Advertisement

ಪುರಿ ಜಗನ್ನಾಥ ಉತ್ಖನನಕ್ಕೆ ತಡೆ : ಇಂದು ಸುಪ್ರೀಂ ತೀರ್ಪು

10:13 PM Jun 02, 2022 | Team Udayavani |

ನವದೆಹಲಿ : ಪುರಿಯಲ್ಲಿರುವ ವಿಶ್ವವಿಖ್ಯಾತ ಜಗನ್ನಾಥ ದೇವಸ್ಥಾನದ ಸುತ್ತ ನಡೆಯುತ್ತಿರುವ ಉತ್ಖನನ ಮತ್ತು ನಿರ್ಮಾಣವನ್ನು ನಿಲ್ಲಿಸಬೇಕೆಂದು ಮನವಿ ಮಾಡಿರುವ ಅರ್ಜಿ ಕುರಿತ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ಶುಕ್ರವಾರಕ್ಕೆ ಕಾಯ್ದಿರಿಸಿದೆ.

Advertisement

ಒಡಿಶಾ ಸರ್ಕಾರ ಕೈಗೆತ್ತಿಕೊಂಡಿರುವ ಈ ಕಾರ್ಯವನ್ನು ನಿಲ್ಲಿಸಬೇಕೆಂದು ಮೊದಲು ಅರ್ಜಿದಾರರು ಒರಿಸ್ಸಾ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದನ್ನು ಉಚ್ಚ ನ್ಯಾಯಾಲಯ ಪುರಸ್ಕರಿಸಿರಲಿಲ್ಲ. ಇದರ ಬೆನ್ನಲ್ಲೇ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಯಾಗಿತ್ತು.

ಈ ಬಗ್ಗೆ ಎರಡು ಅರ್ಜಿಗಳು ಸಲ್ಲಿಕೆಯಾಗಿವೆ. ಒಬ್ಬ ಅರ್ಜಿದಾರರ ಪರ ಮಾತನಾಡಿದ ವಕೀಲರು, 1958ರ ಭಾರತೀಯ ಸ್ಮಾರಕ ಮತ್ತು ಪುರಾತತ್ವ ನಿವೇಶನಗಳ ಕಾಯ್ದೆ ಪ್ರಕಾರ, ಸಂರಕ್ಷಿತ ಕಟ್ಟಡಗಳನ್ನು ಅಗೆಯಲು ಅಧಿಕೃತ ಪ್ರಾಧಿಕಾರದ ಪೂರ್ವಾನುಮತಿ ಪಡೆದಿರಬೇಕು. ಆದರೆ ಒಡಿಶಾ ಸರ್ಕಾರ ಎನ್‌ಎಂಎ (ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರ) ಅನುಮತಿ ಪಡೆದಿದೆ. ಇದಕ್ಕೆ ಅನುಮತಿ ಕೊಡುವ ಅಧಿಕಾರವಿಲ್ಲ. ಕಾಯ್ದೆಯ ಪ್ರಕಾರ ಭಾರತೀಯ ಪುರಾತತ್ವ ಇಲಾಖೆಯ ನಿರ್ದೇಶಕರು ಈ ಅನುಮತಿ ನೀಡಬೇಕು ಎಂದಿದ್ದಾರೆ. ಇನ್ನೊಬ್ಬ ಅರ್ಜಿದಾರರು, ದೇವಸ್ಥಾನದ ನಿಷೇಧಿತ ವಲಯದಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಎಎಸ್‌ಐ ವರದಿಯಲ್ಲೇ ಹೇಳಲಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next