Advertisement

ಪುಟ್ಪರ್ತಿ ಸಾಯಿಬಾಬಾ ಚರಿತ್ರೆ

11:23 AM Sep 03, 2018 | |

ನಿರ್ದೇಶಕ ಸಾಯಿಪ್ರಕಾಶ್‌ ಅಂದಾಕ್ಷಣ ನೆನಪಾಗೋದೇ ಶ್ರೀ ಸಾಯಿಬಾಬಾ. ಯಾಕೆಂದರೆ, ಅಪ್ಪಟ ಸಾಯಿಬಾಬಾ ಅವರ ಭಕ್ತರು ಸಾಯಿಪ್ರಕಾಶ್‌. ಈಗಾಗಲೇ ಸಾಯಿಬಾಬಾ ಅವರ ಕುರಿತು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅಷ್ಟೇ ಅಲ್ಲ, ಸಾಯಿಬಾಬಾ ಪಾತ್ರದಲ್ಲೂ ಸ್ವತಃ ಸಾಯಿಪ್ರಕಾಶ್‌ ಅವರು ಕಾಣಿಸಿಕೊಂಡಿದ್ದಾರೆ.

Advertisement

ಮಾಸ್‌, ಕ್ಲಾಸ್‌ ಸೇರಿದಂತೆ ಭಕ್ತಿಪ್ರಧಾನ ಚಿತ್ರಗಳನ್ನು ನಿರ್ದೇಶಿಸಿದ್ದ ಸಾಯಿಪ್ರಕಾಶ್‌, ಈಗ ಪುಟ್ಪರ್ತಿ ಸಾಯಿಬಾಬಾ ಅವರ ಚರಿತ್ರೆ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ಚಿತ್ರದಲ್ಲಿ ಸಾಯಿಬಾಬಾ ಅವರ 1926 ರಿಂದ 2012 ರವರೆಗಿನ ಚಿತ್ರಣ ಇರಲಿದೆ. ಅಕ್ಟೋಬರ್‌ನಲ್ಲಿ ನಡೆಯುವ ದಸರಾ ಹಬ್ಬದಂದು ಚಿತ್ರಕ್ಕೆ ಚಾಲನೆ ಸಿಗಲಿದೆ. ಸದ್ಯಕ್ಕೆ ಸಾಯಿಬಾಬಾ ಅವರ ಪಾತ್ರಕ್ಕೆ ಹುಡುಕಾಟ ನಡೆಯುತ್ತಿದೆ.

ಕೇರಳದಲ್ಲಿ ಒಬ್ಬ ವ್ಯಕ್ತಿ ನೋಡಲು ಸಾಯಿಬಾಬಾ ಅವರಂತೆಯೇ ಇರುವುದನ್ನು ಸಾಯಿಪ್ರಕಾಶ್‌ ನೋಡಿದ್ದಾರೆ. ಬಾಬಾ ಅವರ ಸಾಮ್ಯತೆ ಕಾಣುತ್ತಿರುವುದರಿಂದ ಅವರನ್ನೇ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳುವ ಯೋಚನೆ ಸಾಯಿಪ್ರಕಾಶ್‌ ಅವರದು. ಸದ್ಯಕ್ಕೆ ಆ ಕುರಿತು ಮಾತುಕತೆ ನಡೆಯುತ್ತಿದೆ. ಅದೊಂದು ಚರಿತ್ರೆ ಸಿನಿಮಾ ಆಗಿರುವುದರಿಂದ ಎಷ್ಟೆಲ್ಲಾ ಹೇಳಲು, ತೋರಿಸಲು ಸಾಧ್ಯವೋ ಅದನ್ನು ಚಿತ್ರದ ಮೂಲಕ ಮಾಡಲು ಸಾಯಿಪ್ರಕಾಶ್‌ ರೆಡಿಯಾಗುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next