Advertisement
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಶಿವಾಜಿ ಮಹಾರಾಜರ ಮೂರ್ತಿ ಬಳಸಿಕೊಂಡು ವೋಟು ಗಳಿಸುವ ಹುನ್ನಾರ ಇದರಲ್ಲಿ ಅಡಗಿದ್ದು, ಮತ ಗಳಿಕೆ ಲೆಕ್ಕಾಚಾರದಲ್ಲಿ ಮೂರೂ ಪಕ್ಷಗಳು ತೊಡಗಿಕೊಂಡಿವೆ. ಈಗ ಎಂಇಎಸ್ ಮಾ. 19ರಂದು ರಾಜಹಂಸಗಡದಲ್ಲಿ ಮೂರ್ತಿ ಶುದ್ಧೀಕರಣ ಮಾಡುತ್ತಿದೆ. ಎರಡೆರಡು ಬಾರಿ ಅನಾವರಣ: ಸರ್ಕಾರದ ಅನುದಾನದಲ್ಲಿ ಮೂರ್ತಿ ನಿರ್ಮಾಣವಾಗಿದೆ ಎಂಬ ಕಾರಣಕ್ಕೆ ಮಾ.2ರಂದು ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದರು. ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಜಿದ್ದಿಗೆ ಬಿದ್ದು ಮುಖ್ಯಮಂತ್ರಿ ಅವರನ್ನು ಕರೆಸಿ ಉದ್ಘಾಟನೆ ಮಾಡಿಸಿದರು. ಈ ಕಾರ್ಯಕ್ರಮಕ್ಕೆ ಶಾಸಕಿ ಹೆಬ್ಟಾಳಕರ ಗೈರು ಹಾಜರಾಗಿದ್ದರು.
Related Articles
Advertisement
ಹೆಬ್ಟಾಳಕರ್ ಬದ್ಧ ವೈರಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಈ ವಿಷಯ ಗೊತ್ತಾಗುತ್ತಿದ್ದಂತೆ ಸರ್ಕಾರದ ಶಿಷ್ಟಾಚಾರ ಪ್ರಕಾರವೇ ಮೂರ್ತಿ ಲೋಕಾರ್ಪಣೆಗೆ ಸಿದ್ಧತೆ ಮಾಡಿಕೊಂಡು ಸಿಎಂ ಬೊಮ್ಮಾಯಿ ಮನವೊಲಿಸಿ ಕರೆಸುವ ಮೂಲಕ ಹಠ ಸಾಧಿಸಿದರು. ಹೆಬ್ಟಾಳಕರ ಅವರೂ ಶಿವಾಜಿ ಮಹಾರಾಜರ ವಂಶಸ್ಥ ಸಂಭಾಜಿ ರಾಜೇ ಭೋಸಲೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕರಾದ ಸತೇಜ್(ಬಂಟಿ) ಪಾಟೀಲ ಹಾಗೂ ಧಿಧೀರಜ್ ದೇಶಮುಖ ಅವರನ್ನು ಕರೆಸಿ ಅಭೂತಪೂರ್ವ ಕಾರ್ಯಕ್ರಮ ನಡೆಸಿದ್ದರು.
ಎಂಇಎಸ್ ನಾಯಕರು ಶಿವಾಜಿ ಮಹಾರಾಜರನ್ನು ಶುದ್ಧೀಕರಣ ಮಾಡುವ ಬದಲು ತಮ್ಮ ಮನಸ್ಸು ಶುದ್ಧ ಮಾಡಿಕೊಳ್ಳಲಿ. ರಾಜಹಂಸಗಡ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಶಿವಾಜಿ ವಂಶಸ್ಥರಾದ ಸಂಭಾಜಿರಾಜೇ ಭೋಸಲೆ ಶಾಸ್ತ್ರೋಕ್ತವಾಗಿ ಅನಾವರಣ ಮಾಡಿದ್ದಕ್ಕೆ ಶುದ್ಧೀಕರಣ ಮಾಡುತ್ತಿದ್ದಾರಾ?. ಕ್ಷೇತ್ರದಲ್ಲಿ ನಾನು 103 ಮಂದಿರ ಜೀಣೋದ್ಧಾರ ಮಾಡಿದ್ದನ್ನೂ ಶುದ್ಧೀಕರಣ ಮಾಡುತ್ತಾರಾ?, ಶುದ್ಧೀಕರಣ ಮಾಡಲು ಇವರಿಗೆ ನೈತಿಕತೆ ಏನಿದೆ?– ಲಕ್ಷ್ಮೀ ಹೆಬ್ಟಾಳಕರ್, ಶಾಸಕರು, ಬೆಳಗಾವಿ ಗ್ರಾಮೀಣ ರಾಜಕೀಯ ಲಾಭಕ್ಕಾಗಿ ಎಂಇಎಸ್ ಹುನ್ನಾರ
ಬೆಳಗಾವಿಯಲ್ಲಿ ಎಂಇಎಸ್ ನಾಯಕರು ಒಂದಿಲ್ಲೊಂದು ಕಿತಾಪತಿ ಮಾಡಿಕೊಂಡೇ ಬರುತ್ತಾರೆ. ಚುನಾವಣೆ ಸಮೀಪಿಸಿದಾಗಲಂತೂ ಕನ್ನಡ-ಮರಾಠಿ ಭಾಷಿಕರ ಸೌಹಾರ್ದತೆ ಹಾಳು ಮಾಡಿ ರಾಜಕೀಯ ಲಾಭ ಪಡೆಯುವುದು ಎಂಇಎಸ್‌ನ ಅಜೆಂಡಾ. ರಾಜಕೀಯವಾಗಿ ಸಂಪೂರ್ಣ ನೆಲಕಚ್ಚಿರುವ ಎಂಇಎಸ್ ವಿಧಾನಸಭೆಯಲ್ಲಿ ಗೆಲ್ಲಬೇಕೆಂಬ ದುರಾಸೆಯಿಂದ ವಿಷ ಬೀಜ ಬಿತ್ತುತ್ತಿದೆ. ಹೀಗಾಗಿ ಮೂರ್ತಿ ಶುದ್ಧೀಕರಣ ನೆಪದಲ್ಲಿ ರಾಜಕೀಯ ಸಂಘರ್ಷಕ್ಕೆ ಮುಂದಾಗಿದೆ. ~ಭೈರೋಬಾ ಕಾಂಬಳೆ