ದೋಟಿಹಾಳ: ಗ್ರಾಮದ ದೇವಾಂಗ ಭವನದ ಹತ್ತಿರವಿರುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯಿಂದ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ಒಂದು ವಾರದಿಂದ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಶುದ್ಧ ಕುಡಿವ ನೀರಿಗಾಗಿ ಪರದಾಡುವಂತಾಗಿದೆ.
ಶುದ್ಧ ಕುಡಿಯುವ ನೀರಿನ ಘಟಕ ಉಸ್ತುವಾರಿ ವಹಿಸಿರುವ ಗುತ್ತಿಗೆದಾರ ವಿನಾಯಕ ದೇಸಾಯಿ ಅವರನ್ನು ವಿಚಾರಿಸಿದರೆ ಶುದ್ಧ ನೀರಿನ ಘಟಕಕ್ಕೆ ನೀರಿನ ಸಮಸ್ಯೆ ಇದೆ. ಘಟಕದ ಯಂತ್ರಗಳ ಸಮಸ್ಯೆಯಾದರೆ ನಾವೂ ಸರಿಪಡಿಸುತ್ತೇವೆ. ನಿಯಮದಂತೆ ಘಟಕಕ್ಕೆ ವಾಟರ್ ನೀಡುವುದು ಗ್ರಾಪಂ ಕೆಲಸವಾಗಿದೆ. ಇದರ ಬಗ್ಗೆ ಪಿಡಿಒ ಮಾಹಿತಿ ನೀಡಿದ್ದೇವೆ. ಘಟಕಕ್ಕೆ ವಾಟರ್ ನೀಡುವುದು ಗ್ರಾಪಂ ಹೊಣೆ. ಆರಂಭದ ದಿನಗಳಲ್ಲಿ ಹತ್ತಿರವಿರುವ ದೇವಾಂಗ ಭವನದಿಂದ ನೀರು ಪಡೆದುಕೊಂಡು ಆರಂಭ ಮಾಡಲಾಯಿತು. ಸದ್ಯ ಬೋರ್‌ವೆಲ್ನಲ್ಲಿ ನೀರಿ ಪ್ರಮಾಣ ಕಡಿಮೆಯಾದ ಕಾರಣ ಸಮಸ್ಯೆಯಾಗಿದೆ. ಆದ್ದರಿಂದ ಬೇರೆ ಮೂಲದಿಂದ ಅಥವಾ ಹೊಸ ಬೋರ್‌ವೆಲ್ ಕೊರೆಸಿ ಘಟಕಕ್ಕೆ ನೀರು ಒದಗಿಸಿ ಎಂದು ಗ್ರಾಪಂ ಹಾಗೂ ಎಡಬ್ಲೂ ್ಯಡಿ ಅವರಿಗೂ ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದರು.
Advertisement
ಈ ಶುದ್ಧ ನೀರಿನ ಘಟಕಕ್ಕೆ ಹತ್ತಿರದ ದೇವಾಂಗ ಭವನದ ಬೋರ್‌ವೆಲ್ನಿಂದ ನೀರು ಒದಗಿಸಲಾಗಿತ್ತು. ಸದ್ಯ ಬೋರ್‌ವೆಲ್ನಲ್ಲಿ ನೀರಿ ಪ್ರಮಾಣ ಕಡಿಮೆಯಾದ ಕಾರಣ ಘಟಕಕ್ಕೆ ನೀರು ಇಲ್ಲದಂತಾಗಿದೆ. ಹೀಗಾಗಿ ವಾರದಿಂದ ನೀರಿನ ಘಟಕ ಸ್ಥಗಿತಗೊಂಡಿದ್ದು, ಉರಿ ಬಿಸಿನಲ್ಲಿ ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ. ಶುದ್ಧ ನೀರಿನ ಘಕಟ ಸರಿಪಡಿಸಲು ಸಂಬಂಧಿಸಿದವರು ಮುಂದಾಗಿಲ್ಲ. ಇದರಿಂದ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಈ ಬಗ್ಗೆ ಗಮನಹರಿಸಬೇಕಿದ್ದ ಅಧಿಕಾರಿಗಳು, ಜನಪ್ರತಿನಿಧಿಗಳು ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮದ ಜನ ಆರೋಪಿಸುತ್ತಿದ್ದಾರೆ.
ದೋಟಿಹಾಳ ಗ್ರಾಮದ ಶುದ್ಧ ನೀರಿನ ಘಟಕ ಸ್ಥಗಿತದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಒಂದು ವೇಳೆ ನೀರಿನ ಘಟಕ ಸ್ಥಗಿತಗೊಂಡಿದ್ದರೆ ಕೊಡಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡಿ 2-3 ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು.
•ಕೆ. ಮಹೇಶ, ಜಪಂ ಸದಸ್ಯ
Related Articles
Advertisement