Advertisement
ಬಂಟ್ವಾಳ ತಾಲೂಕು ವಾಮದಪದವಿ ನಿಂದ ಬೆಳ್ತಂಗಡಿ ತಾಲೂಕು ವೇಣೂರನ್ನು ಸಂಪರ್ಕಿಸಲು ಕಳೆದ ಮಾರ್ಚ್ನಲ್ಲಿ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿ ಅವರ ಮುತುವರ್ಜಿಯಿಂದ 5.40 ಕೋ.ರೂ ವೆಚ್ಚದಲ್ಲಿ ಈ ತಾಲೂಕುಗಳ ಗಡಿಭಾಗ ದಲ್ಲಿರುವ ಅಜ್ಜಿಬೆಟ್ಟು ಗ್ರಾಮದ ಸಜಂಕಬೆಟ್ಟು ಬಳಿ ಬಜಿರೆ ಹೊಳೆಗೆ ಕಿಂಡಿ ಅಣೆಕಟ್ಟು ಸಹಿತ ಸೇತುವೆ ನಿರ್ಮಾಣ ಗೊಂಡಿದ್ದು, ಈ ಭಾಗದ ಜನತೆಯ ಎರಡು ಕಡೆ ಸಂಪರ್ಕದ ದೀರ್ಘ ಕಾಲದ ಕನಸು ನನಸಾಗುತ್ತಿದೆ ಎಂದು ಭಾವಿಸಿದ್ದರು. ಆದರೆ ಸೇತುವೆಯ ಎರಡೂ ಕಡೆ ರಸ್ತೆ ಅಭಿವೃದ್ಧಿ ಕಾಣದೆ ಸುಗಮ ಸಂಚಾರ ಅಸಾಧ್ಯವಾಗಿದೆ.
Related Articles
-5 ಕಿ.ಮೀ. ದಾರಿಗೆ ಪ್ರಕೃತ 15 ಕಿ.ಮೀ. ಸಂಚರಿಸುವ ಅನಿವಾರ್ಯ
-ಸಂಪರ್ಕ ಪೂರ್ಣವಾದರೆ ಪ್ರದೇಶದ ಅಭಿವೃದ್ಧಿ
-ಜೋರು ಮಳೆಗೆ ಮುಳುಗಡೆಯಾಗುವ ರಸ್ತೆ
Advertisement
ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರದೇಶಗಳಾದ ಅಜ್ಜಿಬೆಟ್ಟು, ಪಿಲಿಮೊಗರು, ದಂಡೆಗೋಳಿ, ಕೊಡಂಬೆಟ್ಟು, ಚೆನ್ನೈತ್ತೋಡಿ ಹಾಗೂ ಸಮೀಪದ ವಗ್ಗ, ಪಂಜಿಕಲ್ಲು ಮೊದಲಾದ ಊರವರಿಗೆ ವೇಣೂರಿಗೆ ತೆರಳಲು ಪಾಂಗಲ್ಪಾಡಿಯಿಂದ ಅಜ್ಜಿಬೆಟ್ಟು, ಕೊರಗಟ್ಟೆ ರಸ್ತೆಯಾಗಿ ಸಜೆಂಕಬೆಟ್ಟುವಿನಿಂದ ಕೇವಲ 5 ಕಿ.ಮೀ ಮಾತ್ರ ದೂರವಿದೆ. ಆದರೆ ಸಜಂಕಬೆಟ್ಟು ಬಳಿ ಹೊಳೆಗೆ ಸೇತುವೆ ನಿರ್ಮಾಣದಿಂದ ಹೊಳೆಯ ಇನ್ನೊಂದು ಬದಿಗೆ ಹೋಗಲು ಸಾಧ್ಯವಾಗುತ್ತದೆ. ಈ ಪ್ರದೇಶದ ಜನರು ಈಗ ವೇಣೂರಿಗೆ ಹೋಗಲು ನೇರಳಕಟ್ಟೆ -ನಯನಾಡು ರಸ್ತೆಯಾಗಿ ಸುಮಾರು 15 ಕಿ.ಮೀ ದೂರದ ರಸ್ತೆಯನ್ನು ಬಳಸಬೇಕಾಗುತ್ತದೆ.
ವೇಣೂರಿನ ಪರಿಸರದ ಜನರಿಗೂ ವಾಮದಪದವಿಗೆ ಇದು ಸನಿಹದ ದಾರಿಯಾ ಗಿದೆ. ವೇಣೂರಿನವರಿಗೆ ವಾಮದಪದವು ಸಮುದಾಯ ಆರೋಗ್ಯ ಕೇಂದ್ರ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಅಜ್ಜಿಬೆಟ್ಟುಪದವು ದೇವಸ್ಥಾನವೂ ಹತ್ತಿರವಾಗುತ್ತದೆ.ಈ ಸೇತುವೆ ನಿರ್ಮಾಣವಾದುದರಿಂದ ಹೆಚ್ಚಿನ ಸೌಲಭ್ಯಗಳು ದೊರೆತು ಜನರ ಪ್ರಯಾಣ ಹಾಗೂ ಸರಕು ಸಾಗಾಟ ಸುಗಮವಾಗಲಿದೆ ಎಂದು ಸ್ಥಳೀಯರಾದ ಮಹಾಲಿಂಗ ಶರ್ಮ ಅವರು ಅಭಿಪ್ರಾಯ ಪಡುತ್ತಾರೆ.
ಇಲ್ಲಿ ಸರ್ವ ಋತು ರಸ್ತೆ ನಿರ್ಮಾಣವಾದಲ್ಲಿ ಜನತೆಗೆ ಬಹಳ ಅನುಕೂಲವಾಗುವುದು. ಸಂಬಂಧಿಸಿದ ಎರಡೂ ತಾಲೂಕುಗಳ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ರಸ್ತೆ ನಿರ್ಮಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.