Advertisement

ಪುಂಜಾಲಕಟ್ಟೆ: ಪ್ರಚೋದನಕಾರಿ ಬರಹ; ಯುವಕನಿಗೆ ನ್ಯಾಯಾಂಗ ಬಂಧನ

09:47 AM Sep 22, 2022 | Team Udayavani |

ಪುಂಜಾಲಕಟ್ಟೆ: ರಾಜಕೀಯ, ಗಣ್ಯ ವ್ಯಕ್ತಿಗಳ ಹೆಸರಿನಲ್ಲಿ ವೈಯಕ್ತಿಕ ಹಾಗೂ ರಾಜಕೀಯ ದುರುದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಸಹಿತ ಸುಳ್ಳು ಬರಹದ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುತ್ತಿದ್ದ ಆರೋಪದಲ್ಲಿ ವಾಮದಪದವು ನಿವಾಸಿಯೋರ್ವರಿಗೆ ಬಂಟ್ವಾಳ ತಾಲೂಕು ದಂಡಾಧಿಕಾರಿ ಡಾ. ಸ್ಮಿತಾರಾಮು ಅವರು ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ.

Advertisement

ವಾಮದಪದವಿನ ಪದ್ಮನಾಭ ಸಾವಂತ್ ನ್ಯಾಯಾಂಗ ಬಂಧನಕ್ಕೊಳಗಾದವನು.

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸಮಾಜದಲ್ಲಿ ಸ್ವಾಸ್ಥ್ಯ ಕೆಡಿಸುತ್ತಿದ್ದ ಎಂಬ ಆರೋಪದಲ್ಲಿ ಪುಂಜಾಲಕಟ್ಟೆ ಪೊಲೀಸರು ಕಳೆದ ಫೆಬ್ರವರಿ ತಿಂಗಳಿನಲ್ಲಿ ಈತನ ಮೇಲೆ ತಹಶೀಲ್ದಾರ್ ಅವರಿಗೆ ಪಿ.ಎ.ಆರ್. ವರದಿಯೊಂದನ್ನು ಸಲ್ಲಿಸಿದ್ದರು. ಈತನ ಮೇಲೆ ಇಂತಹ 5  ಪ್ರಕರಣಗಳಿದ್ದು, ಮುಂದಿನ ದಿನಗಳಲ್ಲಿ ಈತ ಯಾವುದೇ ರೀತಿಯ ಸಮಾಜದ ಹಿತ ಕಾಯುವ ದೃಷ್ಟಿಯಿಂದ ಯಾವುದೇ ಪೋಸ್ಟ್ ಗಳನ್ನು ಹಾಕದಂತೆ  ಮುಚ್ಚಳಿಕೆ ಬರೆಸುವಂತೆ ಪುಂಜಾಲಕಟ್ಟೆ ಎಸ್. ಐ.ಸುತೇಶ್ ತಹಶೀಲ್ದಾರ್ ಅವರಿಗೆ ಪಿ.ಎ.ಅರ್.ಸಲ್ಲಿಸಿದ್ದರು.

ಅ ಬಳಿಕವೂ ಈತ ತನ್ನ ಚಾಳಿಯನ್ನು ಮುಂದುವರಿಸಿದ್ದಲ್ಲದೆ, ತಾಲೂಕು ದಂಡಾಧಿಕಾರಿ ಕೋರ್ಟಿನಲ್ಲಿ ಪ್ರಕರಣವೊಂದರ ತನಿಖಾ ಹಂತದಲ್ಲಿರುವಾಗಲೇ  ಈತ ಮತ್ತೊಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆಂಬ ದೂರಿನ ಹಿನ್ನೆಲೆಯಲ್ಲಿ ತಾಲೂಕು ದಂಡಾಧಿಕಾರಿಯವರ ಮುಂದೆ ಮುಚ್ಚಳಿಕೆ ನೀಡುವಂತೆ ಸೂಚಿಸಲಾಗಿತ್ತು.ಆದರೆ ಈತ ಇದನ್ನು  ನಿರಾಕರಿಸಿದ ಹಿನ್ನೆಲೆಯಲ್ಲಿ  ಈತನಿಗೆ 5 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next