ಗುರುಗ್ರಾಮ: ದೆಹಲಿಯ ಹೊರವಲಯದ ಗುರುಗ್ರಾಮದಲ್ಲಿ ಚಲಿಸುತ್ತಿರುವ ಕಾರಿನ ಮೇಲೆ ವ್ಯಕ್ತಿಯೊಬ್ಬ ಪುಶ್ ಅಪ್ಸ್ (ದಂಡ) ಮಾಡುತ್ತಿರುವ ವಿಡಿಯೊ ಎಲ್ಲೆಡೆ ವೈರಲ್ ಆಗಿದೆ. ಕಾರಿನಲ್ಲಿ ಐವರು ಸಂಚರಿಸುತ್ತಿದ್ದರು. ಎಲ್ಲರೂ ಮದ್ಯದ ನಶೆಯಲ್ಲಿದ್ದರು. ಚಲಿಸುತ್ತಿದ್ದ ಕಾರಿನಲ್ಲಿ ನಾಲ್ವರು ಕಿಟಕಿಯ ಆಚೆ ನೇತಾಡುತ್ತಿದ್ದರು. ಒಬ್ಟಾತ ಕಾರಿನ ಮೇಲೆ ಹತ್ತಿ ಪುಶ್ ಅಪ್ಸ್ (ದಂಡ) ಮಾಡಿದ್ದಾನೆ. ಅಲ್ಲದೇ ಅಲ್ಲೇ ಕುಳಿತು ಮದ್ಯ ಸೇವಿಸಿದ್ದಾನೆ. ಈ ಸಂಬಂಧ ಗುರುಗ್ರಾಮದ ಪೊಲೀಸರು ಪುಶ್ ಅಪ್ಸ್ ಮಾಡಿದ ಲೋಕೇಶ್ ಎಂಬಾತನನ್ನು ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿದ್ದಾರೆ. ಅಲ್ಲದೇ ಕಾರಿನ ಮಾಲಿಕರಿಗೆ 6,500 ರೂ. ದಂಡವನ್ನು ವಿಧಿಸಿದ್ದಾರೆ. ಪ್ರದೀಪ್ ದುಬೆ ಎಂಬಾತ ಈ ಕುರಿತ ವಿಡಿಯೊ ಮತ್ತು ಚಿತ್ರವನ್ನು ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿದ್ದಾನೆ. “ರಸ್ತೆಗಳಲ್ಲಿ ಈ ರೀತಿಯ ಕೃತ್ಯಗಳನ್ನು ಸಹಿಸಲು ಆಗುವುದಿಲ್ಲ” ಎಂದು ಡಿಸಿಪಿ (ಸಂಚಾರ) ವೀರೇಂದ್ರ ವಿಜಿ ಎಚ್ಚರಿಸಿದ್ದಾರೆ.