ಡೆಹ್ರಾಡೂನ್: ಬಿಜೆಪಿ ಸೋಮವಾರ 11 ದಿನಗಳ ಸಸ್ಪೆನ್ಸ್‌ಗೆ ಅಂತ್ಯ ಹಾಡಿದ್ದು, ಉತ್ತರಾಖಂಡ್ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಮುಂದುವರಿಯಲಿದ್ದಾರೆ ಎಂದು ಹೇಳಿದೆ.
ಉತ್ತರಾಖಂಡದ ನೂತನ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿಯನ್ನಾಗಿ ಧಾಮಿ ಅವರನ್ನು ಆಯ್ಕೆ ಮಾಡಲಾಗಿದೆ.
ಮಹತ್ವದ ಸಭೆಯಲ್ಲಿ ಉತ್ತರಾಖಂಡದ ಬಿಜೆಪಿಯ ಕೇಂದ್ರ ವೀಕ್ಷಕರಾದ ರಾಜನಾಥ್ ಸಿಂಗ್, ಮೀನಾಕ್ಷಿ ಲೇಖಿ ಮತ್ತು ರಾಜ್ಯದ ಚುನಾವಣಾ ಉಸ್ತುವಾರಿ ಪ್ರಲ್ಹಾದ್ ಜೋಶಿ ಭಾಗವಹಿಸಿದ್ದರು.
ಧಾಮಿ ಅವರ ನಾಯಕತ್ವದಲ್ಲಿ ಫೆಬ್ರವರಿ 14 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸಿತ್ತು ಹುದ್ದೆಗೆ ಅವರ ಹೆಸರೇ ಮುಂಚೂಣಿಯಲ್ಲಿತ್ತು.
2012 ರ ವಿಧಾನಸಭಾ ಚುನಾವಣೆಯ ನಂತರ ಅವರು ಗೆಲ್ಲುತ್ತಿದ್ದ ಖತಿಮಾ ಕ್ಷೇತ್ರದಲ್ಲಿ ಧಾಮಿ ಅವರು ಅನಿರೀಕ್ಷಿತವಾಗಿ ಸೋತಿದ್ದರಿಂದ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಬಿಜೆಪಿಗೆ ಸಂದಿಗ್ಧತೆ ಎದುರಾಗಿತ್ತು. 70 ಸ್ಥಾನಗಳ ಪೈಕಿ 47 ಸ್ಥಾನಗಳನ್ನು ಪಕ್ಷವು ಗೆದ್ದು ಭರ್ಜರಿ ಬಹುಮತ ಪಡೆದಿದೆ.