Advertisement

ಪುತ್ತೂರು : 20 ವರ್ಷದ ಹಿಂದೆ ಗೂಡಂಗಡಿಯಲ್ಲಿ ದಿನಸಿ ಕಳವು ಪ್ರಕರಣ : ಐಟಿ ಉದ್ಯೋಗಿ ಬಂಧನ

08:38 PM May 30, 2022 | Team Udayavani |

ಪುತ್ತೂರು : ಇಪ್ಪತ್ತು ವರ್ಷಗಳ ಹಿಂದೆ ಪಡೀಲು ಗೂಡಂಗಡಿಯಲ್ಲಿ ದಿನಸಿ ಸಾಮಗ್ರಿ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಐಟಿ ಉದ್ಯೋಗಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.

Advertisement

ನೆಹರುನಗರ ಸ್ವಾಮಿ ಕಾಂಪೌಂಡ್‌ನ‌ ಚೆನ್ನಕೇಶವ ಯಾನೆ ಸೂರ್ಯರಾಜ್‌ ಬಂಧಿತ ಆರೋಪಿ. ಚೆನ್ನಕೇಶವ ಅವರು ಪ್ರಸ್ತುತ ತಮಿಳುನಾಡು ರಾಜ್ಯದ ತಿರುನಾಳ್‌ ವೆಲ್ಲಿ ಜಿಲ್ಲೆಯ ಮರ್ಫಿನಗರದಲ್ಲಿ ಐಟಿ ಉದ್ಯೋಗಿಯಾಗಿದ್ದರು.

ಪುತ್ತೂರು ಪಡೀಲ್‌ನಲ್ಲಿರುವ ಕುದ್ಮಾರು ನಿವಾಸಿ ವಸಂತ ಗೌಡ ಅವರ ಗೂಡಂಗಡಿಯಿಂದ 2002ರ ಜೂ. 10ರಂದು ದಿನಸಿ ಸಾಮಾಗ್ರಿಗಳು ಮತ್ತು 1500 ರೂ. ಕಳವು ನಡೆದಿತ್ತು. ಈ ಕುರಿತು ಪೊಲೀಸರು ತನಿಖೆ ನಡೆಸಿ ನಾಲ್ವರು ಯುವಕರನ್ನು ಬಂಧಿಸಿದ್ದರು. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ವಿಚಾರಣೆ ವೇಳೆ ನ್ಯಾಯಾಧೀಶರು ಮೂವರು ಆರೋಪಿಗಳನ್ನು ದೋಷಮುಕ್ತರಾಗಿ ತೀರ್ಪು ನೀಡಿದ್ದರು. ಆರೋಪಿ ಚೆನ್ನಕೇಶವ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಹಾಗಾಗಿ ನ್ಯಾಯಾಲಯ ಆತನ ವಿರುದ್ಧ ಬಂಧನ ವಾರಂಟ್‌ ಜಾರಿ ಮಾಡಿತ್ತು. ಮೇ 28ರಂದು ಹೆಡ್‌ ಕಾನ್‌ಸ್ಟೆಬಲ್‌ ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸಿ ಮೇ 30ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇದನ್ನೂ ಓದಿ : ಸರ್ಕಾರಿ ನೌಕರರ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಶೀಘ್ರ ಚಾಲನೆ : ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next