Advertisement

ಪುತ್ತೂರು: ಮಗುವಿಗೆ ಜನ್ಮ ನೀಡಿ ಒಂದು ದಿನದಲ್ಲೇ ಮೃತಪಟ್ಟ ತಾಯಿ

09:06 PM Jul 23, 2022 | Team Udayavani |

ಪುತ್ತೂರು : ಮಗುವಿಗೆ ಜನ್ಮ ನೀಡಿ ಒಂದು ದಿನದ ನಂತರ ತಾಯಿಯ ಆರೋಗ್ಯದಲ್ಲಿ ಏರುಪೇರಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಜು.23 ರಂದು ಸಂಭವಿಸಿದೆ.

Advertisement

ಪಡ್ನೂರು ಗ್ರಾಮದ ಪರಮಾರು ಮನೆಯ ಕೂಸಪ್ಪ ಗೌಡ ಅವರ ಪತ್ನಿ ಮೋನಮ್ಮ (36) ಮೃತ ಮಹಿಳೆ. ಎರಡನೇ ಮಗುವಿನ ಹೆರಿಗೆಗೆಂದು ಜು 21 ರಂದು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ. 22 ರಂದು ಸಂಜೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ರಾತ್ರಿ 10 ಗಂಟೆ ಸುಮಾರಿಗೆ ಬಾಣಂತಿ ಆರೋಗ್ಯದಲ್ಲಿ ಏರುಪೇರಾಗಿ ವೈದ್ಯರ ಸಲಹೆಯಂತೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಮಗು ಆರೋಗ್ಯದಿಂದ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next