Advertisement

ಕನ್ನಡದ ಹರಿಶ್ಚಂದ್ರನಿಗೆ ಪಂಜಾಬಿ ಸಿಂಗಾರ

06:20 AM Sep 01, 2017 | Harsha Rao |

“ಇಲ್ಲಿಂದ ಕಮರ್ಷಿಯಲ್‌ ಡೈರೆಕ್ಟರ್‌ ಆಗಿ ಹೊಸ ಇನ್ನಿಂಗ್ಸ್‌ ಪ್ರಾರಂಭವಾಗುತ್ತೆ ಅನ್ನೋ ನಂಬಿಕೆ ಇದೆ …’
ಹೆಮ್ಮೆಯಿಂದ ಹೇಳಿಕೊಂಡರು ¨ದಯಾಳ್ ಪದ್ಮನಾಭನ್‌. ಅವರು ಒಂದು ಕಮರ್ಷಿಯಲ್‌ ಚಿತ್ರ ಮಾಡಿ ನಾಲ್ಕೈದು
ವರ್ಷಗಳೇ ಆಗಿರಬಹುದು. ಮಧ್ಯದಲ್ಲಿ ಪ್ರಯೋಗಾತ್ಮಕ ಚಿತ್ರ ಮಾಡಿಕೊಂಡಿದ್ದ ದಯಾಳ್, ಮತ್ತೂಮ್ಮೆ ಕಮರ್ಷಿಯಲ್‌ ಚಿತ್ರಗಳನ್ನು ಮಾಡಬೇಕು, ತಾನೇನು ಅಂತ ಪ್ರೂವ್‌ ಮಾಡಬೇಕು ಅಂತ ಅಂದುಕೊಂಡಿದ್ದರಂತೆ.

Advertisement

ಆದರೆ, ಕಮರ್ಷಿಯಲ್‌ ಚಿತ್ರ ಮಾಡುವುದಕ್ಕೆ ಯಾರು ಕಾಲ್‌ಶೀಟ್‌ ಕೊಡುತ್ತಾರೆ? ಎಂದು ಯೋಚಿಸಿದಾಗ, ಅವರ ಮನಸ್ಸಿಗೆ ಬಂದಿದ್ದು ಇಬ್ಬರು ಹೀರೋಗಳು. ಒಬ್ಬರು ಗಣೇಶ್‌, ಇನ್ನೊಬ್ಬರು ಶರಣ್‌. “ಸರ್ಕಸ್‌’ ಚಿತ್ರದ ನಂತರ ಗಣೇಶ್‌ ಮತ್ತು ದಯಾಳ್‌ ಮಧ್ಯೆ ಒಂದು ಸಣ್ಣ ಬಿರುಕಿತ್ತು. ಇನ್ನು ಉಳಿದವರೆಂದರೆ ಅದು ಶರಣ್‌ ಮಾತ್ರ. ಶರಣ್‌ನ ಹೇಗೆ ಕೇಳ್ಳೋದು ಎನ್ನುವಷ್ಟರಲ್ಲಿ, ಅದೊಂದು ಕೆ. ಮಂಜು ಢಣ್‌ ಅಂತ ಪ್ರತ್ಯಕ್ಷರಾದರಂತೆ. ಶರಣ್‌ ಜೊತೆಗೆ ಒಂದು ಸಿನಿಮಾ ಮಾಡೋಣು ಬಾರಾ ಎಂದರಂತೆ.

ಹಾಗೆ ಶುರುವಾದ “ಸತ್ಯ ಹರಿಶ್ಚಂದ್ರ’, ಈಗ ಮುಗಿದು, ಬಿಡುಗಡೆಯ ಹಂತಕ್ಕೆ ಬಂದಿದೆ. ಕಳೆದವಾರ ಚಿತ್ರದ ಹಾಡುಗಳ ಬಿಡುಗಡೆಯೂ ಆಗಿದೆ. ದಯಾಳ್‌ ಇವೆಲ್ಲಾ ಹೇಳಿಕೊಂಡಿದ್ದು ಅದೇ ಸಮಾರಂಭದಲ್ಲಿ. ಅಂದು ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಗಣೇಶ್‌ ಬಂದಿದ್ದರು. ಜೊತೆಗೆ ಲಹರಿ ವೇಲು, ಜಾಕ್‌ ಮಂಜು ಇದ್ದರು. ಮಿಕ್ಕಂತೆ ಅನಾರೋಗ್ಯದಿಂ¨ ‌ ಬಳಲುತ್ತಿದª ಅರ್ಜುನ್‌ ಜನ್ಯ ಅವರನ್ನು ಬಿಟ್ಟು, ಚಿತ್ರತಂಡದ ಇತರೆ ಸದಸ್ಯರು ಹಾಜರಿದ್ದರು. ಅಂದ ಹಾಗೆ, ಇದು “ಸಿಂಗಾರ್‌ ವರ್ಸಸ್‌ ಕೌರ್‌’ ಎಂಬ ಪಂಜಾಬಿ ಚಿತ್ರದ ರೀಮೇಕು. ಈ ಚಿತ್ರದ ರೀಮೇಕ್‌ ಹಕ್ಕುಗಳು ಮೊದಲು ಜಾಕ್‌
ಮಂಜು ಅವರ ಬಳಿ ಇದ್ದು, ಕೊನೆಗೆ ಕೆ. ಮಂಜು ಪಾಲಾಗಿದೆ. ಶರಣ್‌ ಹಾಕಿಕೊಂಡು ಸಿನಿಮಾ ಮಾಡೋಣ ಅಂತ ಐಡಿಯಾ ಕೊಟ್ಟಿದ್ದು,ಸಿನಿಮಾ ಕುದುರಿಸಿದ್ದು ಎಲ್ಲವೂ ಅದೇ ಮಂಜು. “ಈ ದಯಾಳ್‌ ಬಹಳ ದಿನಗಳ ನಂತರ ಕಮರ್ಷಿಯಲ್‌ ಚಿತ್ರ ಮಾಡುತ್ತಿದ್ದಾರೆ. ಬಾರಿಸೋದು ಬಾರಿಸ್ತಿದ್ದೀನಿ , ಜೋರಾಗಿ ಬಾರಿಸಿಬಿಡೋಣ ಅಂತ
ದೊಡ್ಡದಾಗಿಯೇ ಚಿತ್ರ ಮಾಡಿದ್ದಾರೆ. ಮೊದಲು ಮಲೇಷ್ಯಾದಲ್ಲಿ ಚಿತ್ರೀಕರಣ ಮಾಡುವ ಯೋಚನೆ ಇತ್ತು. ಪೋರ್ಚುಗಲ್ಲೇ ಬೇಕು ಅಂತ ದಯಾಳ್‌ ಪಟ್ಟು ಹಿಡಿದರು. ಹೀಗೆ ದಯಾಳ್‌ಗೆ ಏನೇನು ಖುಷಿಯೋ ಅದನ್ನೆಲ್ಲಾ ಮಾಡಿದ್ದಾರೆ. ಚಿತ್ರ
ಚೆನ್ನಾಗಿ ಬಂದಿದೆ. ಸೆನ್ಸಾರ್‌ನವರು “ಯು/ಎ’ ಕೊಟ್ಟಿದ್ದಾರೆ. ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ’ ಎಂದರು ಮಂಜು.

ಚಿತ್ರದ ಹೆಸರಿಗೆ ತದ್ವಿರುದಟಛಿವಾದ ಪಾತ್ರ ತಮ್ಮದು ಎನ್ನುತ್ತಾರೆ ಶರಣ್‌. “ಟೈಟಲ್‌ಗೆ ತದ್ವಿರುದಟಛಿವಾದ ಪಾತ್ರ ನನ್ನದು. ಬಾಯಿ ಬಿಟ್ಟರೆ ಸುಳ್ಳು. ಒಬ್ಬ ಸುಳ್ಳುಗಾರ ಹೇಗೆ ಸುಳ್ಳು ಹೇಳಿ ಹೇಳಿ ತನ್ನ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾನೆ ಎನ್ನುವುದು ಚಿತ್ರದ ಕಥೆ. ಎಷ್ಟೇ ಸುಳ್ಳುಗಾರನಾದರೂ ಅವನೊಳಗೆ ಒಬ್ಬ ಒಳ್ಳೆಯ ಮನುಷ್ಯ ಇರುವಂಥ ಪಾತ್ರ ನನ್ನದು’ ಎಂದರು ಶರಣ್‌. ಇಬ್ಬರು ನಾಯಕಿಯರಾದ ಸಂಚಿತಾ ಪಡುಕೋಣೆ ಮತ್ತು ಭಾವನಾ ರಾವ್‌ ಇಬ್ಬರೂ ಚಿತ್ರದಲ್ಲಿ ನಟಿಸಿದ ಬಗ್ಗೆ ಖುಷಿಪಟ್ಟರು. ಕೊನೆಗೆ ಬಂದ ಸಾಧು ಕೋಕಿಲ, ಸೆಕೆಂಡ್‌ ಹಾಫ್ನಲ್ಲಿ ತಮ್ಮದು ಸಣ್ಣ ಪಾತ್ರ
ಎಂದರು. ಕೊನೆಗೆ ಮಾತನಾಡಿದ್ದು ಗಣೇಶ್‌. “ಸತ್ಯ ಹರಿಶ್ಚಂದ್ರ’ ಎಂಬ ಶೀರ್ಷಿಕೆ ಎಲ್ಲಕ್ಕಿಂತ ಹೆಚ್ಚಾಗಿ ನಿರ್ಮಾಪಕ ಕೆ. ಮಂಜು ಅವರಿಗೇ ಒಪ್ಪುತ್ತದೆ ಎಂದು ನಕ್ಕರು. ಇನ್ನು ದಯಾಳ್‌ ಬಗ್ಗೆ ಮಾತನಾಡಿದ ಅವರು, “ದಯಾಳ್‌ ಕೆಪ್ಯಾಸಿಟಿ ಇರುವ ನಿರ್ದೇಶಕ. ಆದರೆ, ಅವರ ಸಾಮರ್ಥ್ಯ ಇನ್ನೂ ತೆರೆಯ ಮೇಲೆ ಸಂಪೂರ್ಣವಾಗಿ ಬಂದಿಲ್ಲ.

ಈ ಚಿತ್ರದ ಮೂಲಕ ಬರಲಿ. ಇನ್ನು ಶರಣ್‌ ಒಬ್ಬ  ಒಳ್ಳೆಯ ನಟ’ ಎಂದು ಹೇಳುವಷ್ಟರಲ್ಲಿ ಆಡಿಯೋ ಬಿಡುಗಡೆ ಸಮಾರಂಭ ಮುಗಿಯಿತು.

Advertisement

– ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next