Advertisement

Puttur: ತಮ್ಮನ ಹ*ತ್ಯೆ ಆರೋಪಿಗೆ ಜಾಮೀನು

08:14 PM Nov 05, 2024 | Team Udayavani |

ಪುತ್ತೂರು: ಎರಡು ವರ್ಷಗಳ ಹಿಂದೆ ಹಣಕಾಸಿನ ವಿಚಾರದಲ್ಲಿ ನಡೆದ ಜಗಳದಲ್ಲಿ ತಮ್ಮನನ್ನೇ ಕಬ್ಬಿಣದ ಸಲಾಕೆಯಿಂದ ಹೊಡೆ‌ದು ಕೊಲೆ ಮಾಡಿದ್ದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಹಾವೇರಿ ಮೂಲದ ವ್ಯಕ್ತಿಗೆ ಪುತ್ತೂರು ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

Advertisement

ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ನ್ಯೂಲೈಫ್‌ ಫೆಲೋಶಿಪ್‌ ಚರ್ಚ್‌ ಸಮೀಪ ಘಟನೆ ನಡೆದಿತ್ತು. ಹಾವೇರಿ ಮೂಲದ ರಮೇಶ, ಶೇಖರಯ್ಯ, ಲಿಂಗಪ್ಪ, ಮಹದೇವ ಮತ್ತು ವಿರೂಪಾಕ್ಷ ಅವರು ಸೂರಜ್‌ ಅವರ ಬಾಬ್ತು ಸ್ಥಳೀಯ ಸೈಟ್‌ನಲ್ಲಿ ಗಾರೆ ಕೆಲಸ ಮಾಡಿಕೊಂಡು ಅಲ್ಲೇ ಶೆಡ್‌ನ‌ಲ್ಲಿ ಉಳಿದುಕೊಳ್ಳುತ್ತಿದ್ದರು. ರಾತ್ರಿ ವೇಳೆ ನಿಂಗಪ್ಪ ಗೌಡ ಮತ್ತು ಆತನ ತಮ್ಮ ಮಹದೇವರೊಳಗೆ ಹಣಕಾಸಿನ ವಿಚಾರದಲ್ಲಿ ಮಾತಿಗೆ ಮಾತು ಬೆಳೆದಿತ್ತು. ಕೋಪಗೊಂಡ ನಿಂಗಪ್ಪನು ತಮ್ಮ ಮಹದೇವನ ತಲೆಯ ಹಿಂಬದಿ ಹಾಗೂ ದೇಹದ ಇತರ ಭಾಗಗಳಿಗೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿದ ಪರಿಣಾಮ ಸಾವಿಗೀಡಾಗಿದ್ದರು.

ಘಟನೆ ಕುರಿತು ರಮೇಶ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡ ಪುತ್ತೂರು ನಗರ ಪೊಲೀಸರು ಆರೋಪಿ ನಿಂಗಪ್ಪ ಗೌಡ ಬಾಂಗೈಗೌಡರ ಯಾನೆ ಲಿಂಗಪ್ಪನನ್ನು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next