ನವದೆಹಲಿ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪಕ್ಷ ಬಹುಮತದಲ್ಲಿ ಗೆದ್ದ ವೇಳೆ ಸೋಲನ್ನಪ್ಪಿರುವ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರನ್ನು ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರಿಗೆ ಹೋಲಿಸಿ, ಅವರು “ಒಳ್ಳೆಯ ಫಿನಿಶರ್” ಎಂದು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯನ್ನು ಎದುರಿಸಲು ಕೇವಲ ತಿಂಗಳುಗಳು ಬಾಕಿ ಉಳಿದಿದ್ದ ವೇಳೆ ಕಳೆದ ಜುಲೈನಲ್ಲಿ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕತ್ವವು ಧಾಮಿಯನ್ನು ಅಸ್ಪಷ್ಟತೆಯಿಂದ ಒಪ್ಪಿಸಿತ್ತು. ಅದಕ್ಕೂ ಹಿಂದೆ 2021 ರಲ್ಲಿ ಅವರ ಪಕ್ಷದ ಎರಡನೇ ಸಿಎಂ ಬದಲಿಯಾಗಿದ್ದರು, ಈ ಹಿಂದೆ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಬದಲಿಸಿ ತಿರತ್ ಸಿಂಗ್ ರಾವತ್‌ಗೆ ಪಟ್ಟ ಕಟ್ಟಲಾಗಿತ್ತು.
ಉತ್ತರಾಖಂಡದಲ್ಲಿ ಆಡಳಿತಾರೂಢ ಪಕ್ಷ ಮತ್ತೊಮ್ಮೆ ಸರ್ಕಾರ ರಚಿಸಲು ಸಜ್ಜಾಗುತ್ತಿದ್ದು, ರಾಜ್ಯದ 21 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದು ಪಕ್ಷವು ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿದೆ. ಖತಿಮಾ ಕ್ಷೇತ್ರದಲ್ಲಿ ಧಾಮಿ ಸುಮಾರು 6,500 ಮತಗಳ ಅಂತರದಿಂದ ಸೋತಿದ್ದಾರೆ.
ಜುಲೈನಲ್ಲಿ ಅಧಿಕಾರ ವಹಿಸಿಕೊಂಡಾಗ 45 ನೇ ವಯಸ್ಸಿನ ಅವರು ರಾಜ್ಯದ ಅತ್ಯಂತ ಕಿರಿಯ ಮುಖ್ಯಮಂತ್ರಿಯಾಗಿದ್ದರು. ರಾಜ್ಯವು ಹಲವು ಸಮಸ್ಯೆಗಳ ಸರಣಿಯೊಂದಿಗೆ ಸೆಣಸಾಡುತ್ತಿದೆ. ಬಿಜೆಪಿ ಕೇಂದ್ರ ನಾಯಕತ್ವ ಧಾಮಿ ಅವರನ್ನೇ ಮುಂದುವರಿಸುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದ್ದು, ಪರ್ಯಾಯ ನಾಯಕತ್ವಕ್ಕೆ ಮಣೆ ಹಾಕುತ್ತದೆಯೋ ಕಾದು ನೋಡಬೇಕಾಗಿದೆ.
ಧಾಮಿ ಅವರು ಈಗಾಗಲೇ ರಾಜೀನಾಮೆ ಸಲ್ಲಿಸಿದ್ದು, ಮುಂದಿನ ಆಯ್ಕೆ ನಡೆಯುವ ವರೆಗೆ ಅವರನ್ನು ಹಂಗಾಮಿ ಸ್ಥಾನದಲ್ಲಿ ಮುಂದುವರಿಯುವಂತೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ.