Advertisement
ಕನ್ನಡ ಭಾಷೆ ಗಟ್ಟಿಯಾಗಿ ಹಾಸು ಹೊಕ್ಕಾಗಿರುವ ನೆಲ ಗ್ರಾಮೀಣ ಭಾಗವೇ ಹೊರತು ಪಟ್ಟಣವಲ್ಲ. ಆಡು ಭಾಷೆಯಾಗಿ ದಿನಂಪ್ರತಿ ಬಳಕೆ ಆಗುತ್ತಿದೆ. ಆದ್ದರಿಂದ ಕನ್ನಡವನ್ನು ಉಳಿಸಿದ ಶ್ರೇಯಸ್ಸು ಗ್ರಾಮೀಣ ಭಾಗದ ಶ್ರಮಿಕ ವರ್ಗಕ್ಕೆ ಸೇರಬೇಕು ಎಂಬ ವೇದಿಕೆಯ ಮಾತಿಗೆ ಸಭೆ ರುಜು ಹಾಕಿತು.
Related Articles
ಸಾಂಸ್ಕೃತಿಕ ಕಾರ್ಯಕ್ರಮ, ಸಭೆ, ವಸ್ತು ಪ್ರದರ್ಶನ ಸಹಿತ ಎಲ್ಲದರಲ್ಲೂ ಒಪ್ಪ ಓರಣ ಕಂಡುಬಂದಿತ್ತು. ವಿರಾಮದ ವೇಳೆ ಪ್ರೇಕ್ಷಕರ ಮನಸ್ಸನ್ನು ರಂಜಿಸಿದ್ದು ಸಾಂಸ್ಕೃತಿಕ ಕಾರ್ಯಕ್ರಮಗಳು. ಕನ್ನಡ ನಾಡ-ನುಡಿಯನ್ನು, ನೃತ್ಯ, ಸಂಗೀತ ಪ್ರಕಾರಗಳನ್ನು ನೆನಪಿಸುವಂತಹ ವಿಶೇಷ ಕಾರ್ಯಕ್ರಮಗಳು ಕನ್ನಡ ನಾಡಿಗೆ ಮತ್ತಷ್ಟು ಮೆರುಗನ್ನು ನೀಡುವಂತೆ ಮಾಡಿತು.
Advertisement
ವಸ್ತು ಪ್ರದರ್ಶನಸಮ್ಮೇಳನದ ಇನ್ನೊಂದು ಬದಿಯಲ್ಲಿ ವಸ್ತು ಪ್ರದರ್ಶನ ಸುಗಮವಾಗಿ ನಡೆಯಿತು. ಸಂಪ್ರದಾಯ ನೆನಪಿಸುವ ಪುಸ್ತಕಗಳು, ಅಲಂಕೃತ ಮಣ್ಣಿನ ಮಡಕೆಗಳು, ಬಾಳೆ ನಾರಿನ ಸೀರೆ, ನೈಸರ್ಗಿಕ ಐಸ್‌ಕ್ರೀಂ, ಬಿದಿರಿನ ಅಕ್ಕಿ ಇತ್ಯಾದಿಗಳು ಸಾರ್ವಜನಿಕರನ್ನು ಸೆಳೆಯುವಲ್ಲಿ ಸಫಲವಾದವು. ಶಿವ ದಾಸೋಹಂ
ಸಮ್ಮೇಳನದ ಹೊಟ್ಟೆ ತಂಪಾಗಿಸಿದ್ದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ. ಬೆಳಗ್ಗಿನ, ಮಧ್ಯಾಹ್ನ ಹಾಗೂ ಸಂಜೆಯ ಊಟ ಉಪಾಹಾರವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದಲೇ ನೀಡಲಾಯಿತು. ಎರಡನೇ ದಿನವಾದ ಗುರುವಾರ ನಡೆದ ಸಮ್ಮೇಳನದ ಮಧ್ಯಾಹ್ನದ ಊಟಕ್ಕೆ ಸುಮಾರು 2,500-3,000 ಜನರು ಪಾಲ್ಗೊಂಡರು. ಸ್ವಯಂ ಸೇವಕರು
ಕಾರ್ಯಕ್ರಮದ ಅಚ್ಚುಕಟ್ಟುತನಕ್ಕೆ ಕಾರಣ ಸ್ವಯಂಸೇವಕರು. ಆಸುಪಾಸಿನ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಶ್ರಮಿಸಿದರು. ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಸಾಹಿತ್ಯಾಭಿಮಾನಿಗಳು ಕನ್ನಡದ ಸವಿಯನ್ನು ಸವಿಯುವಲ್ಲಿ ಸಾಕ್ಷಿಯಾದರು. ಗಾಂಧೀಜಿ ಚಿತ್ರಸಂಪುಟ
ಗಾಂಧೀಜಿ ಜೀವನದ ವಿವಿಧ ಘಟ್ಟಗಳ ಚಿತ್ರಗಳ ಸಂಗ್ರಹವನ್ನು ವಸ್ತು ಪ್ರದರ್ಶನದಲ್ಲಿ ಇಡಲಾಗಿತ್ತು. ಜೋನ್ ವೇಗಸ್ ಕಡಬ ಅವರ ಸಂಗ್ರಹಿಸಿರುವ ಚಿತ್ರಸಂಪುಟ ಜನರ ಮೆಚ್ಚುಗೆಗೆ ಪಾತ್ರವಾಯಿತು.