Advertisement

ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ: ಆಟೋ ಚಾಲಕ ಪುರುಷೋತ್ತಮ ಪೂಜಾರಿ ಗುಣಮುಖ

11:21 PM Jan 14, 2023 | Team Udayavani |

ಮಂಗಳೂರು: ನಾಗುರಿಯಲ್ಲಿ ನ. 19ರಂದು ಆಟೋರಿಕ್ಷಾದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟ ಸಂಭವಿಸಿ ಗಾಯಗೊಂಡಿದ್ದ ಆಟೋರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಶನಿವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

Advertisement

ಪುರುಷೋತ್ತಮ ಅವರು ಪೂರ್ಣವಾಗಿ ಗುಣಮುಖಗೊಂಡಿದ್ದಾರೆ ಎಂದು ಅವರು ಚಿಕಿತ್ಸೆ ಪಡೆದ ಮಂಗಳೂರಿನ ಫಾದರ್‌ ಮುಲ್ಲರ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಉದಯ ಕುಮಾರ್‌ ಕೆ. ತಿಳಿಸಿದ್ದಾರೆ.

ಪುರುಷೋತ್ತಮ ಅವರು ಸೋಂಕಿನಿಂದ ರಕ್ಷಿಸಿಕೊಳ್ಳಲು ಇನ್ನೂ ಕನಿಷ್ಠ ಒಂದು ತಿಂಗಳ ಕಾಲ ಮನೆಯಲ್ಲೇ ಉಳಿದುಕೊಳ್ಳುವಂತೆ ವೈದ್ಯರು ಸೂಚಿಸಿರುವುದಾಗಿ ಅವರ ಮನೆಯವರು ತಿಳಿಸಿದ್ದಾರೆ. ಪುರುಷೋತ್ತಮ ಅವರ ಮನೆ ದುಃಸ್ಥಿತಿಯಲ್ಲಿದ್ದ ಹಿನ್ನೆಲೆಯಲ್ಲಿ ಗುರು ಬೆಳದಿಂಗಳು ಫೌಂಡೇಶನ್‌ ಮೂಲಕ ದುರಸ್ತಿ ಕೈಗೊಳ್ಳಲಾಗಿದೆ. ಹೀಗಾ ಗಿ ಕುಟುಂಬ ಸದ್ಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ.

ಪರಿಹಾರ ಇನ್ನೂ ಬಾಕಿ
ಪುರುಷೋತ್ತಮ ಅವರಿಗೆ ಸರಕಾರದಿಂದ ಪರಿಹಾರ ನೀಡುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ ನೀಡಿದ್ದರು. ಆದರೆ ಪರಿಹಾರ ಇನ್ನಷ್ಟೇ ದೊರೆಯಬೇಕಿದೆ. ವೈಯಕ್ತಿಕ ನೆಲೆಯಲ್ಲಿ ಗೃಹ ಸಚಿವರು 50,000 ರೂ. ಮತ್ತು ಸುನಿಲ್‌ ಕುಮಾರ್‌ 25,000 ರೂ. ನೆರವು ನೀಡಿದ್ದರು. ಪುರುಷೋತ್ತಮ ಅವರ ಚಿಕಿತ್ಸೆಯ ವೆಚ್ಚವನ್ನು ಇಎಸ್‌ಐ ಮತ್ತು ಸರಕಾರದ ವತಿಯಿಂದ ಭರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next