Advertisement
ನನಗಾದ ಅನ್ಯಾಯದ ವಿರುದ್ಧ ದೂರು ನೀಡಲು ಆ. 30ರಂದು ಪುತ್ತೂರು ನಗರ ಪೊಲೀಸ್ ಠಾಣೆಗೆ ಹೋದಾಗ ಅಲ್ಲಿನ ಅಧಿಕಾರಿ ಮತ್ತು ಸಿಬಂದಿ ನನ್ನ ದೂರನ್ನು ಸ್ವೀಕರಿಸದೆ ನನ್ನನ್ನು ಮೂರು ದಿನಗಳ ಕಾಲ ಕಾಯಿಸಿದ್ದರು ಎಂದಿದ್ದಾರೆ.ಆರೋಪಿ ಮತ್ತು ಆತನ ಕಡೆಯವರು ದೂರನ್ನು ನೀಡದಂತೆ ಮತ್ತು ಪ್ರಕರಣದಲ್ಲಿ ಸಾಕ್ಷಿ ನುಡಿಯದಂತೆ ನನಗೆ ಜೀವಬೆದರಿಕೆ ಹಾಕುತ್ತಿದ್ದಾರೆ ಎಂದೂ ದೂರಿನಲ್ಲಿ ಆರೋಪಿಸಲಾಗಿದೆ.