Advertisement

New Jersey: ಗುಂಡಿನ ದಾಳಿಗೆ ಪಂಜಾಬ್‌ ಮೂಲದ ಮಹಿಳೆ ಮೃತ್ಯು, ಮತ್ತೊಬ್ಬಾಕೆ ಚಿಂತಾಜನಕ

11:35 AM Jun 18, 2024 | Team Udayavani |

ವಾಷಿಂಗ್ಟನ್:‌ ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಭಾರತೀಯರನ್ನು ಗುರಿಯಾಗಿರಿಸಿಕೊಂಡು ದುಷ್ಕೃತ್ಯ ಎಸಗುತ್ತಿರುವ ಘಟನೆ ಮುಂದುವರಿದಿದ್ದು, ಇದೀಗ ನ್ಯೂಜೆರ್ಸಿಯಲ್ಲಿ ಭಾರತೀಯ ಮೂಲದ ಯುವಕನೊಬ್ಬನ ಗುಂಡಿನ ದಾಳಿಗೆ ಭಾರತೀಯ ಮೂಲದ ಮಹಿಳೆ ಕೊನೆಯುಸಿರೆಳೆದಿದ್ದು, ಮತ್ತೊಬ್ಬ ಮಹಿಳೆ ಚಿಂತಾಜನಕ ಸ್ಥಿತಿಯಲ್ಲಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:Udayavani Campaign: ತಡವಾದ್ರೆ ಹೇಳಲು ನೆಟ್ವರ್ಕಿಲ್ಲ;ಕಾಡ ಮಧ್ಯೆ ನಡೆಯಲು ಭಯ!

ಗುಂಡಿನ ದಾಳಿ ನಡೆಸಿದ ಶಂಕಿತ ಆರೋಪಿಯನ್ನು ಗೌರವ್‌ ಗಿಲ್‌ (19ವರ್ಷ) ಗುರುತಿಸಲಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿ ವಿವರಿಸಿದೆ. ಮೃತ ಮಹಿಳೆ ಪಂಜಾಬ್‌ ಮೂಲದವರು ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಶೂಟೌಟ್‌ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗುಂಡಿನ ದಾಳಿಯಲ್ಲಿ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದರು. ಇಬ್ಬರನ್ನೂ ಏರ್‌ ಲಿಫ್ಟ್‌ ಮೂಲಕ ಕೊಂಡೊಯ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೆ ಜಸ್ವೀರ್‌ ಕೌರ್‌ (29ವರ್ಷ) ಸಾವನ್ನಪ್ಪಿದ್ದು, ಆಕೆಯ ಸಂಬಂಧಿ ಆರೋಗ್ಯ ಸ್ಥಿತಿ ಚಿಂತಾಜನಕವಾಗಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಗಿಲ್‌ ನನ್ನು ಬೆನ್ನಟ್ಟಿದ್ದ ಪೊಲೀಸರು ಸುಮಾರು 2 ಕಿಲೋ ಮೀಟರ್‌ ಚೇಸ್‌ ಮಾಡಿ ಬಂಧಿಸಿರುವುದಾಗಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next