Advertisement

ಸಾಮಗ್ರಿ ಖರೀದಿ; ಸಿಬಿಐ ತನಿಖೆ ನಡೆಸಿ

12:53 PM Jul 13, 2020 | Suhan S |

ಬಾಗಲಕೋಟೆ: ಕೋವಿಡ್ ಸೋಂಕು ಚಿಕಿತ್ಸೆ, ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ವಿವಿಧ ವೈದ್ಯಕೀಯ ಸಾಮಗ್ರಿ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆಸಿದೆ ಎಂಬ ಆರೋಪವಿದ್ದು, ಈ ಕುರಿತು ಸಮಗ್ರ ತನಿಖೆಯನ್ನು ಸಿಬಿಐನಿಂದ ನಡೆಸಬೇಕು ಎಂದು ಬಹುಜನ ಸಮಾಜ ಪಾರ್ಟಿ ಒತ್ತಾಯಿಸಿದೆ.

Advertisement

ಪಕ್ಷದ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಸಿ ಕಾಂಬಳೆ ಮಾತನಾಡಿ, ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕಾಗಿ ಖರೀದಿಸಿರುವ ವೈದ್ಯಕೀಯ ಉಪಕರಣಗಳಲ್ಲಿ 2200 ಕೋಟಿಗೂ ಹೆಚ್ಚು ಹಣ ಲೂಟಿ ಮಾಡಿದೆ ಎಂಬ ಆರೋಪ ಕೇಳಿಬಂದಿದ್ದು, ಕೂಡಲೇ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು. ವೆಂಟಿಲೇಟರ್‌, ಪಿಪಿಇ ಕಿಟ್‌, ಮುಖಗವಸ ಪರೀಕ್ಷಿಸಲು ಸರ್ಜಿಕಲ್‌ ಕೈ ಗವಸ, ಆಮ್ಲಜನಕ ಹಾಗೂ ಕೊರೊನಾ ಸೋಂಕಿತರ ದಿನದ ಖರ್ಚು ಸೇರಿದಂತೆ ಒಟ್ಟು 1163 ಕೋಟಿ ರೂ. ಖರ್ಚಾಗಿದ್ದು, ಅದನ್ನು 3392 ಕೋಟಿ ರೂ. ಪಾವತಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆರೋಗ್ಯ ಸಚಿವರು ಹಾಗೂ ವೈದ್ಯಕೀಯ ಸಚಿವರು ದಿನಕ್ಕೊಂದು ಹೇಳಿಕೆ ನೀಡುತ್ತಿರುವುದರಿಂದ ಜನರಲ್ಲಿ ಗೊಂದಲಕ್ಕೀಡು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಕ್ಕೆ ನೈತಿಕತೆ ಇದ್ದರೆ ಲಾಕ್‌ ಡೌನ್‌ ನಂತರ ಜನರಿಗೆ ವಿತರಿಸಿರುವಫುಡ್‌ಕಿಟ್‌, ವೈದ್ಯಕೀಯ ಪರಿಕರಗಳ ಖರೀದಿ ಹಾಗೂ ವಿವಿಧ ವರ್ಗದ ಜನರಿಗೆ ನೀಡಿರುವ ಸಹಾಯಧನದ ಸಂಪೂರ್ಣ ವರದಿ ನೀಡಲಿ. ಹಾಗೂ ಈ ತನಿಖೆಯನ್ನು ತಕ್ಷಣವೆ ಸಿಬಿಐಗೆ ನೀಡಲಿ ಎಂದು ಒತ್ತಾಯಿಸಿದರು.

ಅಂಬೇಡ್ಕರ ನಿವಾಸದ ಮೇಲೆ ದಾಳಿ-ಖಂಡನೆ: ಮುಂಬೈನಲ್ಲಿರುವ ಸಂವಿಧಾನ ಶಿಲ್ಪಿ ಡಾ| ಬಿ.ಆರ್‌ ಅಂಬೇಡ್ಕರ್‌ ಅವರ ರಾಜಗೃಹ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ್ದು, ಅವರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪಕ್ಷದ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಸನಕ್ಯಾನವರ, ಜಿಲ್ಲಾ ಸಂಯೋಜಕ ಗುರುಶಾಂತಪ್ಪ ಮದೀನಕರ, ತಾಲೂಕು ಪ್ರಧಾನ ಕಾರ್ಯದರ್ಶಿಪರಶುರಾಮ ಸನಕ್ಯಾನವರ, ತಾಲೂಕು ಖಜಾಂಚಿ ಪಿರಗನಾಥ ಬಾಬನಿ, ವಿಠಲ ಸನಕ್ಯಾನವರ, ಮಾರುತಿ ಯಾದವಾಡ, ರಾಕೇಶ ಸಾನಕ್ಯಾನವರ, ಶನಸು ಬೀಳಗಿ, ವಿಜಯ ಬಾಬನಿ, ಬಾಲಕೃಷ್ಣ ಬೀಳಗಿ, ರಾಜು ಸಾತಪೊತೆ, ಅಶೋಕ ರಾಜಪುರ, ಸಂಗು ಬೀಳಗಿ, ಆದಿತ್ಯಾ ವೈ.ಎಸ್‌, ಬಾದಾಮಿ ತಾಲೂಕು ಪ್ರಧಾನ ಕಾರ್ಯದರ್ಶಿ ಬಂದೆನವಾಜ ಯಡಹಳ್ಳಿ, ನಾಗೇಶ ಚಂದಾವರಿ, ಮುತ್ತು ಬೀಳಗಿ, ರವಿ ಕಾಂಬಳೆ, ಮಹಾಂತೇಶ ಚಿಕ್ಕನಹಳ್ಳಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next