Advertisement

Puri Jagannath: ರತ್ನ ಭಂಡಾರದಲ್ಲಿ ಪುರಾತನ ಶಸ್ತ್ರಾಸ್ತ್ರಗಳು ಪತ್ತೆ!

01:55 AM Jul 21, 2024 | Team Udayavani |

ಭುವನೇಶ್ವರ: ಪುರಿಯ ಜಗನ್ನಾಥ ದೇವಾಲಯದಲ್ಲಿರುವ ರತ್ನ ಭಂಡಾರದಲ್ಲಿನ ಅಮೂಲ್ಯ ವಸ್ತುಗಳನ್ನು ಗುರುವಾರ ಸ್ಥಳಾಂತರಿಸುವ ವೇಳೆ ರಾಜರ ಕಾಲದ ಹಲವು ಆಯಧಗಳು ಪತ್ತೆಯಾಗಿವೆ. ಹಿಂದಿನ ಕಾಲದಲ್ಲಿ ರಾಜರು ಯದ್ಧದಲ್ಲಿ ಗೆದ್ದ ಬಳಿಕ ದೇವಾಲಯಕ್ಕೆ ಚಿನ್ನ ಸೇರಿ ಹಲವು ವಸ್ತುಗಳನ್ನು ನೀಡುತ್ತಿದ್ದರು ಎಂಬ ಸ್ಥಳೀಯರ ನಂಬಿಕೆಗೆ ಇದು ಪುಷ್ಟಿ ನೀಡಿದೆ.

Advertisement

ಸ್ಥಳಾಂತರದ ಸಮಯದಲ್ಲಿ ರತ್ನ ಭಂಡಾರದ ಒಳಗಿನ ಕೋಣೆಯಲ್ಲಿನ ಮರದ ಪೆಟ್ಟಿಗೆ ಗಳಲ್ಲಿ ಕೆಲವು ಹಳೆಯ ಖಡ್ಗ, ಈಟಿ ಗಳು ದೊರೆತಿವೆ. ಶಸ್ತ್ರಾಸ್ತ್ರಗಳು ಸಾಕಷ್ಟು ಭಾರವಾಗಿದ್ದು, ಹಳೆಯ ವಾದ್ದರಿಂದ ಕಪ್ಪು ಬಣ್ಣಕ್ಕೆ ತಿರುಗಿದ್ದವು ಎಂದು ರತ್ನ ಭಂಡಾರ ಪ್ರವೇಶಿಸಿದ 11 ಮಂದಿಯ ಸಮಿತಿಯಲ್ಲಿನ ಸದಸ್ಯರೊಬ್ಬರು ಹೇಳಿ ದ್ದಾರೆ. ಜತೆಗೆ ಅವುಗಳನ್ನು ಸೀಲ್‌ ಮಾಡಿ ಇರಿಸಲಾಗಿದೆ ಎಂದು ಹೇಳಿದ್ದಾರೆ.

ಒಳಕೋಣೆಯಲ್ಲಿ ರಹಸ್ಯ ಸುರಂಗ?: ರತ್ನ ಭಂಡಾರದ ಒಳಗೆ ರಹಸ್ಯ ಸುರಂಗ ವಿದೆ ಎನ್ನಲಾಗಿದೆ. ಅದನ್ನು ಪತ್ತೆ ಹಚ್ಚಲು ಭಾರತೀಯ ಪುರಾತತ್ವ ಇಲಾಖೆ ಆಧುನಿಕ ಲೇಸರ್‌ ಸ್ಕ್ಯಾನಿಂಗ್‌ ತಂತ್ರಜ್ಞಾನ ಬಳಸಿ ತನಿಖೆ ನಡೆಸಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next