Advertisement

Puttur ಬುದ್ಧಿಮಾಂದ್ಯ ಯುವಕನಿಂದ ಅಡ್ಡಾದಿಡ್ಡಿ ಕಾರು ಚಾಲನೆ: ನಾಲ್ಕೈದು ವಾಹನಗಳಿಗೆ ಢಿಕ್ಕಿ

12:20 AM May 13, 2024 | Team Udayavani |

ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪ್ಯದಲ್ಲಿ ನಿಲ್ಲಿಸಿದ್ದ ಕಾರನ್ನು ಬುದ್ಧಿಮಾಂದ್ಯ ಯುವಕನೋರ್ವ ಚಲಾಯಿಸಿಕೊಂಡು ಬಂದು ನಾಲ್ಕೈದು ವಾಹನಗಳಿಗೆ ಢಿಕ್ಕಿ ಹೊಡೆಸಿದ್ದಾನೆ.

Advertisement

ಕುಂಬ್ರ ಸೇತುವೆಯ ಬಳಿ ಇತರ ಕೆಲವು ವಾಹನ ಚಾಲಕರು ಆತನನ್ನು ಹಿಡಿದು ಪೊಲೀಸರಿಗೊಪ್ಪಿಸುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದರು.

ಯುವಕನೋರ್ವ ಕೈಯಲ್ಲಿ ಕೋಲು ಹಿಡಿದು ಸಂಪ್ಯದ ರಸ್ತೆ ಬದಿಯಲ್ಲಿ ಸುತ್ತಾಡುತ್ತಿದ್ದ. ಸಂಜೆ ವೇಳೆ ಈತ ನಿಲ್ಲಿಸಿದ್ದ ಕಾರನ್ನು ಚಲಾಯಿಸಿಕೊಂಡು ಬಂದಿದ್ದಾನೆ.

ಮೇ 11ರಂದು ಪೊಲೀಸರು ಕರೆದೊಯ್ದಿದ್ದರು!
ಇದೇ ಯುವಕ ಮೇ 11ರಂದು ಬೆಳಗ್ಗೆ ಕುಂಬ್ರದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಮಾಡುತ್ತಿದ್ದುದಲ್ಲದೆ, ಕೈಯಲ್ಲಿ ಕೋಲು ಹಿಡಿದು ರಸ್ತೆಯಲ್ಲಿ ತೆರಳುತ್ತಿದ್ದ ಸಾರ್ವಜನಿಕರನ್ನು ಬೆದರಿಸುತ್ತಿದ್ದ. ಬಳಿಕ ಸಾರ್ವಜನಿಕರು 112ಕ್ಕೆ ಕರೆ ಮಾಡಿದ್ದು ಪೊಲೀಸರು ಆತನನ್ನು ವಶಕ್ಕೆ ಪಡೆದು ಕಾರಲ್ಲಿ ಕೂರಿಸಿ ಕರೆದುಕೊಂಡು ಹೋಗಿದ್ದರು. ಪೊಲೀಸರು ಸಂಟ್ಯಾರ್‌ ಬಳಿ ಕಾರಿನಿಂದ ಇಳಿಸಿದ್ದರು. ಆ ಬಳಿಕ ಅಲ್ಲಿಂದ ದೊಣ್ಣೆಯೊಂದನ್ನು ತೆಗೆದುಕೊಂಡು ಆತ ಮತ್ತೆ ಅದೇ ರೀತಿ ವರ್ತಿಸುತ್ತಿದ್ದ.

ಕೋವಿ ಹಿಡಿದು ಬೆದರಿಸಿದ್ದ!
ಈತ ಚಲಾಯಿಸಿಕೊಂಡು ಬಂದ ಕಾರಿನಲ್ಲಿ ಕೋವಿ ಇತ್ತು. ಮೊದಲಿಗೆ ಅದನ್ನು ಹಿಡಿದು ಆತ ಬೆದರಿಸಿದ್ದ. ಗಾಂಜಾ ವ್ಯಸನಿಯಂತೆ ಕಾಣುತ್ತಿದ್ದ ಈತ ಎಲ್ಲಿಯವನು ಎಂಬುದು ತಿಳಿದು ಬಂದಿಲ್ಲ. ಹಿಂದಿ ಮತ್ತು ಮಲಯಾಳಂ ಮಾತನಾಡುತ್ತಿದ್ದ. ಈತ ಚಲಾಯಿಸಿಕೊಂಡು ಹೋಗಿದ್ದ ಕಾರು ಗೋವರ್ಧನ ಹೆಗ್ಡೆ ಎಂಬವರಿಗೆ ಸೇರಿದ್ದಾಗಿದೆ. ಇವರು ಕಾರಿನಲ್ಲೇ ಕೀ ಇರಿಸಿ ಸಮೀಪದ ಅಂಗಡಿಗೆ ಹೋಗಿದ್ದಾಗ ಯುವಕನು ಕಾರನ್ನು ಚಲಾಯಿಸಿಕೊಂಡು ಹೋಗಿದ್ದ ಎಂದು ಹೇಳಲಾಗಿದೆ. ಆರೋಪಿ ವಿರುದ್ಧ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next