Advertisement

ಪುಂಜಾಲಕಟ್ಟೆ ಸ್ವಸ್ತಿಕ್  ಫ್ರೆಂಡ್ಸ್  ಕ್ಲಬ್:  ಸಾಮೂಹಿಕ ವಿವಾಹ 

05:12 PM Mar 05, 2018 | Team Udayavani |

ಪುಂಜಾಲಕಟ್ಟೆ : ಇಲ್ಲಿನ ಸ್ವಸ್ತಿಕ್‌ ಫ್ರೆಂಡ್ಸ್‌ ಕ್ಲಬ್‌ನ 34ನೇ ವಾರ್ಷಿಕೋತ್ಸವ ಪ್ರಯುಕ್ತ ರವಿವಾರ ಬೆಳಗ್ಗೆ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಜರಗಿದ 10ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ದಿಬ್ಬಣಕ್ಕೆ ರಾ.ಸ್ವ.ಸೇ. ಸಂಘದ ಪ್ರಮುಖ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಚಾಲನೆ ನೀಡಿ ಶುಭ ಹಾರೈಸಿದರು.

Advertisement

ಬಸವನಗುಡಿ ಬಸವೇಶ್ವರ ಕ್ಷೇತ್ರದಿಂದ ಮದುವೆ ಮಂಟಪದವರೆಗೆ ವಧು-ವರರ ದಿಬ್ಬಣ ವಿವಿಧ ಸ್ತಬ್ಧ ಚಿತ್ರ, ಕಲಾತಂಡಗಳ ಆಕರ್ಷಣೆಯೊಂದಿಗೆ ಸಾಗಿ ಬಂದಿತು. ಮುಂಬಯಿ ಪತ್ರಕರ್ತ ರೋನ್ಸ್‌ ಬಂಟ್ವಾಳ, ಹಾಪ್‌ಕಾಮ್ಸ್‌ ಅಧ್ಯಕ್ಷ ಲಕ್ಷ್ಮಿನಾರಾಯಣ ಉಡುಪ, ಬಾಬು ರಾಜೇಂದ್ರ ಶೆಟ್ಟಿ, ಸಂಜೀವ ಶೆಟ್ಟಿ ಮೊಗೆ ರೋಡಿ, ಲೋಕೇಶ್‌ ಆಚಾರ್ಯ, ದೇವಪ್ಪ ಶೆಟ್ಟಿ ಕುಂಟಜಾಲು, ಕ್ಲಬ್‌ನ ಸ್ಥಾಪಕಾಧ್ಯಕ್ಷ ಎಂ. ತುಂಗಪ್ಪ ಬಂಗೇರ, ಕ್ಲಬ್‌ ಅಧ್ಯಕ್ಷ ಪ್ರಶಾಂತ್‌ ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಮಹಾಪೋಷಕರಾದ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ, ಸುಂದರರಾಜ್‌ ಹೆಗ್ಡೆ, ಪದಾಧಿಕಾರಿಗಳಾದ ಪಿ.ಎಂ. ಪ್ರಭಾಕರ, ಜಯರಾಜ ಅತ್ತಾಜೆ, ರಾಜೇಶ್‌ ಪಿ. ಬಂಗೇರ, ಅಬ್ದುಲ್‌ ಹಮೀದ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next