Advertisement

ಪುತ್ತಿಗೆಶ್ರೀ ಪರ್ಯಾಯ: ಸಾವಿರಾರು ಮಂದಿ ಭಕ್ತರಿಗೆ ರಾತ್ರಿ ಅನ್ನಪ್ರಸಾದ

12:39 PM Jan 18, 2024 | Team Udayavani |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ನಿತ್ಯ ಅನ್ನಪ್ರಸಾದ ನಡೆಯುತ್ತಿದೆಯಾದರೂ ಪರ್ಯಾಯ ಸಂದರ್ಭದಲ್ಲಿ ನಡೆಯುವ ಅನ್ನಪ್ರಸಾದಕ್ಕೆ ವಿಶೇಷ ಮಹತ್ವವಿದೆ. ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಪರ್ಯಾಯ ಸಂಭ್ರಮ ಕಣ್ತುಂಬಿಕೊಳ್ಳಲು ದೂರದೂರುಗಳಿಂದ ಬುಧವಾರವೇ ಅಪಾರ ಭಕ್ತರು ಉಡುಪಿಗೆ ಆಗಮಿಸಿದ್ದು, ಭಕ್ತರಿಗೆ ಪುತ್ತಿಗೆ ಮಠದಿಂದ ರಾತ್ರಿಯೇ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

Advertisement

ಪಾರ್ಕಿಂಗ್‌ ಪ್ರದೇಶದ ಬಳಿ ಹೊರೆ ಕಾಣಿಕೆ ಆವರಣ ಸಮೀಪ ಅಚ್ಚುಕಟ್ಟಿನ ಅನ್ನಪ್ರಸಾದ ವಿತರಣೆ ಮಾಡಲಾಯಿತು. ರಾತ್ರಿ ಸಾವಿರಾರು ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ರಾತ್ರಿ ಭೋಜನಕ್ಕೆ ಅನ್ನ, ಸಾರು, ಪಾಯಸ, ಮೈಸೂರುಪಾಕ್‌, ಉಪ್ಪಿನಕಾಯಿ, ಮಜ್ಜಿಗೆ, ಪಲ್ಯ ವ್ಯವಸ್ಥೆ ಮಾಡಲಾಗಿತ್ತು.

ಭಕ್ತರಿಗೆ “ಸೂರೆ ಕೃಷ್ಣ ಪ್ರಸಾದ’
ಪರ್ಯಾಯ ಶ್ರೀಕೃಷ್ಣಾಪುರ ವಿದ್ಯಾಸಾಗರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಮಂಗಲೋತ್ಸವದ ಮಹಾಸಂತರ್ಪಣೆ
ಬಳಿಕ ಅನ್ನಪ್ರಸಾದಗಳನ್ನು ಸಾರ್ವಜನಿಕರಿಗೆ ಪರ್ಯಾಯ ಶ್ರೀಪಾದರ ಉಪಸ್ಥಿತಿಯಲ್ಲಿ “ಸೂರೆ’ ಬಿಡಲಾಯಿತು.

ಪರ್ಯಾಯದ ಕೊನೆ ದಿನ “ಸೂರೆ’ ಆಚರಣೆ ವಿಶೇಷತೆಗಳಿಂದ ಕೂಡಿದೆ. “ಸೂರೆ’ ಆಹಾರವನ್ನು ಕೃಷ್ಣ ಪ್ರಸಾದ ಎಂದೇ
ಭಕ್ತರು ಭಾವಿಸುತ್ತಾರೆ. ಮಧ್ಯಾಹ್ನದ ಅನ್ನಸಂತರ್ಪಣೆ ಬಳಿಕ ಉಳಿದ ಆಹಾರ ಪದಾರ್ಥ ಭಕ್ತರು “ಸೂರೆ’ (ತೆಗೆದುಕೊಂಡು ಹೋಗುವುದು) ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next