Advertisement

ಪುಟ್ಟರಾಜು-ಚೆಲುವರಾಯಸ್ವಾಮಿ ಜಟಾಪಟಿ 

09:57 AM Oct 10, 2018 | |

ಮಂಡ್ಯ/ಬೆಂಗಳೂರು: ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಹಾಗೂ ಮಾಜಿ ಸಚಿವ ಚೆ‌ಲುವರಾಯಸ್ವಾಮಿ ನಡುವೆ ಮಾತಿನ ಜಟಾಪಟಿ ನಡೆದಿದೆ. ಮಂಗಳವಾರ ಮಂಡ್ಯದಲ್ಲಿ ಮಾತನಾಡಿದ್ದ ಸಚಿವ ಸಿ.ಎಸ್‌.ಪುಟ್ಟರಾಜು, ಮಾಜಿ ಸಚಿವ ಚೆಲುವರಾಯಸ್ವಾಮಿ ಅವರು ಡೆಡ್‌ ಹಾರ್
ಇದ್ದಂತೆ. ನಾಗಮಂಗಲ ಕ್ಷೇತ್ರದ ಇತಿಹಾಸದಲ್ಲಿ 52 ಸಾವಿರ ಮತಗಳ ಅಂತರದಿಂದ ಯಾರಾದರೂ ಸೋತಿರುವುದನ್ನು ಕಂಡಿದ್ದೀರಾ? ಜನರು ಸೋಲಿಸಿ ಕಳುಹಿಸಿದ್ದಾರೆ ಬಾಯಿ ಮುಚ್ಚಿಕೊಂಡಿರಿ ಅಂತ. ಮೊದಲು ಅವರು ಆ ಕೆಲಸ ಮಾಡಲಿ.

Advertisement

ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಬೇಕು ಎಂದು ನಾವು ಯಾರನ್ನೂ ಗೋಗರೆಯುತ್ತಿಲ್ಲ. ಜನರು ಕೊಟ್ಟ ತೀರ್ಪಿನಿಂದ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದು, ಅವರೆಲ್ಲರ ಸೂಚನೆಯಂತೆ ನಾನು ಮತ್ತು ಚೆಲುವರಾಯಸ್ವಾಮಿ ನಡೆಯಲೇಬೇಕಾಗುತ್ತದೆ ಎಂದಿದ್ದರು.
ಇದಕ್ಕೆ ಬೆಂಗಳೂರಿನಲ್ಲಿ ತಿರುಗೇಟು ನೀಡಿದ ಮಾಜಿ ಸಚಿವ ಚೆಲುವರಾಯಸ್ವಾಮಿ, ಸಚಿವ ಪುಟ್ಟರಾಜು ತಲೆಯಲ್ಲಿ ಮೆದುಳು ಇಟ್ಟುಕೊಂಡು
ಮಾತನಾಡಬೇಕು. ಅವರು ನಮ್ಮನ್ನು ಸತ್ತ ಕುದುರೆಗಳು ಎಂದು ಕರೆದಿದ್ದಾರೆ. ನಮ್ಮನ್ನು ಜನರು ಯಾವ ಸ್ಥಿತಿಗೆ ತಂದಿದ್ದಾರೆ ಎಂದು ಆಡಿಕೊಂಡಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು.

ಪುಟ್ಟರಾಜು ವಿರುದಟಛಿ ಏಕವಚನದಲ್ಲಿಯೇ ಮಾತನಾಡಿದ ಚೆಲುವರಾಯಸ್ವಾಮಿ, ಚಿಕ್ಕಬಳ್ಳಾಪುರದಲ್ಲಿ ಕುಮಾರಸ್ವಾಮಿ ಎಷ್ಟು ಅಂತರದಲ್ಲಿ
ಸೋತಿದ್ದರು ಅನ್ನುವುದು ಗೊತ್ತಿಲ್ಲವಾ? ಅವನು ಚುನಾವಣೆಯಲ್ಲಿ ಸೋತಿಲ್ಲವೇನೊ ಗೊತ್ತಿಲ್ಲ. ಆದರೆ, ಅವನು ಯಾವ ರೀತಿ ಸಂಸದನಾದ
ಎನ್ನುವುದು ಎಲ್ಲರಿಗೂ ಗೊತ್ತಿದೆ. ದೇವೇಗೌಡರೂ ಕೂಡ ಅವನಿಗೆ “ಹೇಗೆ ಗೆದ್ದ’ ಎಂದು ನೇರವಾಗಿಯೇ ಹೇಳಿದ್ದಾರೆ ಎಂದರು.

ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ ನಾಯಕರ ಕೆಲಸಗಳು ಆಗುತ್ತಿಲ್ಲ. ಮೈತ್ರಿ ಕೇವಲ ವಿಧಾನಸೌಧಕ್ಕೆ ಮಾತ್ರ ಸೀಮಿತ ಅಂತ ದೇವೇಗೌಡರೇ ಹೇಳಿದ್ದಾರೆ. ಮಂಡ್ಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕಣಕ್ಕಿಳಿಸಿದರೆ ಈಗಲೂ ಪ್ರಬಲ ಪೈಪೋಟಿ ನೀಡುತ್ತೇವೆ. ಆದರೆ, ಮೈತ್ರಿ ಸರ್ಕಾರದಲ್ಲಿ ವರಿಷ್ಠರ ನಿರ್ಧಾರಕ್ಕೆ ನಾವು ಬದ್ದರಾಗಿದ್ದೇವೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next