Advertisement

ಇದ್ದೂ ಇಲ್ಲದಂತಾದ ಶುದ್ಧ ನೀರು

06:35 PM Sep 23, 2021 | Nagendra Trasi |

ಇಂಡಿ: ಜೀವಜಲ ಆಗಬೇಕಾಗಿದ್ದ ಗ್ರಾಮೀಣ ಭಾಗದ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಜೀವವೇ ಇಲ್ಲದಂತಾಗಿದೆ. ಗ್ರಾಮೀಣ ಭಾಗದ ಜನರಿಗೆ ಶುದ್ದ ಕುಡಿಯುವ ನೀರು ಪೂರೈಸಿ ಅವರ ಆರೋಗ್ಯ ಕಾಪಾಡಬೇಕೆಂಬ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯ ಮೂಲ ಉದ್ದೇಶ ಅಧಿಕಾರಿಗಳ ಬೇಜವಾಬ್ದಾರಿತನದಿಂದ ತಣ್ಣೀರೆರಚಿದೆ.

Advertisement

ಇಂಡಿ ತಾಲೂಕಿನಲ್ಲಿ ಒಟ್ಟು 32 ಗ್ರಾಪಂಗಳ ಒಟ್ಟು 192 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅದರಲ್ಲಿ 152 ಘಟಕಗಳು ಕಾರ್ಯನಿರ್ವಹಣೆ ಮಾಡುತ್ತಿವೆ ಎಂದು ಅ ಧಿಕಾರಿಗಳು ತಿಳಿಸಿದ್ದಾರೆ. ಆದರೆ ನೈಜತೆಯೇ ಬೇರೆಯಾಗಿದ್ದು ಸುಮಾರು ಅರ್ಧಕ್ಕಿಂತ ಹೆಚ್ಚು ಘಟಕಗಳು ಸ್ಥಗಿತಗೊಂಡಿವೆ. ಗ್ರಾಮೀಣ ಭಾಗದ ಜನ ಗ್ರಾಪಂ ಮತ್ತು ಸಂಬಂ ಧಿಸಿದ ಗ್ರಾಮೀಣ ಕುಡಿಯುವ ನೀರು ಇಲಾಖೆಗೆ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಾಂತರ ಜನರ ಆರೋಪವಾಗಿದೆ.

ಅಧಿಕಾರಿಗಳ ಹೇಳಿಕೆ ಪ್ರಕಾರ ತಾಲ್ಗಲೂಕಿನಲ್ಲಿ ಕೇವಲ 30 ಘಟಕಗಳು ಮಾತ್ರ ರಿಪೇರಿಗೆ ಬಂದಿವೆ. ವಾಸ್ತವದಲ್ಲಿ ನೂರಕ್ಕಿಂತ ಹೆಚ್ಚು ಘಟಕಗಳು ರಿಪೇರಿಗೆ ಬಂದಿವೆ ಎನ್ನಲಾಗುತ್ತಿದೆ. ತಾಲೂಕಿನ ಹಲವೆಡೆ ಜನರಿಗೆ ಅಶುದ್ದ ನೀರೆ ಗತಿಯಾಗಿದೆ. ಸರಕಾರ ಕೋಟ್ಯಂತರ ಹಣ ಖರ್ಚು ಮಾಡಿ ಜನರಿಗೆ ಶುದ್ಧ ಕುಡಿಯುವ ನೀರು ಸಿಗುವಂತೆ ಮಾಡಲು ಪ್ರಯತ್ನಪಟ್ಟರೆ ಸರಕಾರದ ಯೋಜನೆ ಮಾತ್ರ ಸಮರ್ಪಕ ಅನುಷ್ಠಾನವಾಗುತ್ತಿಲ್ಲ ಎಂಬುದಕ್ಕೆ ಗ್ರಾಮಾಂತರ ಭಾಗದ ಶುದ್ಧ ಕುಡಿಯುವ ನೀರಿನ ಘಟಕಗಳ ದುಸ್ಥಿತಿಯೇ ನಿದರ್ಶನವಾಗಿದೆ. ಅ ಧಿಕಾರಿಗಳು ಸರ್ಮಪಕವಾಗಿ ಕಾರ್ಯನಿರ್ವಣೆ ಮಾಡುತ್ತಿಲ್ಲ ಎಂಬುದು ಜನಸಾಮಾನ್ಯರ ಅಳಲಾಗಿದೆ.

40-45 ಘಟಕಗಳು ಸ್ಥಗಿತಗೊಂಡು ಸುಮಾರು ವರ್ಷಗಳೇ ಕಳದಿವೆ. ಇನ್ನುಳಿದ 20-25 ಘಟಕಗಳು ಆರು ತಿಂಗಳಿದ ಸ್ಥಗಿತಗೊಂಡಿವೆ. ಬಹುತೇಕ ಎಲ್ಲ ಘಟಕಗಳು ಸಣಪುಟ್ಟ ಕಾರಣಗಳಿಂದ ಸ್ಥಗಿತಗೊಂಡಿದ್ದು ಯಾವ ನೀರಿನ ಘಟಕವು ನೀರಿನ ಕೊರತೆಯಿಂದ ಸ್ಥಗಿತಗೊಂಡಿರುವುದಿಲ್ಲ. ಬದಲಾಗಿ ಮಷಿನರಿ ಸಮಸ್ಯೆಯಿಂದಲೇ ಸ್ಥಗಿತಗೊಂಡಿವೆ.

5 ಘಟಕಗಳು ಸಂಪೂರ್ಣ ಹಾಳಾಗಿವೆ. ಸರಕಾರ ಗ್ರಾಮೀಣ ಭಾಗದ ಜನತೆಯ ಆರೋಗ್ಯದ ಹಿತ ದೃಷ್ಟಿಯಿಂದ ಖರ್ಚು ಮಾಡಿದ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ. ಇಂತಹ ವ್ಯತಿರಿಕ್ತ ಪರಿಸ್ಥಿತಿಯಲ್ಲಿ ಜನತೆ ಕುಡಿಯುವ ನೀರಿಗಾಗಿ ಕೊಳವೆ ಬಾವಿಗೆ ಗ್ರಾಮಸ್ಥರು ನೀರಿಗೆ ಮೊರೆ ಹೊಗಬೇಕಾದ ಪರಿಸ್ಥಿತಿ ಬಂದೋದಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿದ್ದರಿಂದ ಗ್ರಾಮೀಣ ಜನರಿಗೆ ಫ್ಲೋರೈಡ್‌ಯುಕ್ತ ಹಾಗೂ ಅಶುದ್ದ ನೀರೆ ಗತಿ ಎಂಬಂತಾಗಿದೆ.

Advertisement

ತಾಲೂಕಿನಲ್ಲಿ ಸುಮಾರು 192 ಶುದ್ದ ಕುಡಿಯುವ ನೀರಿನ ಘಟಕಗಳು ಇದ್ದು ಅದರಲ್ಲಿ 30ರಿಂದ 40 ಘಟಕಗಳು ಸಣ್ಣಪುಟ್ಟ ರಿಪೇರಿಗಳು ಇರುವುದರಿಂದ ಸ್ಥಗಿತವಾಗಿವೆ. 5 ಘಟಕಗಳು ಸಂಪೂರ್ಣ ಹಾಳಾಗಿದು ದುರಸ್ತಿ ಆಗಲಾರದ ಸ್ಥಿತಿ ಇದೆ. ರಿಪೇರಿಯಾಗುವ ಘಟಕಗಳನ್ನು ರಿಪೇರಿ ಮಾಡಲು ಸಂಬಂಧಿಸಿದ ಏಜೆನ್ಸಿಯವರಿಗೆ ತಿಳಿಸಲಾಗಿದೆ.
ಸುಭಾಷ್‌ ರುದ್ರವಾಡಿ
ಜಿಪಂ ಇಇ, ಉಪವಿಭಾಗ ಇಂಡಿ

ಸರ್ಕಾರದವರು ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಜನ ಸಾಮಾನ್ಯರಿಗೆ ಶುದ್ಧ ಕುಡಿಯುವ ನೀರು ಘಟಕಗಳು ಸ್ಥಾಪಿಸಿದ್ದು. ಅಧಿಕಾರಿಗಳ ಬೇಜವಾಬ್ದಾರಿಯಿಂದ ಸ್ಥಗಿತಗೊಂಡಿದೆ. ಸಂಬಂಧಿ ಸಿದ ಅಧಿಕಾರಿಗಳು ಎಚ್ಚೆತ್ತು ಬೇಗನೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಬೇಕು.

ಸುಧೀರಕುಮಾರ ಸಲಗರ, ಗ್ರಾಮಸ್ಥ

ಯಲಗೊಂಡ ಬೇವನೂರ

Advertisement

Udayavani is now on Telegram. Click here to join our channel and stay updated with the latest news.

Next