ಗೆ 3 ಕೋ. ರೂ. ಅನುದಾನ ಮೀಸಲಿರಿಸಲಾಗಿದೆ. ಈಗಾಗಲೇ ಪ್ರಥಮ ಹಂತದ 60 ಲಕ್ಷ ರೂ. ಬಿಡುಗಡೆಯಾ ಗಿದೆ. ಟೆಂಡರ್ ಪ್ರಕ್ರಿಯೆ ಹಂತದ ಲ್ಲಿದೆ. ಮುಂದಿನ ಜನವರಿ ಒಳಗೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.