Advertisement

ರಷ್ಯಾ ಅಧ್ಯಕ್ಷ ಪುಟಿನ್‌ಗೆ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆ?

09:34 AM May 04, 2022 | Team Udayavani |

ಮಾಸ್ಕೋ: ಉಕ್ರೇನ್‌ ವಿರುದ್ಧ ದಾಳಿ ನಡೆಸಿ ಜಗತ್ತಿನ ರಾಷ್ಟ್ರಗಳನ್ನು ಎದುರು ಹಾಕಿಕೊಂಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (69) ಶೀಘ್ರವೇ ಕ್ಯಾನ್ಸರ್‌ ಚಿಕಿತ್ಸೆಗೆ ಒಳಗಾಗಲಿದ್ದಾರೆ.

Advertisement

ಹೀಗಾಗಿ, ಅವರು ಅಧಿಕಾರವನ್ನು ರಷ್ಯಾ ಭದ್ರತಾ ಮಂಡಳಿ ಮುಖ್ಯಸ್ಥ ನಿಖೊಲಯ್‌ ಪಾತ್ರುಶ್ಚೇವ್‌ ಅವರಿಗೆ ಹಸ್ತಾಂತರ ಮಾಡಲಿದ್ದಾರೆ.

ಫೆ.24ರ ಬಳಿಕ ರಷ್ಯಾ ಅಧ್ಯಕ್ಷ ಪುಟಿನ್‌ ಅವರ ಆರೋಗ್ಯ ಹದಗೆಟ್ಟಿದೆ ಎಂಬ ಬಗ್ಗೆ ವರದಿಗಳು ಪ್ರಕಟವಾಗಿದ್ದವು. ಕೆಲ ದಿನಗಳ ಹಿಂದೆ ಅವರ ಕೈಗಳು ನಡುಗುತ್ತಿದ್ದವು ಎಂಬ ಅಂಶವನ್ನು ಪುಷ್ಟೀಕರಿಸುವ ವರದಿಗಳೂ ಪ್ರಕಟವಾಗಿದ್ದವು.

ಪುಟಿನ್‌ ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾಕ್ಟರ್‌ಗಳ ಪ್ರಕಾರ ರಷ್ಯಾ ಅಧ್ಯಕ್ಷರಿಗೆ ಶಸ್ತ್ರಚಿಕಿತ್ಸೆ ನಡೆಸಲೇಬೇಕಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆಂದು “ದ ನ್ಯೂಯಾರ್ಕ್‌ ಟೈಮ್ಸ್‌’ನಲ್ಲಿ ಪ್ರಕಟವಾಗಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವರದಿಯ ಬಗ್ಗೆ ಶ್ವೇತಭವನ ವಕ್ತಾರರು “ರಷ್ಯಾ ಅಧ್ಯಕ್ಷರ ಆರೋಗ್ಯ ಸ್ಥಿತಿ ಬಗ್ಗೆ ಪ್ರಕಟವಾಗಿರುವ ವರದಿಯನ್ನು ನೋಡಿಲ್ಲ’ ಎಂದು ಹೇಳಿದ್ದಾರೆ.

Advertisement

ಇದನ್ನೂ ಓದಿ:14 ವರ್ಷಗಳ ಹಿಂದಿನ ಪ್ರಕರಣದಲ್ಲಿ ರಾಜ್ ಠಾಕ್ರೆ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ

ಪಾತ್ರುಶ್ಚೇವ್‌ ಯಾರು?
ನಿಖೋಲಯ್‌ ಪಾತ್ರುಶ್ಚೇವ್‌ ಅವರು ಮೂಲತಃ ನಾಜಿಗಳು. ಹಿಂದಿನ ಸೋವಿಯತ್‌ ಒಕ್ಕೂಟದ ನೌಕಾಪಡೆಯಲ್ಲಿ ಅವರ ತಂದೆ ಅಧಿಕಾರಿಯಾಗಿದ್ದರು. ಹೀಗಾಗಿ, ಪುತ್ರ ಕೂಡ ರಷ್ಯಾ ಸೇನೆಯಲ್ಲಿಯೇ ಕರ್ತವ್ಯ ಮುಂದುವರಿಸಿದ್ದಾರೆ. ರಷ್ಯಾ ಗುಪ್ತಚರ ಸಂಸ್ಥೆ ಕೆಜಿಬಿಯ ಕಳ್ಳಸಾಗಣೆ ಮತ್ತು ಭ್ರಷ್ಟಾಚಾರ ವಿಭಾಗದಲ್ಲಿಯೂ ಅವರು ಕಾರ್ಯನಿರ್ವಹಿಸಿದ್ದರು. ರಷ್ಯಾದ ಫೆಡರಲ್‌ ಸೆಕ್ಯುರಿಟಿ ಸರ್ವಿಸ್‌ನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next