Advertisement

ಪುಟ್ಟಣ್ಣ ಕಣಗಾಲ್‌ರ 84ನೇ ಜಯಂತಿ

01:26 PM Dec 04, 2017 | Team Udayavani |

ಮೈಸೂರು: ಕನ್ನಡ ಚಿತ್ರರಂಗದ ಧ್ರುವತಾರೆಯಂತೆ ಮಿನುಗಿದ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್‌ ಅವರು ಅನೇಕ ಕಲಾವಿದರನ್ನು ಚಿತ್ರರಂಗದಲ್ಲಿ ಮಿಂಚುವಂತೆ ಮಾಡಿದ್ದು ಅವರ ಚಿತ್ರಗಳು ಸಾಮಾಜಿಕ ಕಳಕಳಿಯ ಸಿನಿಮಾಗಳಾಗಿದ್ದವು ಎಂದು ಜನಪದ ತಜ್ಞ ಡಾ.ಪಿ.ಕೆ.ರಾಜಶೇಖರ್‌ ಅಭಿಪ್ರಾಯಪಟ್ಟರು.

Advertisement

ಪಿರಿಯಾಪಟ್ಟಣದ ಪುಟ್ಟಣ್ಣ ಕಣಗಾಲ್‌ ವೇದಿಕೆ ವತಿಯಿಂದ ಭಾನುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಪುಟ್ಟಣ್ಣ ಕಣಗಾಲ್‌ ಅವರ 84ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ಪುಟ್ಟಣ್ಣ ನಿರ್ದೇಶನದ ಚಿತ್ರಗಳ ಚಿತ್ರಗೀತೆ ಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಪುಟ್ಟಣ್ಣ ಕಣಗಾಲ್‌ ಕನ್ನಡ ಚಿತ್ರರಂಗ ಎಂದು ಮರೆಯದ ಅದ್ಭುತ ನಿರ್ದೇಶಕರಾಗಿದ್ದು, ಪುಟ್ಟಣ್ಣ ಅವರು ಮೈಸೂರು ಭಾಗದವರೆಂದು ಹೇಳಿಕೊಳ್ಳಲು ಹೆಮ್ಮೆಯ ಸಂಗತಿ. ಪುಟ್ಟಣ್ಣ ಅವರ ನಿರ್ದೇಶನದ ಚಿತ್ರಗಳ ಗೀತೆಗಳನ್ನು ಹಾಡುವ ಸ್ಪರ್ಧೆ ಆಯೋಜಿಸಿರುವುದು ಅವರನ್ನು ಸ್ಮರಿಸುವ ಉತ್ತಮ ಕಾರ್ಯಕ್ರಮವಾಗಿದ್ದು, ಇಂತಹ ಚಟುವಟಿಕೆಗಳು ನಿರಂತರವಾಗಿ ನಡೆಯುವ ಅಗತ್ಯವಿದೆ ಎಂದರು.

ವೇದಿಕೆ ಅಧ್ಯಕ್ಷ ಕಂಪ್ಲಾಪುರ ಮೋಹನ್‌, ತಾವು ಹಾಗೂ ಪುಟ್ಟಣ್ಣ ಅವರೊಂದಿಗೆ ಒಳ್ಳೆಯ ಒಡನಾಟವಿತ್ತು. ಅವರು ಅಮೃತಗಳಿಗೆ ಚಿತ್ರಕಥೆ ಮಾಡಿ ಟೈಟಲ್‌ ಹುಡುಕುತ್ತಿದ್ದ ವೇಳೆ ಅಮೃತಗಳಿಗೆ ಎಂದು ಇಟ್ಟರೆ ಹೇಗೆ ಎಂದು ಹೇಳಿದ್ದೆ. ಅವರು ನಕ್ಕು ಅದೇ ಟೈಟಲ್‌ ಇಟ್ಟರು ಎಂದರು.

85ನೇ ವರ್ಷದ ಜಯಂತಿಯಾದ್ದರಿಂದ ಸ್ಪರ್ಧೆಯಲ್ಲಿ 85 ಸ್ಪರ್ಧಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಪುಟ್ಟಣ್ಣ ಚಿತ್ರಗಳ ಕುರಿತು ರಸಪ್ರಶ್ನೆ ನಡೆಸಲಾಯಿತು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌, ನಿವೃತ್ತ ಪ್ರಾಂಶುಪಾಲ ವಿ.ಜಯಪ್ರಕಾಶ್‌, ಕಣಗಾಲ್‌ ಗ್ರಾಪಂ ಅಧ್ಯಕ್ಷ ಎಂ.ಟಿ.ಹನುಮಂತು, ವೇದಿಕೆ ಕಾರ್ಯದರ್ಶಿ ತ್ರಿವೇಣಿ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next