Advertisement

ಶುದ್ಧ ನೀರಿನ ಘಟಕಕ್ಕೆ ಯೋಗೇಶ್ವರ್‌ ಶಂಕು ಸ್ಥಾಪನೆ

02:25 PM Feb 09, 2022 | Team Udayavani |

ಚನ್ನಪಟ್ಟಣ: ಈ ಹಿಂದೆ ನಾನು ತಾಲೂಕಿನಾದ್ಯಂತ ಸ್ಥಾಪಿಸಿದ್ದ ಸಾಕ ಷ್ಟು ಶುದ್ಧ ಕುಡಿಯುವ ನೀರಿನಘಟಕಗಳು ಸರಿಯಾಗಿ ನಿರ್ವಹಣೆ ಇಲ್ಲದೆ ಜನತೆಗೆ ಸಮಸ್ಯೆಯಾಗಿರುವ ಬಗ್ಗೆ ಸಾರ್ವಜನಿಕರು ನನಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಮುಂದಿನ ದಿನಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರನ್ನು ಭೇಟಿ ಮಾಡಿ ಈ ಘಟಕಗಳನ್ನು ಮತ್ತೆ ಅರಂಭಿಸುವ ಬಗ್ಗೆ ಗಮನ ಸೆಳೆಯಲಾಗುವುದು ಎಂದು ಶಾಸಕ ಸಿ.ಪಿ.ಯೋಗೇಶ್ವರ್‌ ತಿಳಿಸಿದರು.

Advertisement

ತಾಲೂಕಿನ ಗಾಂಧಿ ಗ್ರಾಮದಲ್ಲಿ ತಮ್ಮ ವಿಧಾನಪರಿಷತ್‌ ಅನುದಾನದಿಂದ ನೂತನವಾಗಿ ಸ್ಥಾಪಿಸಲು ಉದ್ದೇಶಿಸಿರುವ ಶುದ್ಧ ಕುಡಿಯುವನೀರಿನ ಘಟಕಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕಲುಷಿತ ನೀರಿನ ಸೇವನೆಯಿಂದಾಗಿ ಗ್ರಾಮೀಣ ಭಾಗದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ತಾಲೂಕಿನ ಪ್ರತಿಗ್ರಾಮದಲ್ಲಿ ಒಂದು ಶುದ್ಧಕುಡಿಯುವ ನೀರಿನ ಘಟಕ ಸ್ಥಾಪಿಸಲು ಈ ಹಿಂದೆ ನಾನು ಶ್ರಮಿಸಿದ್ದೆ. ಆದರೆ, ಇದೀಗ ಈ ಕೇಂದ್ರಗಳುಸೂಕ್ತ ನಿರ್ವಹಣೆ ಇಲ್ಲದೆ ಸ್ಥಗಿತಗೊಂಡಿವೆ ಎಂದು ಅವರು ದೂರಿದರು.

ಘಟಕ ನಿರ್ವಹಣೆ ಮುಖ್ಯ: ಶುದ್ಧ ಕುಡಿಯುವ ನೀರಿನ ಘಟಕಗಳು ಹೆಚ್ಚುಕಾಲ ಬಾಳಿಕೆ ಬರಬೇಕುಎಂದಾದಲ್ಲಿ ಅವುಗಳನ್ನು ಸದಾಕಾಲ ನಿರ್ವಹಣೆ ಮಾಡಬೇಕು. ಕೆಲ ಉಪಕರಣಗಳನ್ನು ಆಗಾಗ ಬದಲಿಸಬೇಕು. ಇದರ ನಿರ್ವಹಣೆ ಜವಾಬ್ದಾರಿಯನ್ನು ಗ್ರಾಪಂಗಳ ಮೂಲಕ ನಿರ್ವಹಿಸ ಬೇಕಿದೆ.ಆದರೆ, ಈ ಕೆಲಸಗಳು ನಡೆಯದ ಕಾರಣ ಗ್ರಾಮೀಣ ಭಾಗ ದ ಸಾಕಷ್ಟು ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿವೆ ಎಂದು ತಿಳಿಸಿದರು.

ಮತ್ತೆ ಆರಂಭಗೊಳ್ಳಬೇಕು: ಸ್ಥಗಿತಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕ ಮತ್ತೆ ಆರಂಭಿಸುವಂತೆ ಹಾಗೂ ಇವುಗಳ ನಿರ್ವಹಣೆಗೆಶಾಶ್ವತ ಪರಿಹಾರ ನೀಡುವಂತೆ ಸಚಿವರನ್ನು ಭೇಟಿಮಾಡಿ ಸರ್ಕಾರದಿಂದ ವಿಶೇಷ ಅನುದಾನಬಿಡುಗಡೆ ಮಾಡುವಂತೆ ಕೋರುತ್ತೇನೆ. ಎಲ್ಲ ಗ್ರಾಮದಲ್ಲೂ ಮತ್ತೆ ಶುದ್ಧ ಕುಡಿಯುವ ನೀರಿನಘಟಕ ಆರಂಭಗೊಳ್ಳುವಂತೆ ಮಾಡುತ್ತೇನೆ ಎಂದು ಯೋಗೇಶ್ವರ್‌ ತಿಳಿಸಿದರು.

ಪ್ರತಿಯೊಬ್ಬರು ಶುದ್ಧಕುಡಿಯುವ ನೀರನ್ನುಸೇವಿಸುವ ಮೂಲಕ ಗ್ರಾಮದ ಜನತೆ ಆರೋಗ್ಯಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದ ಯೋಗೇಶ್ವರ್‌, ಗ್ರಾಮದ ಅಭಿವೃದ್ಧಿಗೆ ನಾನು ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುದುಗೆರೆಗ್ರಾಪಂ ಅಧ್ಯಕ್ಷೆ ಬಿಂದುಶ್ರೀ, ಗ್ರಾಪಂ ಮಾಜಿ ಅಧ್ಯಕ್ಷೆಸುಜಾತ ಲೋಕೇಶ್‌, ಗೀತಾ(ಇಂದ್ರಮ್ಮ) ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next