Advertisement

ಸೆನ್ಸಾರ್ ಪಾಸಾದ ‘ಪುಟ್ಟ ಭಯ’

03:20 PM May 04, 2023 | Team Udayavani |

“ಸಾಯಿ ಚಿತ್ರಂ ಪ್ರೊಡಕ್ಸನ್ಸ್‌’ ಬ್ಯಾನರಿನಲ್ಲಿ ಕಪ್ಪೆಟ್ಟು ಜನಾರ್ಧನ ನಾಯಕ್‌ ನಿರ್ಮಿಸಿರುವ “ಪುಟ್ಟ ಭಯ’ ಮಕ್ಕಳ ಚಿತ್ರದ ಬಿಡುಗಡೆಗೆ ಸೆನ್ಸಾರ್‌ನಿಂದ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. ಇತ್ತೀಚೆಗೆ “ಪುಟ್ಟ ಭಯ’ ಸಿನಿಮಾವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಸಿನಿಮಾಕ್ಕೆ “ಯು’ ಪ್ರಮಾಣಪತ್ರವನ್ನು ನೀಡಿ ಬಿಡುಗಡೆಗೆ ಅಸ್ತು ಎಂದಿದೆ. ಉಡುಪಿಯ ನವ್ಯ ಜೆ ನಾಯಕ್‌, ಕಥೆ, ಚಿತ್ರಕಥೆ, ನಿರ್ದೇಶನವಿರುವ “ಪುಟ್ಟ ಭಯ’ ಸಿನಿಮಾಕ್ಕೆ ರೋಹಿತ್‌ ಅಂಪರ್‌ ಛಾಯಾಗ್ರಹಣ, ಹರೀಶ್‌ ಕಿರಣ್‌ ಸಂಕಲನವಿದೆ.

Advertisement

ಸಂತೋಷದಿಂದ ಆಡಿಕೊಂಡಿರುವ ಭಾಗಿ ಎಂಬ ಹುಡುಗಿ ತನ್ನ ಜೀವನದಲ್ಲಿ ಭಯದಿಂದ ಮುಳುಗಿರುವ ಕಥೆಯಾಗಿದೆ. ಯಾರಿಂದ ಆಕೆಗೆ ಭಯ ಉಂಟಾಗುತ್ತದೆ ಮತ್ತು ಆ ಭಯವನ್ನು ಅವಳು ಹೇಗೆ ಎದುರಿಸುತ್ತಾಳೆ ಮತ್ತು ಆ ಭಯದಿಂದ ಹೇಗೆ ಹೊರಬರುತ್ತಾಳೆ ಎಂಬುದರ ಸುತ್ತ “ಪುಟ್ಟ ಭಯ’ ಸಿನಿಮಾ ಕಥಾಹಂದರ ಸಾಗಲಿದೆ.

ಹಿರಿಯ ನಟಿ ಸುಂದರಶ್ರೀ, ಅನನ್ಯಾ ಮೋಹನ್‌, ರಾಘವ ಶೆಟ್ಟಿ, ಸಮೃದ್ಧಿ, ಶಿಲ್ಪಾ ಶೆಟ್ಟಿ, ಅಂಬುಜಮ್ಮ, ಸುಲದಾಬುಭಾಗಿ ರಮಣ ಅತ್ತೆ ಮುಂತಾದವರು “ಪುಟ್ಟ ಭಯ’ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಸದ್ಯ ಸೆನ್ಸಾರ್‌ನಿಂದ ಬಿಡುಗಡೆಗೆ ಗ್ರೀನ್‌ ಸಿಗ್ನಲ್‌ ಪಡೆದುಕೊಂಡಿರುವ “ಪುಟ್ಟ ಭಯ’ ಸಿನಿಮಾವನ್ನು ಇದೇ ತಿಂಗಳ ಅಂತ್ಯಕ್ಕೆ ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.

Advertisement

Udayavani is now on Telegram. Click here to join our channel and stay updated with the latest news.

Next