Advertisement

ವಿದೇಶಕ್ಕೆ ಹಾರಲಿರುವ ಪುಷ್ಪಕ ವಿಮಾನ

11:32 AM Jan 12, 2017 | |

ರಮೇಶ್‌ ಅರವಿಂದ್‌ ಅವರ “ಪುಷ್ಪಕ ವಿಮಾನ’ದ ಹಾರಾಟ ಜೋರಾಗಿದೆ. ವಿಮಾನದಲ್ಲಿ ಪ್ರಯಾಣಿಸಿದವರೆಲ್ಲಾ ಖುಷಿಯಾಗಿದ್ದಾರೆ. ಕೇವಲ ದೇಶವಷ್ಟೇ ಅಲ್ಲದೇ, ವಿದೇಶಗಳಲ್ಲೂ “ಪುಷ್ಪಕ ವಿಮಾನ’ ಹಾರಿಸಲು ಚಿತ್ರತಂಡ ನಿರ್ಧರಿಸಿದೆ. ಮುಂದಿನ ವಾರ “ಪುಷ್ಪಕ ವಿಮಾನ’ ಸಿನಿಮಾ ವಿದೇಶಗಳಲ್ಲೂ ಬಿಡುಗಡೆಯಾಗಲಿದೆ. ಈಗಾಗಲೇ ಅದಕ್ಕೆ ಬೇಕಾದ ತಯಾರಿ ನಡೆಸಿದೆ ಚಿತ್ರತಂಡ.

Advertisement

ಇನ್ನು ಸಿನಿಮಾದ ಕಲೆಕ್ಷನ್‌ ವಿಷಯದಲ್ಲೂ ಚಿತ್ರತಂಡ ಖುಷಿಯಾಗಿದ್ದು, ದಿನದಿಂದ ದಿನಕ್ಕೆ ಕಲೆಕ್ಷನ್‌ ಹೆಚ್ಚಾಗುತ್ತಿದೆ ಎಂಬುದು ಚಿತ್ರತಂಡದ ಮಾತು. ಸಾಮಾನ್ಯವಾಗಿ ಒಂದು ಸಿನಿಮಾವನ್ನು ಮಾಸ್‌ ಅಥವಾ ಕ್ಲಾಸ್‌  ಪ್ರೇಕ್ಷಕರು ಇಷ್ಟಪಡುತ್ತಾರೆ. ಆದರೆ, “ಪುಷ್ಪಕ ವಿಮಾನ’ ಚಿತ್ರವನ್ನು ಎಲ್ಲಾ ವರ್ಗದವರು ಇಷ್ಟಪಡುತ್ತಿದ್ದು, ಅದರಲ್ಲೂ ಫ್ಯಾಮಿಲಿ ಆಡಿಯನ್ಸ್‌ “ಪುಷ್ಪಕ ವಿಮಾನ’ವನ್ನು ಮೆಚ್ಚಿಕೊಂಡಿರೋದು ಚಿತ್ರತಂಡದ ಖುಷಿಗೆ ಕಾರಣವಾಗಿದೆ.

ಇದು ಅಪ್ಪ-ಮಗಳ ನಡುವಿನ ಸೆಂಟಿಮೆಂಟ್‌ ಕಥೆಯಾಗಿದ್ದು, ಮಗಳೇ ತನ್ನ ಪ್ರಪಂಚ ಎಂದು ಭಾವಿಸಿರುವ ಅಪ್ಪ ಹಾಗೂ ಅಪ್ಪನನ್ನು ಬಿಟ್ಟರೇ ಬೇರೆ ಜಗತ್ತೇ ಇಲ್ಲ ಎಂದುಕೊಂಡಿರುವ ಮಗಳ ಸಂಬಂಧದ ನಡುವೆ ನಡೆಯುವ ಕಥೆಯನ್ನು ನಿರ್ದೇಶಕ ರವೀಂದ್ರ ಅವರ ಮನತಟ್ಟುವಂತೆ ಹೇಳುವ ಮೂಲಕ “ಪುಷ್ಪಕ ವಿಮಾನ’ ಚಿತ್ರವನ್ನು ಜನ ಇಷ್ಟಪಡುತ್ತಿದ್ದಾರೆ. ಚಿತ್ರದಲ್ಲಿ ರಮೇಶ್‌ ಅರವಿಂದ್‌, ಯುವಿನಾ, ರಚಿತಾ ರಾಮ್‌, ಜೂಹಿ ಚಾವ್ಲಾ, ರವಿಕಾಳೆ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next