Advertisement

Puttur; ಅಕ್ಷಯ್‌ ಕೊಲೆ ಪ್ರಕರಣ: ಆರೋಪಿಯ ಸಹೋದರನ ಹತ್ಯೆಗೆ ಸಂಚು?

11:14 PM Feb 21, 2024 | Team Udayavani |

ಪುತ್ತೂರು: ನಗರದ ಹೊರ ವಲಯದ ಮುಕ್ರಂಪಾಡಿ ಜಂಕ್ಷನ್‌ನಲ್ಲಿ ಫೆ. 19ರಂದು ತಡರಾತ್ರಿ ಅನುಮಾನಾಸ್ಪದವಾಗಿ ನಿಂತಿದ್ದ ಕಾರಿನಲ್ಲಿ ತಲವಾರು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ನಾಲ್ವರು ಆರೋಪಿಗಳು, ಕಲ್ಲೇಗ ಅಕ್ಷಯ್‌ ಕೊಲೆ ಪ್ರಕರಣದ ಆರೋಪಿಯೋರ್ವನ ಸಹೋದರನನ್ನು ಕೊಲ್ಲಲು ಹವಣಿ ಸಿರುವ ಅಂಶ ಬೆಳಕಿಗೆ ಬಂದಿದೆ.

Advertisement

ಕಿಶೋರ್‌ ಪೂಜಾರಿ ಕಲ್ಲಡ್ಕ, ಮನೋಜ್‌, ಆಶಿಕ್‌ ಮತ್ತು ಸನತ್‌ ಕುಮಾರ್‌ ಬಂಧಿತರು. ಈ ಪೈಕಿ ಕಿಶೋರ್‌ ಪೂಜಾರಿಯು ಕೊಲೆ ಪ್ರಕರಣವೊಂದರಲ್ಲಿ ಜೈಲಿನಲಿದ್ದು, ಕೆಲವು ದಿನಗಳ ಹಿಂದೆಯಷ್ಟೇ ಜಾಮೀನಿ ನಲ್ಲಿ ಬಿಡುಗಡೆ ಗೊಂಡಿದ್ದ. ಆರೋಪಿ ಗಳು ಕೊಲೆ ಮಾಡುವ ಉದ್ದೇಶ  ದಿಂದ ಕಾರಿನಲ್ಲಿ ತಲವಾರು ಇರಿಸಿ ಕೊಂಡಿದ್ದರು ಎಂಬ ಅಂಶ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪ್ರಕರಣದ ಹಿನ್ನೆಲೆ
ಕಬಕ ಗ್ರಾಮದ ಕಲ್ಲೇಗ ನಿವಾಸಿ, ಕಲ್ಲೇಗ ಟೈಗರ್ಸ್‌ ಎಂಬ ಹುಲಿ ವೇಷ ಕುಣಿತ ತಂಡದ ನಾಯಕ ಅಕ್ಷಯ್‌ ಕಲ್ಲೇಗ (26)ನನ್ನು 2023ರ ನ.6ರಂದು ತಡರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿಗಳ ಪೈಕಿ ದಾರಂದಕುಕ್ಕು ನಿವಾಸಿಯೋರ್ವನ ಸಹೋದರನ ಕೊಲೆಗೆ ಕಿಶೋರ್‌ ಪೂಜಾರಿ ಗ್ಯಾಂಗ್‌ ಸಂಚು ರೂಪಿಸಿತ್ತು ಎನ್ನಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕೊಲೆ ಆರೋಪಿಗಳು
ಕಿಶೋರ್‌ ಪೂಜಾರಿ ಮತ್ತು ತಂಡ 2022ರಲ್ಲಿ ಪೆರ್ಲಂಪಾಡಿ ಬಳಿ ಕೊಲೆಯಾದ ಚರಣ್‌ರಾಜ್‌ ರೈ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದರು. ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿ 2022 ಜೂ.4ರಂದು ಚರಣ್‌ರಾಜ್‌ ರೈ ಎಂಬವರನ್ನು ಕೊಲೆ ಮಾಡಲಾಗಿತ್ತು. ಹಿಂಜಾವೇ ಕಾರ್ಯದರ್ಶಿ ಕಾರ್ತಿಕ್‌ ಸುವರ್ಣ ಮೇರ್ಲ ಹತ್ಯೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿದ್ದು ಈ ಪ್ರಕರಣದ ಪ್ರಮುಖ ಸೂತ್ರಧಾರಿ ಕಿಶೋರ್‌ ಪೂಜಾರಿ ಕಲ್ಲಡ್ಕ ಆಗಿದ್ದ. ಈ ಪ್ರಕರಣದಲ್ಲಿ ಈತ ಜೈಲಿನಲ್ಲಿದ್ದು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ.

ಹಿಂದೂ ಮುಖಂಡನಿಗೆ ಬೆದರಿಕೆ?
ಕಿಶೋರ್‌ ಪೂಜಾರಿ ಸಹಿತ ಆರೋಪಿ ಗಳು ಸೋಮವಾರ ಪುತ್ತೂರಿನ ಹಿಂದೂ ಸಂಘಟನೆಯ ಪ್ರಮುಖ ಮುಖಂಡ ನಿಗೂ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಬೆದರಿಕೆ ಒಡ್ಡಿರು  ವುದಾಗಿಯು ಸುದ್ದಿ ಹಬ್ಬಿದೆ. ಆದರೆ ಪೊಲೀಸ್‌ ಮೂಲಗಳು ಇದನ್ನು ದೃಢಪಡಿಸಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next