Advertisement

ಪುತ್ತೂರು ಕಾಂಗ್ರೆಸ್‌ ಸಮಾವೇಶ: “ಸರಕಾರದ ಆಡಳಿತಕ್ಕೆ ಮೆಚ್ಚುಗೆ’

12:15 AM Jul 16, 2017 | Team Udayavani |

ಪುತ್ತೂರು : ಕಾಂಗ್ರೆಸ್‌ ಪಕ್ಷ ಸಂವಿಧಾನ, ಕಾನೂನಿಗೆ ಗೌರವಿಸುವ ಪಕ್ಷ. ಸಿದ್ದರಾಮಯ್ಯ ಸರಕಾರದ ಜನಪರ ಆಡಳಿತವನ್ನು ಜನರು ಮೆಚ್ಚಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ, ಕಾಂಗ್ರೆಸ್‌ ಮೈಸೂರು ವಿಭಾಗ ಮಟ್ಟದ ಉಸ್ತುವಾರಿ ವಿಷ್ಣುನಾಥನ್‌ ಸವಾಲು ಹಾಕಿದ್ದಾರೆ.

Advertisement

ಪುತ್ತೂರಿನ ಸುಭದ್ರಾ ಸಭಾಭವನದಲ್ಲಿ ಶನಿವಾರ ನಡೆದ ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರ ಸಮಾ ವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಸಿದ್ದರಾಮಯ್ಯ ಅವರ ಸರಕಾರ ದೇಶಕ್ಕೇ ಮಾದರಿ ಆಡಳಿತವನ್ನು ತೋರಿ ಸಿದೆ. ಬಿಜೆಪಿಯ ಹಿಂದಿನ ಸರಕಾರ 3 ಮುಖ್ಯಮಂತ್ರಿಗಳನ್ನು ಬದಲಾಯಿಸಿದರೆ ಸಿದ್ದರಾಮಯ್ಯ ಒಬ್ಬರೇ ತಮ್ಮ ಐದು ವರ್ಷಗಳ ಅವಧಿಯನ್ನು ಯಶಸ್ವಿಯಾಗಿ ಪೂರೈಸುತ್ತಿದ್ದಾರೆ ಎಂದರು. 

ಬೂತ್‌ ಮಟ್ಟದಿಂದ ಸಂಘಟನೆ
ಪಕ್ಷ ಸಂಘಟನೆಯ ಕುರಿತಂತೆ ಕಾರ್ಯ ಕರ್ತರಿಗೆ ಕಿವಿಮಾತು ಹೇಳಿದ ಅವರು, ಒಂದು ಬೂತಿಗೆ ಒಬ್ಬ ಲೀಡರ್‌ ಪರಿಕಲ್ಪನೆ ಯನ್ನು ಅಳವಡಿಸಿಕೊಳ್ಳಬೇಕು. ಹುದ್ದೆಗೆ ಹೊಂದಿಕೊಂಡು ಕೆಲಸ ಮಾಡುವುದನ್ನು ನಿಲ್ಲಿಸಬೇಕು. ಸಂಘಟನೆಯ ಮೂಲವಾದ ಬೂತ್‌ ಮಟ್ಟದಲ್ಲಿ ಸಂಘಟಿತ ಪ್ರಯತ್ನ ಅಗತ್ಯವಾಗಿ ನಡೆಯಬೇಕು. ಆ ಮೂಲಕ ಮುಂದಿನ ಅವಧಿಗೂ ಕಾಂಗ್ರೆಸ್‌ ಸರಕಾರವನ್ನು ಅಧಿಕ ಸ್ಥಾನಗಳ ಮೂಲಕ ಗೆಲ್ಲಿಸಬೇಕು ಎಂದು ವಿನಂತಿಸಿದರು.

ಜನಪರ ಆಡಳಿತ
ಮುಖ್ಯ ಅತಿಥಿಯಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, 1980ರ ಬಳಿಕ ರಾಜ್ಯದಲ್ಲಿ ಒಮ್ಮೆ ಆಡಳಿತ ನಡೆಸಿದವರು ಮುಂದಿನ ಅವಧಿಗೆ ಅಧಿಕಾರ ನಡೆಸಲು ಸಾಧ್ಯವಾಗಿಲ್ಲ. ಆದರೆ ಕಾಂಗ್ರೆಸ್‌ ಸರಕಾರ ಜನಪರ ಆಡಳಿತದ ಮೂಲಕ ಜನರ ಮೆಚ್ಚುಗೆ ಗಳಿಸಿದ್ದು, ಬಿಜೆಪಿಯವರು ಕಾಂಗ್ರೆಸ್‌ನ್ನು ದೂರಲು ವಿಷಯ ಹುಡುಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಇನ್ನೂ 20 ವರ್ಷ ಕಾಂಗ್ರೆಸ್‌ ಪಕ್ಷವೇ ಆಡಳಿತ ನಡೆಸಲಿದೆ ಎಂದರು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಮಾತ ನಾಡಿ, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸಾಂದ ರ್ಭಿಕವಾಗಿ ಮಾತನಾಡಿದರು.

Advertisement

ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ಕೆಪಿಸಿಸಿ ಕೋಶಾಧಿಕಾರಿ ಕಿಶನ್‌ರಾಜ್‌, ಕಾಂಗ್ರೆಸ್‌ ಜಿಲ್ಲಾ ಕಿಸಾನ್‌ ಘಟಕದ ಉಮಾನಾಥ ಶೆಟ್ಟಿ, ಕೆಪಿಸಿಸಿ ನೂತನ ಕಾರ್ಯದರ್ಶಿ ಎಂ.ಎಸ್‌. ಮಹಮ್ಮದ್‌, ಕೆಪಿಸಿಸಿ ಕಾನೂನು ವಿಭಾಗದ ನವೀನ್‌ ಭಂಡಾರಿ, ಜಿಲ್ಲಾ ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ, ವಿಟ್ಲ -ಉಪ್ಪಿನಂಗಡಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ, ವಿವಿಧ ವಿಭಾಗಗಳ ಪ್ರಮುಖರಾದ ನಿರ್ಮಲ್‌ ಕುಮಾರ್‌ ಜೈನ್‌, ಮಹೇಶ್‌ ಅಂಕೋತ್ತಿಮಾರ್‌, ನೂರುದ್ದೀನ್‌ ಸಾಲ್ಮರ, ಹೊನ್ನಪ್ಪ ಪೂಜಾರಿ, ಜೋಕಿಂ ಡಿಸೋಜ, ಪ್ರಸಾದ್‌ ಕೌಶಲ್‌ ಶೆಟ್ಟಿ, ವಿಶಾಲಾಕ್ಷಿ ಬನ್ನೂರು, ಯು.ಟಿ. ತೌಸಿಫ್‌, ಭಾಸ್ಕರ ಕೋಡಿಂಬಳ, ಶೇಖರ್‌ ಕುಕ್ಕೇಟಿ, ವಿಲ್ಮಾ ಡಿ’ಸೋಜಾ, ಜಯರಾಮ ರೈ ಉಪಸ್ಥಿತರಿದ್ದರು. ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಫಝುÉಲ್‌ ರಹೀಂ ಸ್ವಾಗತಿಸಿ, ಕಾರ್ಯದರ್ಶಿ ಕೃಷ್ಣಪ್ರಸಾದ್‌ ಆಳ್ವ ವಂದಿಸಿದರು. ಮಹಮ್ಮದ್‌ ಬಡಗನ್ನೂರು ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next