Advertisement

Prigozhin ಭೇಟಿಯಾದ ಪುತಿನ್‌; ಕ್ರೆಮ್ಲಿನ್‌ನಲ್ಲಿ ಸುಮಾರು 3 ಗಂಟೆಗಳ ಕಾಲ ಸಭೆ

11:54 PM Jul 10, 2023 | Team Udayavani |

ಮಾಸ್ಕೊ: ವ್ಯಾಗ್ನರ್‌ ಪಡೆಯ ದಂಗೆಯ ಕೆಲವು ದಿನಗಳ ಅನಂತರ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಅವರು ವ್ಯಾಗ್ನರ್‌ ಪಡೆಯ ಮುಖ್ಯಸ್ಥ ಪ್ರಿಗೋಜಿನ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ಸೋಮವಾರ ತಿಳಿಸಿದ್ದಾರೆ.

Advertisement

ಜೂ.29ರಂದು ಕ್ರೆಮ್ಲಿನ್‌ನಲ್ಲಿ ಸುಮಾರು 3 ಗಂಟೆಗಳ ಕಾಲ ಸಭೆ ನಡೆದಿತ್ತು. ಅದರಲ್ಲಿ ಪ್ರಿಗೋಜಿನ್‌ ಸೇರಿದಂತೆ ವ್ಯಾಗ್ನರ್‌ ಪಡೆಯ ಕಮಾಂಡರ್‌ಗಳು ಒಳಗೊಂಡಂತೆ ಒಟ್ಟು 35 ಮಂದಿ ಭಾಗವಹಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಜೂ.24ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಮತ್ತು ರಷ್ಯಾ ಸೇನೆಯ ವಿರುದ್ಧ ದಂಗೆ ಎದ್ದ ವ್ಯಾಗ್ನರ್‌ ಪಡೆ, ರಾಜಧಾನಿ ಮಾಸ್ಕೊ ವಶಪಡಿಸಿಕೊಳ್ಳಲು ಮುಂದಾಗಿತ್ತು. ಅಂತಿಮವಾಗಿ ಬೆಲಾರಸ್‌ ಅಧ್ಯಕ್ಷ ಅಲೆಕ್ಸಾಂಡರ್‌ ಲುಕಾಶೆಂಕೊ ಮಧ್ಯಸ್ಥಿಕೆಯ ಬಳಿಕ ವ್ಯಾಗ್ನರ್‌ ಪಡೆ ದಂಗೆಯಿಂದ ಹಿಂದೆ ಸರಿದಿತ್ತು.

50,000 ರಷ್ಯಾ ಯೋಧರ ಸಾವು: ರಷ್ಯಾ-ಉಕ್ರೇನ್‌ ಯುದ್ಧದಲ್ಲಿ ಇದುವರೆಗೂ ಸುಮಾರು 50,000 ರಷ್ಯಾ ಯೋಧರು ಹುತಾತ್ಮರಾಗಿದ್ದಾರೆ. ಈ ಪೈಕಿ ಹೆಚ್ಚಿನವರು ಯುವ ಯೋಧರಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಇದೇ ವೇಳೆ, ಕಳೆದ ವಾರ ರಷ್ಯಾ ವಶದಲ್ಲಿದ್ದ ತನ್ನ 14 ಚದರ ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಉಕ್ರೇನ್‌ ಮತ್ತೆ ತನ್ನ ವಶಕ್ಕೆ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next