Advertisement
ಮನೆ ಪ್ರಚಾರ ಆರಂಭಈಶ್ವರಮಂಗಲ, ಸುಳ್ಯಪದವು, ಗಾಳಿಮುಖ, ಪಾಣಾಜೆ, ಆರ್ಲಪದವು ಮೊದಲಾದ ಕಡೆಗಳಲ್ಲಿ ಒಂದು ಹಂತದ ಬಹಿರಂಗ ಸಭೆಗಳನ್ನು ಎರಡು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ನಡೆಸಿದ್ದಾರೆ. ಮನೆ ಮನೆ ಪ್ರಚಾರ ಕಾರ್ಯ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳ ಮೂಲಕ ನಡೆದಿದೆ. ಪಕ್ಷೇತರ ಅಭ್ಯರ್ಥಿಗಳು ಕಾಲಿಟ್ಟಿಲ್ಲ.
ಗಡಿ ಭಾಗಗಳ ಜನತೆಯಲ್ಲಿ ರಸ್ತೆಯೇ ಚರ್ಚೆಯ ಮುಖ್ಯ ವಸ್ತು. ಗಡಿ ಭಾಗದ ರಸ್ತೆಗಳು ಎಂದಿಗೂ ಪರಿಪೂರ್ಣ ಅಭಿವೃದ್ಧಿಯಾಗುವುದಿಲ್ಲ ಎಂಬುದೇ ಕಾರಣ. ಪಾಣಾಜೆ, ಈಶ್ವರಮಂಗಲ, ಸುಳ್ಯಪದವು ಕಡೆ ಇದೇ ಹೆಚ್ಚಾಗಿ ಕಾಣಿಸಿತು. ಸದ್ಯಕ್ಕೆ ಪಾಣಾಜೆ ಭಾಗದಲ್ಲಿ ಕರ್ನಾಟಕಕ್ಕೆ ಸೇರಿದ ರಸ್ತೆ ಉತ್ತಮವಿದೆ. ಆದರೆ ಕೇರಳ ಭಾಗದ ವಾಣಿನಗರ, ಪೆರ್ಲ ಭಾಗದಲ್ಲಿ ರಸ್ತೆ ಜೀರ್ಣಾವಸ್ಥೆಯಲ್ಲಿದೆ. ಈಶ್ವರಮಂಗಲ, ಸುಳ್ಯ ಪದವು ಭಾಗದಲ್ಲಿ ಹಲವು ವರ್ಷಗಳ ರಸ್ತೆ ಸಮಸ್ಯೆ ಇನ್ನೂ ಮುಕ್ತಿ ಕಂಡಿಲ್ಲ. ಗಾಳಿಮುಖ, ದೇಲಂಪಾಡಿ ಭಾಗಕ್ಕೆ, ಸುಳ್ಯದವಿನಿಂದ ಕಾಯರ್‌ಪದವು, ಬೆಳ್ಳೂರು, ಮುಳ್ಳೇರಿಯಾ ಸಂಪರ್ಕ ರಸ್ತೆ ಸಮಸ್ಯೆ ಬಗೆಹರಿದಿಲ್ಲ. ಬಸ್ಸು ನಿಂತಿದೆ
ಹಿಂದೆ ಕೇರಳ ಭಾಗದ ರಸ್ತೆಗಳು ಹೆಚ್ಚು ಅಭಿವೃದ್ಧಿಯಾಗುತ್ತಿದ್ದವು. ಉತ್ತಮ ರಸ್ತೆಯ ಕಾರಣದಿಂದ ಈ ಭಾಗದ ಜನತೆ ಕೇರಳಕ್ಕೆ ತಮ್ಮ ಆವಶ್ಯಕತೆಗಳಿಗಾಗಿ ತೆರಳುತ್ತಿದ್ದರು. ಆದರೆ ಈಗ ಅಲ್ಲಿನ ರಸ್ತೆಗಳಿಗಿಂತ ಕರ್ನಾಟಕದ ರಸ್ತೆಗಳೇ ಪರವಾಗಿಲ್ಲ. ಅಂತಾರಾಜ್ಯ ಸಂಪರ್ಕ ರಸ್ತೆ ಆದ್ದರಿಂದ ಎರಡೂ ಭಾಗಗಳ ರಸ್ತೆ ಅಭಿವೃದ್ಧಿ ಅಗತ್ಯ ಎನ್ನುವುದು ಆರ್ಲಪದವು ನಿವಾಸಿ ಗೃಹಿಣಿ ವಾಣಿ ಅವರ ಅಭಿಪ್ರಾಯ. ಈಶ್ವರಮಂಗಲ, ಪದಡ್ಕ, ಗಾಳಿಮುಖ ಭಾಗಗಳಲ್ಲಿ ರಸ್ತೆ ಸಮಸ್ಯೆ ನಿವಾರಿಸಲು ಮನಸ್ಸು ಮಾಡಿಲ್ಲ ಎನ್ನುವುದು ನೆಟ್ಟಣಿಗೆ ಮುಟ್ನೂರು ಗ್ರಾಮದ ಮಹಮ್ಮದ್ ಕುಂಞಿ ಅವರ ಅಭಿಪ್ರಾಯ.
Related Articles
ಗಡಿಭಾಗಗಳಲ್ಲಿ ಮದ್ಯದ ವಿಚಾರವೂ ಪ್ರಮುಖ. ಕೇರಳದಲ್ಲಿ ಮದ್ಯ ನಿಷೇಧ ಮಾಡಿರುವುದರಿಂದ ಕರ್ನಾಟಕ ಗಡಿ ಭಾಗಗಳ ಬಾರ್ ಮತ್ತು ವೈನ್‌ಶಾಪ್‌ಗ್ಳಿಂದ ಅಧಿಕ ಪ್ರಮಾಣದಲ್ಲಿ ಗಡಿ ಭಾಗದ ಆಚೆ ಕೇರಳಕ್ಕೆ ಮದ್ಯ ಸಾಗಾಟ ನಡೆಯುತ್ತಿತ್ತು. ಆದರೆ ಪ್ರಸ್ತುತ ಕರ್ನಾಟಕ ಭಾಗದ ಬಾರ್, ವೈನ್‌ಶಾಪ್‌ಗ್ಳಲ್ಲೂ ಬೇಕಾದಷ್ಟು ಪ್ರಮಾಣದ ಮದ್ಯ ಸಿಗುತ್ತಿಲ್ಲ. ಸಿಕ್ಕರೂ ಗಡಿ ಭಾಗದಲ್ಲಿ ಬಿಗಿ ಬಂದೋಬಸ್ತ್ ಇರುವುದರಿಂದ ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ. ಕೇರಳದ ವೈನ್‌ಶಾಪ್‌ಗ್ಳಿಂದ ರಾಜ್ಯಕ್ಕೆ ಮದ್ಯ ಕೊಂಡೊಯ್ಯಲು ಅವಕಾಶವಿದ್ದರೂ ಗಡಿ ಭಾಗದಲ್ಲಿ ಕಷ್ಟ ಸಾಧ್ಯ.
Advertisement
ಅಕ್ರಮ ಸ್ಥಗಿತ ಸಾಮಾನ್ಯವಾಗಿ ಗಡಿಭಾಗದಲ್ಲಿ ಓಡಾಟ ಹೆಚ್ಚಾಗಿರುತ್ತದೆ. ವಿವಿಧ ರೀತಿಯಲ್ಲಿ ಅಕ್ರಮ ವ್ಯವಹಾರಗಳು ಇಲ್ಲಿ ನಿರಂತರ ನಡೆಯುತ್ತವೆ. ಆದರೆ ಚುನಾವಣೆ ಬಂದ ಕೂಡಲೇ ಎಲ್ಲವೂ ಸ್ಥಗಿತಗೊಳ್ಳುತ್ತದೆ. ಈ ಬಾರಿಯೂ ಕಳೆದ 20 ದಿನಗಳಿಂದ ಗಡಿಯಲ್ಲಿ ಬಂದೋಬಸ್ತ್ ನಡೆಸಲಾಗಿದೆ. ವರ್ಷವಿಡೀ ಹೀಗೇ ಇರಬೇಕೆಂಬುದು ನಮ್ಮ ಆಶಯ.
– ಸುಕುಮಾರ ಶೆಟ್ಟಿ, ಪಾಣಾಜೆ ಬಂದಾಗ ಹೇಳುತ್ತೇವೆ
ಗಡಿಭಾಗದ ಈಶ್ವರಮಂಗಲ ವ್ಯಾಪಾರ ಕೇಂದ್ರವಾಗಿ ಬೆಳೆದು ಜನರನ್ನು ಸೆಳೆಯುತ್ತಿರುವುದರಿಂದ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಇಲ್ಲಿ ಬಹಿರಂಗ ಸಭೆಗಳನ್ನು ನಡೆಸುತ್ತಾರೆ. ಈ ಬಾರಿಯೂ ಒಂದು ಸುತ್ತಿನ ಪ್ರಚಾರ ಸಭೆಗಳು ನಡೆದಿವೆ. ಅಭ್ಯರ್ಥಿಗಳು ಬಂದಾಗ ಈ ಭಾಗದ ಸಮಸ್ಯೆಗಳನ್ನು ಹೇಳುತ್ತೇವೆ.
– ಗಿರಿಧರ, ಈಶ್ವರಮಂಗಲ
– ರಾಜೇಶ್ ಪಟ್ಟೆ