Advertisement

Puttur; ನಗದು ಎಗರಿಸಿದ ಸಪ್ಲೈಯರ್‌

12:33 AM Feb 12, 2024 | Team Udayavani |

ಪುತ್ತೂರು: ಪುತ್ತೂರಿನ ನೆಹರೂನಗರದಲ್ಲಿ ಕಾರ್ಯಾಚರಿಸುತ್ತಿರುವ ಕೋಕೋ ಗುರು ಅಡುಗೆ ಮನೆಯಲ್ಲಿ ವೈಟರ್‌ ಆಗಿ ಕೆಲಸ ಮಾಡುತ್ತಿದ್ದ ಗಣೇಶ್‌ ಎಂಬಾತ 69,000 ರೂ. ಮತ್ತು ಮೊಬೈಲ್‌ನೊಂದಿಗೆ ಪರಾರಿಯಾದ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ.

Advertisement

ಕ್ಯಾಶಿಯರನ್ನು ಊಟ ಮಾಡಿ ಬರುವಂತೆ ತಿಳಿಸಿದ ಸಪ್ಲೈಯರ್‌ ತಾನು ಕ್ಯಾಶ್‌ ಕೌಂಟರ್‌ ಅನ್ನು ನೋಡಿಕೊಳ್ಳುವುದಾಗಿ ಹೇಳಿದ್ದಾನೆ. ಕ್ಯಾಶಿಯರ್‌ ಊಟಕ್ಕೆ ತೆರಳುತ್ತಿದ್ದಂತೆ ಕ್ಯಾಶ್‌ ಡ್ರಾವರ್‌ನಲ್ಲಿದ್ದ 69,000 ರೂ. ಹಾಗೂ ಮೊಬೈಲ್‌ ಎತ್ತಿಕೊಂಡು ಪರಾರಿಯಾಗಿದ್ದಾನೆ. ಈ ಕುರಿತು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಸಪ್ಲೈಯರ್‌ ನ ಈ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next