Advertisement

Puthige Paryaya; ಡಿ. 23, 24ರಂದು ಬೆಂಗಳೂರಿನಲ್ಲಿ ಕೋಟಿಗೀತಾ ಲೇಖನಯಜ್ಞ ದೀಕ್ಷಾ ಸಮಾರಂಭ

11:40 AM Dec 15, 2023 | Team Udayavani |

ಉಡುಪಿ: ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಕೋಟಿಗೀತಾ ಲೇಖನಯಜ್ಞ ಸಮಿತಿ ಆಶ್ರಯದಲ್ಲಿ ಬೆಂಗಳೂರಿನ ಬಸವನಗುಡಿ ನ್ಯಾಶನಲ್‌ ಕಾಲೇಜು ಮೈದಾನದಲ್ಲಿ ಡಿ. 23, 24ರಂದು ಗೀತೋತ್ಸವ ಜರಗಲಿದೆ.

Advertisement

ಬೆಳಗ್ಗೆ 9.30ರಿಂದ ನಡೆಯಲಿರುವ ಕೋಟಿಗೀತಾ ಲೇಖನಯಜ್ಞ ದೀಕ್ಷಾ ಸಮಾರಂಭದಲ್ಲಿ ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಅವರ ಶಿಷ್ಯರಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿರುವರು.

ಕಾರ್ಯಕ್ರಮದಲ್ಲಿ ಸಹಸ್ರಾರು ಕೃಷ್ಣ ಭಕ್ತರಿಂದ ಸಮಗ್ರ ಭಗವದ್ಗೀತೆ ಹಾಗೂ ವಿಷ್ಣಸಹಸ್ರನಾಮ ಪಾರಾಯಣ, ನಾಡಿನ ಪ್ರಸಿದ್ಧ ಚಿಂತಕರು, ಉಪನ್ಯಾಸಕರಿಂದ ದೀತಾ-ಚಿಂತನ, ಭಗವದ್ಗೀತಾ ಕಲಾ ಪ್ರಾಕಾರಗಳ ಪ್ರಸ್ತುತಿ, ಶಾಲೆಯ ವಿದ್ಯಾರ್ಥಿಗಳಿಗೆ ಭಗವದ್ಗೀತಾ ಸಂಬಂಧಿತ ಸ್ಪರ್ಧೆ, ಭಗವದ್ಗೀತೆಗೆ ಸಂಬಂಧಪಟ್ಟ ವಿವಿಧ ಚಿಂತನೆಗಳ ಸಚಿತ್ರ ಪ್ರದರ್ಶನ, ವಸ್ತು ಪ್ರದರ್ಶನ ಮತ್ತು ಮಳಿಗೆಗಳು ಇರಲಿವೆ.

ಕೃಷ್ಣನುಲಿದ ಗೀತೆಯ ವಿವಿಧ ಆಯಾಮಗಳ ಸಂಸ್ಪರ್ಶ ಗೀತೋತ್ಸವದ ಅಂಗಣದಲ್ಲಿ ವಿವಿಧ ಗಣ್ಯಮಾನ್ಯರ, ವಿವಿಧ ಕ್ಷೇತ್ರಗಳ ಸಾಧಕರ ಹತ್ತಾರು ಸಾವಿರ ಕೃಷ್ಣ ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಸಂಪನನೊYಳ್ಳಲಿದೆ.

ಡಿ. 23ರ ಸಂಜೆ 4.15ರಿಂದ 5.45ರ ತನಕ ನಡೆಯಲಿರುವ “ಆಚಾರ್ಯತ್ರಯರ ಚಿಂತನೆಯಲ್ಲಿ-ಭಗವದ್ಗೀತೆ’ ಕಾರ್ಯಕ್ರಮ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಾಧಿಪತಿ ಪ್ರೊ| ಶ್ರೀನಿವಾಸ ವರಖೇಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

Advertisement

“ಆಚಾರ್ಯ ಶಂಕರರ ಗೀತಾಚಿಂತನೆ’ ಬಗ್ಗೆ ಮೈಸೂರಿನ ಶ್ರೀಸುಧಾಮ ಸಂಸ್ಕೃತ ದಿನಪತ್ರಿಕೆಯ ಸಂಪಾದಕ ವಿ| ಎಚ್‌.ವಿ. ನಾಗರಾಜ ರಾವ್‌, “ಆಚಾರ್ಯ ರಾಮಾನುಜರ ಗೀತಾಚಿಂತನೆ’ ಬಗ್ಗೆ ಪರಾಂಕುಶಾಚಾರ್ಯ ವೈದಿಕ ಅಧ್ಯಯನ ಸಂಸ್ಥೆಯ ಸ್ಥಾಪಕನ್ಯಾಸಿ ಡಾ| ರಾಮಾನುಜನ್‌ ಸಿ. ಡ್ಯಾಕ್‌, “ಆಚಾರ್ಯ ಮಧ್ವರ ಗೀತಾಚಿಂತನೆ’ ಬಗ್ಗೆ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲ ವಿ| ವಿ. ಹರಿದಾಸ್‌ ಭಟ್ಟ ಅವರು ಚಿಂತನೆ ನಡೆಸಲಿದ್ದಾರೆ. ವಿ| ಕೃಷ್ಣರಾಜ್‌ ಭಟ್‌ ಕುತ್ಪಾಡಿ ನಿರೂಪಿಸುವರು. ಮಾಹಿತಿಗೆ ಮಹಿತೋಷ್‌ ಆಚಾರ್ಯ (9743293652) ಅವರನ್ನು ಸಂಪರ್ಕಿಸಲು ಸಮಿತಿ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next