Advertisement

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವೆಚ್ಚದ ಫಲಕ ಹಾಕಿಸಿ

12:57 PM May 11, 2021 | Team Udayavani |

ಸಿಂಧನೂರು: ಎಲ್ಲ ಖಾಸಗಿ ಆಸ್ಪತ್ರೆಗಳಲ್ಲೂ ಸರ್ಕಾರದ ನಿಯಮದನ್ವಯ ನಿಗದಿಪಡಿಸಿದ ಚಿಕಿತ್ಸೆ ವೆಚ್ಚದ ಫಲಕ ಅಳವಡಿಸಬೇಕು. ಇದಕ್ಕಾಗಿ ತಕ್ಷಣ ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ವೆಂಕಟರಾವ್‌ ನಾಡಗೌಡ ಸೂಚಿಸಿದರು.

Advertisement

ತಹಶೀಲ್ದಾರ್‌ ಕಚೇರಿಯಲ್ಲಿ ಸೋಮವಾರ ಕರೆದ ಅಧಿ ಕಾರಿಗಳ ಸಭೆಯಲ್ಲಿ ಅವರು ಸೂಚಿಸಿದರು. ಕೊರೊನಾ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳು ವಿ ಧಿಸಬೇಕಾದ ಶುಲ್ಕದ ಕುರಿತು ಈಗಾಗಲೇ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಆದರೂ, ಇದು ಪಾಲನೆಯಾಗುತ್ತಿಲ್ಲವೆಂಬ ದೂರುಗಳಿವೆ. ತಕ್ಷಣ ಎಲ್ಲ ಆಸ್ಪತ್ರೆಗಳಿಗೆ ಈ ಬಗ್ಗೆ ಸೂಚನೆ ನೀಡಿ, ನಾಳೆಯಿಂದಲೇ ಸರ್ಕಾರ ನಿಗದಿಪಡಿಸಿದ ದರದ ಪ್ರಕಾರವೇ ಶುಲ್ಕ ಪಡೆಯಲು ಸೂಚನೆ ನೀಡುವಂತೆ ಆದೇಶಿಸಿದರು.

ಪ್ರವೇಶ ನಿರ್ಬಂಧ: ಸರ್ಕಾರಿ ಹಾಗೂ ಖಾಸಗಿ ಕೋವಿಡ್‌ ವಾರ್ಡ್‌ಗಳಿಗೆ ಸಂಬಂ ಧಿಕರು ಹಾಗೂ ಇತರರು ನೇರವಾಗಿ ಪ್ರವೇಶಿಸಿ, ಸಾರ್ವಜನಿಕವಾಗಿ ಸುತ್ತಾಡುವುದು ಸರಿಯಲ್ಲ. ಖಾಸಗಿ, ಸರ್ಕಾರಿ ಆಸ್ಪತ್ರೆಗಳಿಂದಲೇ ಊಟದ ವ್ಯವಸ್ಥೆ ಕಲ್ಪಿಸಬೇಕು. ಅದಕ್ಕಾಗುವ ವೆಚ್ಚ ಬೇಕಾದರೆ, ರೋಗಿಗಳ ಸಂಬಂ  ಧಿಕರಿಂದ ಪಡದುಕೊಳ್ಳಬಹುದು. ಕೋವಿಡ್‌ ವಾರ್ಡ್‌ಗಳಿಗೆ ಕಡ್ಡಾಯವಾಗಿ ಒಬ್ಬ ಅಟೆಂಡರ್‌ ನೇಮಿಸಬೇಕು. ಅವರ ಕೈಗೆ ಆಹಾರ ಕೊಡುವ ವ್ಯವಸ್ಥೆಯಾಗಬೇಕು.ರೋಗಿ ಸ್ಥಿತಿಗತಿ ಬಗ್ಗೆ ಆಸ್ಪತ್ರೆ ಸಿಬ್ಬಂದಿಯೇ ದಿನಕ್ಕೊಮ್ಮೆ ಅಪ್‌ಡೇಟ್‌ ಮಾಡಬೇಕು. ಮುಕ್ತ ಪ್ರವೇಶಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಸೂಚಿಸಿದರು.

ಸೋಂಕಿತರ ಕರೆತರಲು ಬಸ್‌: ತಾಲೂಕಿನಲ್ಲಿ 843 ಸೋಂಕಿತರನ್ನು ಗುರುತಿಸಲಾಗಿದೆ. ಅವರನ್ನೆಲ್ಲ ಹೋಂ ಕ್ವಾರಂಟೈನ್‌ನಲ್ಲಿದ್ದು, ಅವರು ಹೊರಗಡೆ ಸುತ್ತಾಡುತ್ತಿರುವ ದೂರುಗಳಿವೆ. ಈ ಹಿನ್ನೆಲೆಯಲ್ಲಿ ಎಲ್ಲರನ್ನು ಕರೆತಂದು ಸರ್ಕಾರದಿಂದ ನಿಗದಿಪಡಿಸಿರುವ ಕೋವಿಡ್‌ ಸೆಂಟರ್‌ಗಳಲ್ಲಿ ಕ್ವಾರಂಟೈನ್‌ಗೆ ಒಳಪಡಿಸಬೇಕು. ಇದಕ್ಕಾಗಿ ಸಾರಿಗೆ ಘಟಕದಿಂದ 5 ಬಸ್‌ ಪಡೆದು ರೂಟ್‌ ನಿಗದಿಪಡಿಸಿಕೊಂಡು, ಮಂಗಳವಾರದಿಂದಲೇ ಈ ಕಾರ್ಯಾಚರಣೆ ನಡೆಸಬೇಕು ಎಂದರು.

ಕೊರೊನಾ ರೋಗಿಗಳು ಒಪ್ಪದಿದ್ದಲ್ಲಿ ಪೊಲೀಸರು ಅಗತ್ಯ ಸಿಬ್ಬಂದಿ ಕಳಿಸಿ, ಅವರ ಮನವೊಲಿಸಬೇಕು. ಚೈನ್‌ ಲಿಂಕ್‌ ಕಟ್‌ ಮಾಡುವುದಕ್ಕಾಗಿ ಈ ಕ್ರಮ ಅನಿವಾರ್ಯ ಎಂದು ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ ಅವರಿಗೆ ಸೂಚಿಸಿದರು. ಪಿಡಿಒಗಳು, ಕಂದಾಯ ಇಲಾಖೆ ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿರಲಿದ್ದು, ಅಗತ್ಯ ವ್ಯವಸ್ಥೆ ಒದಗಿಸಬೇಕು ಎಂದರು.

Advertisement

ಈ ವೇಳೆ ಜಿಪಂ ಸದಸ್ಯ ಬಸವರಾಜ ಹಿರೇಗೌಡರ, ಮುಖಂಡರಾದ ಸಣ್ಣ ಭೀಮನಗೌಡ ನೆಟೆಕಲ್‌, ದಾಸರಿ ಸತ್ಯನಾರಾಯಣ, ಎಂ.ಡಿ. ನದಿಮುಲ್ಲಾ, ತಹಶೀಲ್ದಾರ್‌ ಮಂಜುನಾಥ ಬೋಗಾವತಿ, ತಾಪಂ ಇಒ ಪವನ್‌ಕುಮಾರ್‌, ವೈದ್ಯ ಡಾ| ಜೀವನೇಶ್ವರಯ್ಯ, ತಾಲೂಕು ಆರೋಗ್ಯಾಧಿ ಕಾರಿ ಅಯ್ಯನಗೌಡ, ಪಿಎಸ್‌ಐ ವಿಜಯಕೃಷ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next