Advertisement

ಪುತ್ರ ಹರೀಶ್‌ಗೌಡನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ: ಹುಣಸೂರಿನಲ್ಲಿ ಜಿಟಿಡಿ

10:32 PM Feb 24, 2023 | Team Udayavani |

ಹುಣಸೂರು: ಹುಣಸೂರು ತಾಲೂಕಿನ ಜನತೆ ತಮ್ಮನ್ನು ಎರಡುಬಾರಿ ಆಯ್ಕೆ ಮಾಡಿದ್ದರಿಂದಾಗಿ ಜಾತಿ,ಧರ್ಮ ಮೀರಿ ಕ್ಷೇತ್ರದ ಅಭಿವೃದ್ದಿಗೊಳಿಸಿದ್ದೇನೆ. ನಿಮ್ಮ ಪ್ರೀತಿಗೆ ಚಿರಋಣಿ, ತಮ್ಮ ಪುತ್ರ ಹರೀಶ್‌ಗೌಡನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ, ಆಶೀರ್ವದಿಸುವಂತೆ ಶಾಸಕ ಜಿಟಿದೇವೇಗೌಡ ಮನವಿ ಮಾಡಿದರು.

Advertisement

ತಾಲೂಕಿನ ಬನ್ನಿಕುಪ್ಪೆಯ ಮಾದಹಳ್ಳಿಯ ಉಕ್ಕಿನಕಂತೆ ಮಠದಲ್ಲಿ ನಡೆದ ಅಮವಾಸ್ಯೆಯ ವಿಶೇಷ ಪೂಜೆಯಲ್ಲಿ ಕುಟುಂಬಸಮೇತರಾಗಿ ಶಾಸಕ ಜಿ.ಟಿ.ದೇವೇಗೌಡರು ಭಾಗವಹಿಸಿ ಶ್ರೀ ಸಾಂಬವಸಾದಶಿವ ಸ್ವಾಮೀಜಿಯವರಿಗೆ ಗುರುವಂದನೆ ಸಲ್ಲಿಸಿದ ನಂತರ ಮಾತನಾಡಿದ ಜಿಟಿಡಿಯವರು ಈ ಸಂಬAಧ ನಡೆದ ಸಮಾರಂಭದಲ್ಲಿ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡರು ಉಕ್ಕಿನಕಂತೆ ಶ್ರೀಮಠಕ್ಕೆ ಸಾಕಷ್ಟು ಇತಿಹಾಸವಿದ್ದು, ಭಕ್ತರಿಗೆ ಮಠದ ಬಗ್ಗೆ ಅಪಾರವಾದ ನಂಬಿಕೆ ಇದೆ. ಶ್ರೀಮಠದ ಸ್ವಾಮೀಜಿಯವರು ಮಠದ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿದ್ದಾರೆಂದು ಪ್ರಶಂಸಿಸಿ, ಮಠದ ಬೆಳವಣಿಗೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿ, ತಾಲೂಕಿನ ವೀರಶೈವ ಸಮುದಾಯ ನಮ್ಮ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿಗೆ ನಾವು ಚಿರಋಣಿಯಾಗಿದ್ದೇನೆಂದರು.

ಹರೀಶ್‌ಗೌಡನನ್ನು ಆಶಿರ್ವದಿಸಿ
ತಾಲೂಕಿನ ಜನತೆ ನನಗೆ ಎರಡು ಬಾರಿ ಅಧಿಕಾರ ನೀಡಿದ್ದು, ಶಾಸಕ,ಸಚಿವಸ್ಥಾನ ಕಲ್ಪಿಸಿದ್ದೀರಿ, ಧರ್ಮ-ಜಾತಿ, ಪಕ್ಷಭೇಧ ಮರೆತು ಎಲ್ಲಾ ವರ್ಗದವರನ್ನು ಪ್ರೀತಿ ವಿಶ್ವಾಸದಿಂದ ಕಂಡಿದ್ದೇನೆ. ಕ್ಷೇತ್ರದ ಅಭಿವೃದ್ದಿಗೆ ನಿರೀಕ್ಷೆಗೂ ಮೀರಿ ದುಡಿದಿದ್ದೇನೆ, ಇದೀಗ ನನ್ನ ಪುತ್ರ ಜಿ.ಡಿ.ಹರೀಶ್‌ಗೌಡ ಸ್ಪರ್ಧಿಸುತ್ತಿದ್ದು, ನನ್ನಂತೆ ಆತನಿಗೂ ಆಶೀರ್ವದಿಸುವಂತೆ ಮನವಿ ಮಾಡಿದರು.

ಜನರ ಪ್ರೀತಿಗೆ ಚಿರಋಣಿ
ಜೆಡಿಎಸ್‌ನ ನಿಯೋಜಿತ ಅಭ್ಯರ್ಥಿ ಜಿ.ಡಿ.ಹರೀಶ್‌ಗೌಡರು ಮಾತನಾಡಿ ಹುಣಸೂರು ಕ್ಷೇತ್ರಕ್ಕೂ ನಮ್ಮ ಕುಟುಂಬಕ್ಕೂ ಅವಿನಾಬಾವ ಸಂಬAಧವಿದೆ. ಕ್ಷೇತ್ರದ ಜನರು ನಮ್ಮ ಕುಟುಂಬದ ಮೇಲೆ ಇಟ್ಟಿರುವ ಅಗಾಧವಾದ ಪ್ರೀತಿಗೆ ನಾವೆಂದು ಚಿರಋಣಿ, ತಾಲೂಕಿನ ಅಭಿವೃದ್ದಿಗಾಗಿ ಮುಂಬರುವ ಚುನಾವಣೆಯಲ್ಲಿ ತಮ್ಮನ್ನು ಆಶೀರ್ವದಿಸುವಂತೆ ಮನವಿ ಮಾಡಿದರು. ಸಾನಿಧ್ಯವಹಿಸಿದ್ದ ಶ್ರೀಸಾಂಬಸದಾಶಿವಸ್ವಾಮೀಜಿಯವರು ಆಶೀರ್ವಚನ ನೀಡಿದರು.
ರಾಜ್ಯ ಸಹಕಾರ ಸಂಘಗಳ ಪತ್ತಿನ ಮಹಾ ಮಂಡಲದ ಅಧ್ಯಕ್ಷೆ ಕೆ.ಲಲಿತಾದೇವೇಗೌಡ, ಜಿ.ಪಂ.ಮಾಜಿ ಸದಸ್ಯ ಸಿ.ಟಿ.ರಾಜಣ್ಣ, ತಾಲೂಕು ಜೆಡಿಎಸ್ ಉಪಾಧ್ಯಕ್ಷ ದೇವರಾಜಒಡೆಯರ್, ಎ.ಪಿ.ಎಂ.ಸಿ.ಮಾಜಿ ಅಧ್ಯಕ್ಷ ಕಿರಂಗೂರುಬಸವರಾಜ್, ಗುರುಸ್ವಾಮಿ, ಕೂಸಪ್ಪ, ಪುಟ್ಟಲಿಂಗಪ್ಪ, ಜೆಡಿಎಸ್ ಮುಖಂಡರಾದ ಹರವೆಶ್ರೀಧರ್, ರಂಜಿತಾಚಿಕ್ಕಮಾದು, ಎಂ.ಬಿ.ಸುರೇAದ್ರ, ಕೆಂಪೇಗೌಡ, ಪ್ರಭು, ಸತೀಶ್‌ಪಾಪಣ್ಣ, ಮುದುಗನೂರುಸುಭಾಷ್, ರವಿಗೌಡ, ಶಿವಣ್ಣ, ಸುರೇಶ್, ಉಮೇಶ್, ಶ್ರೀನಿವಾಸ್, ರಾಜು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು. ದಾಸೋಹ ಏರ್ಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next