Advertisement
ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಾಗಿ ದಯಾನಂದ ಶೆಟ್ಟಿ ಉಜಿರೆಮಾರು, ಪ್ರಧಾನ ಕಾರ್ರ್ಯದರ್ಶಿಗಳಾಗಿ ಉಮೇಶ್ ಗೌಡ, ಪ್ರಶಾಂತ ನೆಕ್ಕಿಲಾಜೆ, ಪುತ್ತೂರು ನಗರ ಮಂಡಲದ ಅಧ್ಯಕ್ಷರಾಗಿ ಶಿವಕುಮಾರ್ ಕಲ್ಲಿಮಾರ್, ಪ್ರಧಾನ ಕಾರ್ಯದರ್ಶಿಗಳಾಗಿ ನಾಗೇಶ್ ಪ್ರಭು, ಅನಿಲ್ ತೆಂಕಿಲ ಅವರನ್ನು ನೇಮಕ ಮಾಡಲಾಗಿದೆ. ಎರಡೂ ಮಂಡಲದಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡು ಅನಂತರ ಬಿಜೆಪಿಗೆ ಸೇರ್ಪಡೆಯಾಗಿದ್ದ ಮುಖಂಡರಿಗೆ ನೀಡಲಾಗಿದೆ. ತನ್ಮೂಲಕ ಎರಡೂ ಬಣವನ್ನು ಒಂದಾಗಿ ಕೊಂಡೊಯ್ಯಲು ಹೈಕಮಾಂಡ್ ತಂತ್ರ ರೂಪಿಸಿರುವುದು ಸ್ಪಷ್ಟವಾಗಿದೆ. ಇದರ ಜತೆಗೆ ಪುತ್ತಿಲ ಪರಿವಾರದಲ್ಲಿ ಮುಂಚೂಣಿ ನಾಯಕರಾಗಿದ್ದ ಪುತ್ತಿಲ ಪರಿವಾರದ ಅಧ್ಯಕ್ಷರಾಗಿದ್ದ ಪ್ರಸನ್ನ ಮಾರ್ಥ ಅವರನ್ನು ದ.ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷರನ್ನಾಗಿ ನಿಯಕ್ತಿಗೊಳಿಸಲಾಗಿದೆ.
ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷೇತರವಾಗಿ ಸ್ಪರ್ದಿಸಿದ್ದ ಅರುಣ್ ಪುತ್ತಿಲ ಅವರು ರಾಜ್ಯಮಟ್ಟದ ನಾಯಕರ ಸಂಧಾನದ ಫಲವಾಗಿ ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಮರಳಿ ಬಿಜೆಪಿ ಸೇರಿದ್ದರು. ಪಕ್ಷಕ್ಕೆ ಸೇರ್ಪಡೆ ಸಂದರ್ಭದಲ್ಲಿ ಮಂಡಲ ಅಧ್ಯಕ್ಷತೆಯ ಬೇಡಿಕೆಯನ್ನು ಇರಿಸಲಾಗಿತ್ತುಆರಂಭದಲ್ಲಿ ಅರುಣ್ ಅವರಿಗೆ ಜಿಲ್ಲಾಧ್ಯಕ್ಷತೆ ನೀಡುವಂತೆ ಪುತ್ತಿಲ ಬೆಂಬಲಿಗರು ಪಟ್ಟು ಹಿಡಿದಿದ್ದರು. ಪಕ್ಷವು ಪಾಧ್ಯಕ್ಷತೆಯ ಆಫರ್ ನೀಡಿತ್ತು. ಇದನ್ನು ಪುತ್ತಿಲ ಬೆಂಬಲಿಗರು ತಿರಸ್ಕರಿಸಿದ್ದರು. ಲೋಕಸಭಾ ಚುನಾವಣೆ ಬಳಿಕ ಅರುಣ್ ಅವರಿಗೆ ಮಂಡಲ ಅಧ್ಯಕ್ಷತೆ ದೊರೆಯುವ ಮಾತು ಕೇಳಿ ಬಂದಿತ್ತು. ಪರ ವಿರೋಧದ ಗೊಂದಲದಿಂದ ಆಯ್ಕೆ ಪ್ರಕ್ರಿಯೆಯು ಅರ್ಧದಲ್ಲೇ ಬಾಕಿಯಾಗಿತ್ತು. ಜು.17 ರಂದು ನಡೆದ ಮಂಡಲ ಅಧ್ಯಕ್ಷರ ಅಪೇಕ್ಷಿತರ ಸಭೆಯಲ್ಲಿ ಅಧ್ಯಕ್ಷತೆ ಸ್ಥಾನಕ್ಕೆ ಅರುಣ್ ಪುತ್ತಿಲ ಅವರ ಹೆಸರನ್ನು ಯಾರೂ ಸೂಚಿಸಿರಲಿಲ್ಲ. ಹೀಗಾಗಿ ಪುತ್ತಿಲ ಬದಲಾಗಿ ಬೇರೆಯವರಿಗೆ ಅವಕಾಶ ನೀಡುವುದು ನಿಶ್ಚಿತವಾಗಿತ್ತು. ಇದನ್ನೂ ಓದಿ: Gadaga: ಸೊಸೆ ಮಾಡಿದ ಮೋಸಕ್ಕೆ ಬೀದಿಗೆ ಬಂದ ಬದುಕು… ದಯಾಮರಣ ಕೋರಿ ಅರ್ಜಿ