Advertisement
ರಷ್ಯಾ ಕಾನೂನುಬಾಹಿರವಾಗಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತಿದೆ ಎಂದು ಉಕ್ರೇನ್ ಮತ್ತು ಪಾಶ್ಚಿಮಾತ್ಯ ಅಧಿಕಾರಿಗಳು ಹೇಳಿದ ಪ್ರದೇಶವನ್ನು ರಕ್ಷಿಸಲು “ಲಭ್ಯವಿರುವ ಎಲ್ಲಾ ವಿಧಾನಗಳನ್ನು” ಬಳಸುವುದಾಗಿ ಪುಟಿನ್ ಹೇಳಿದರು.
Related Articles
Advertisement
ಉಕ್ರೇನ್ ಅಧಿಕಾರಿಗಳು ಪುಟಿನ್ ಅವರ ಹೇಳಿಕೆಗಳನ್ನು ತಳ್ಳಿಹಾಕಿದ್ದು, ಉಕ್ರೇನ್‌ನ ಭವಿಷ್ಯವನ್ನು ಉಕ್ರೇನ್‌ನ ಯುದ್ಧಭೂಮಿಯಲ್ಲಿ ನಿರ್ಧರಿಸಲಾಗುತ್ತಿದೆ ಎಂದು ಹೇಳಿದರು. “ನಾವು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಮತ್ತು ಉಕ್ರೇನಿಯನ್ ಪ್ರದೇಶಗಳನ್ನು ಸ್ವತಂತ್ರಗೊಳಿಸುತ್ತೇವೆ. ಸೈನ್ಯವು ಕಾರ್ಯನಿರ್ವಹಿಸುತ್ತಿದೆ, ಉಕ್ರೇನ್ ಒಗ್ಗೂಡಿದೆ ಎಂದು ಉಕ್ರೇನಿಯನ್ ಅಧ್ಯಕ್ಷರ ಕಚೇರಿಯ ಮುಖ್ಯಸ್ಥ ಆಂಡ್ರಿ ಯೆರ್ಮಾಕ್ ಹೇಳಿದ್ದಾರೆ.
ಕ್ರೆಮ್ಲಿನ್‌ನ ಸೇಂಟ್ ಜಾರ್ಜ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಪುಟಿನ್ ಮತ್ತು ಉಕ್ರೇನ್‌ನ ನಾಲ್ಕು ಪ್ರದೇಶಗಳ ಮುಖ್ಯಸ್ಥರು ಏಳು ತಿಂಗಳ ಸಂಘರ್ಷದ ಬಳಿಕ ರಷ್ಯಾಕ್ಕೆ ಸೇರುವ ಪ್ರದೇಶಗಳ ಕುರಿತು ಒಪ್ಪಂದಗಳಿಗೆ ಸಹಿ ಹಾಕಲು ಆಯೋಜಿಸಲಾಗಿತ್ತು.
ಉಕ್ರೇನ್ ಎಲ್ಲಾ ಆಕ್ರಮಿತ ಪ್ರದೇಶವನ್ನು ಹಿಂಪಡೆಯಲು ಪ್ರತಿಜ್ಞೆ ಮಾಡುವುದರೊಂದಿಗೆ, ರಷ್ಯಾ ತಾನು ಆಕ್ರಮಿಸಿಕೊಂಡ ಪ್ರದೇಶಗಳನ್ನು ರಕ್ಷಿಸಲು ಪ್ರತಿಜ್ಞೆ ಮಾಡುವುದರೊಂದಿಗೆ, ಪರಮಾಣು-ಶಸ್ತ್ರ ಬಳಕೆಯ ಬೆದರಿಕೆ ಮತ್ತು ಪ್ರತಿಭಟನೆಗಳ ಹೊರತಾಗಿಯೂ ಹೆಚ್ಚುವರಿ 3 ಲಕ್ಷ ಸೈನಿಕರನ್ನು ಸಜ್ಜುಗೊಳಿಸುವುದರೊಂದಿಗೆ ಘರ್ಷಣೆಯ ಹಾದಿ ಇನ್ನಷ್ಟು ಮುಂದುವರಿಯುವ ಲಕ್ಷಣ ತೋರುತ್ತಿದೆ.