Advertisement

ಗೆಲುವಿನ ಹುಡುಕಾಟದಲ್ಲಿ ಪಂಜಾಬ್‌

12:50 AM Apr 23, 2021 | Team Udayavani |

ಚೆನ್ನೈ: ಸತತ ಸೋಲಿನಿಂದ ಕಂಗೆಟ್ಟಿರುವ ರಾಹುಲ್‌ ಸಾರಥ್ಯದ ಪಂಜಾಬ್‌ ಕಿಂಗ್ಸ್‌ ಮತ್ತು ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಶುಕ್ರವಾರ ಚೆನ್ನೈಯಲ್ಲಿ ಮಹತ್ವದ ಪಂದ್ಯವನ್ನು ಆಡಲಿವೆ.

Advertisement

ಈಗಾಗಲೇ ಆಡಿದ 4 ಪಂದ್ಯಗಳಲ್ಲಿ ಆರಂಭಿಕ ಗೆಲುವಿನ ಬಳಿಕ ಹ್ಯಾಟ್ರಿಕ್‌ ಸೋಲಿಗೆ ತುತ್ತಾಗಿರುವ ಪಂಜಾಬ್‌ ಗೆಲುವಿನ ಹಳಿ ಏರಲೇಬೇಕಾದ ಒತ್ತಡದಲ್ಲಿದೆ. ಇನ್ನೊಂದೆಡೆ ಮುಂಬೈ ಕಳೆದ ಪಂದ್ಯದಲ್ಲಿ ಡೆಲ್ಲಿಗೆ ಶರಣಾಗಿದ್ದು, ಮರಳಿ ಗೆಲುವಿನ ಮುಖ ಕಾಣಲು ಗರಿಷ್ಠ ಪ್ರಯತ್ನ ಮಾಡಬೇಕಿದೆ. ಈ ಎಲ್ಲ ಸೋಲುಗಳಿಗೆ ಒಂದೇ ಕಾರಣ, ಅದು ತಂಡಗಳ ಬ್ಯಾಟಿಂಗ್‌ ವೈಫ‌ಲ್ಯ.

ಸಂಘಟಿತ ಪ್ರದರ್ಶನ ಅಗತ್ಯ :

ರಾಜಸ್ಥಾನ್‌ ವಿರುದ್ಧ ಕೇವಲ 4 ರನ್ನಿನಿಂದ ಗೆದ್ದದ್ದಷ್ಟೇ ಪಂಜಾಬ್‌ ಸಾಧನೆ. ಬಳಿಕ ಚೆನ್ನೈ ವಿರುದ್ಧ 106, ಹೈದರಾಬಾದ್‌ ವಿರುದ್ಧ 120 ರನ್‌ ಮಾಡಿ ತೀವ್ರ ಬ್ಯಾಟಿಂಗ್‌ ಬರಗಾಲ ಅನುಭವಿಸಿತ್ತು. ಎಲ್ಲರೆದುರೂ ಎಡವುತ್ತ ಬಂದ ಸನ್‌ರೈಸರ್ ಬುಧವಾರ ಪಂಜಾಬ್‌ಗ ಸೋಲುಣಿಸುವ ಮೂಲಕವೇ ಗೆಲುವಿನ ಖಾತೆ ತೆರೆದುದನ್ನು ಮರೆಯುವಂತಿಲ್ಲ.

ಈ ನಡುವೆ ಡೆಲ್ಲಿ ವಿರುದ್ಧ 195 ರನ್‌ ಬಾರಿಸಿಯೂ ಇದನ್ನು ಉಳಿಸಿಕೊಳ್ಳಲು ಪಂಜಾಬ್‌ಗ ಸಾಧ್ಯವಾಗಿರಲಿಲ್ಲ. ಮುಂಬೈ ವಿರುದ್ಧ ಈ ಎಲ್ಲ ಸಂಕಟಗಳನ್ನು ನಿಭಾಯಿಸಿ ನಿಲ್ಲಬೇಕಾದ ಒತ್ತಡ ರಾಹುಲ್‌ ಬಳಗದ ಮೇಲಿದೆ. ಮತ್ತೆ ಸೋತರೆ ತಂಡದ ಮುಂದಿನ ಹಾದಿ ದುರ್ಗಮಗೊಳ್ಳುವುದರಲ್ಲಿ ಅನುಮಾನವಿಲ್ಲ.

Advertisement

ಹಾರ್ದಿಕ್‌ ಪಾಂಡ್ಯ ವೈಫ‌ಲ್ಯ :

ಹಾರ್ದಿಕ್‌ ಪಾಂಡ್ಯ ಅವರ ಸತತ ವೈಫ‌ಲ್ಯವೊಂದೇ ಮುಂಬೈ ತಂಡದ ಪ್ರಮುಖ ಸಮಸ್ಯೆ. ಉಳಿದಂತೆ ಬ್ಯಾಟಿಂಗ್‌-ಬೌಲಿಂಗ್‌ ವಿಭಾಗದಲ್ಲಿ ಮುಂಬೈ ಪಂಜಾಬ್‌ಗಿಂತ ಹೆಚ್ಚು ವೈವಿಧ್ಯಮಯವಾಗಿದೆ. ಬೌಲ್ಟ್, ಬುಮ್ರಾ ಡೆತ್‌ ಓವರ್‌ಗಳ ಮೂಲಕ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next