Advertisement

Punjab ದಾಳಿ; ಬೆಳಗಾವಿ,ಬಾಗಲಕೋಟೆಯ ಯೋಧರಿಬ್ಬರು ಹುತಾತ್ಮ

10:17 PM Apr 12, 2023 | Team Udayavani |

ಬೆಳಗಾವಿ: ಪಂಜಾಬ್ ನ ಬಟಿಂಡಾ ಮಿಲಿಟರಿ ಠಾಣೆಯ ಮೇಲೆ ಬುಧವಾರ ಬೆಳಗ್ಗೆ ನಡೆದ ಅಪರಿಚಿತರ ದಾಳಿಯಲ್ಲಿ ನಿಪ್ಪಾಣಿ ತಾಲೂಕಿನ ಬೇನಾಡಿ ಗ್ರಾಮದ ಯೋಧ ಮತ್ತು ಬಾದಾಮಿ ತಾಲೂಕಿನ ಹನಮನೇರಿಯ ಗ್ರಾಮದ  ಯೋಧ ವೀರಮರಣ ಹೊಂದಿದ್ದಾರೆ.

Advertisement

ಬೇನಾಡಿ ಗ್ರಾಮದ ಸಾಗರ ಅಪ್ಪಾಸಾಹೇಬ ಬನ್ನೆ(25) ಎಂಬ ಯೋಧ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಕುಟಮಬದವರಿಗೆ ಮಾಹಿತಿ ಸಿಗುತ್ತಿದ್ದಂತೆ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮ ಶೋಕ ಸಾಗರದಲ್ಲಿ ಮುಳುಗಿದೆ. ಎ. 13ರಂದು ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸಲಿದೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಸಿ ನಂತರ ಬೀರದೇವ ಮಾಳದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ಮೃತಸಾಗರ್ ತಂದೆ ತಾಯಿ ಸಹೋದರ ಹಾಗೂ ಸಹೋದರಿಯನ್ನು ಗಲಿದ್ದಾರೆ. ತಂದೆ ಕುರಿ ಸಾಕಾಣಿಕೆ ಮಾಡುತ್ತಿದ್ದು ಬಡತನದಲ್ಲಿಯೇ ಸಾಗರನನ್ನು ಭಾರತೀಯ ಸೇನೆಗೆ ಸೇರಿಸಿದ್ದರು.

2018ರಲ್ಲಿ ರಾಯಚೂರಿನಲ್ಲಿ ನಡೆದ ಸೈನ್ಯ ಭರ್ತಿಯಲ್ಲಿ ಸೇನೆಗೆ ಸಾಗರ ಆಯ್ಕೆ ಆಗಿದ್ದರು. ಮಹಾರಾಷ್ಟ್ರದ ನಾಸಿಕದಲ್ಲಿ ಒಂದು ವರ್ಷ ತರಬೇತಿ ಮುಗಿಸಿ ಪಂಜಾಬ್ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದನು. ಬೇನಾಡಿ ಗ್ರಾಮದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪೂರೈಸಿ ನಿಪಾಣಿಯ ಪಿಎಸ್ಎಂವಿ ಸಂಸ್ಥೆಯ ಮಹಾವಿದ್ಯಾಲಯದಲ್ಲಿ ಪದವಿ ಅವರಿಗೆ ಶಿಕ್ಷಣ ಮುಗಿಸಿದ್ದನು.

ಮುಂದಿನ ತಿಂಗಳು ಸಾಗರನ ವಿವಾಹ ಇತ್ತು

Advertisement

ಸಾಗರ್ ಬನ್ನೆಯ ವಿವಾಹ ಸಮಾರಂಭ ಮೇ 21ರಂದು ನಿಶ್ಚಯವಾಗಿತ್ತು. ಮದುವೆಗಾಗಿ ಎಪ್ರಿಲ್ 18 ಅಥವಾ 20 ರಂದು ಗ್ರಾಮಕ್ಕೆ ಆಗಮಿಸುವವನಿದ್ದರು. ಇಷ್ಟರಲ್ಲಿಯೇ ಗುಂಡಿನ ದಾಳಿಗೆ ವೀರಮರಣ ಹೊಂದಿದ್ದು, ಗ್ರಾಮದಲ್ಲಿ ದುಃಖ ಮಡುಗಟ್ಟಿದೆ.

ಬಾದಾಮಿಯ ಯೋಧ ಹುತಾತ್ಮ

ಬಾದಾಮಿ ತಾಲೂಕಿನ ಹನಮನೇರಿ(ಇನಾಂ) ಗ್ರಾಮದ ಸೈನಿಕ‌ ಸಂತೋಷ ಮಲ್ಲಪ್ಪ ನಾಗರಾಳ (24) ಎನ್ನುವವರಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ‌ ಭಾರತೀಯ ಸೇನೆಯು ಪಂಜಾಬ್ ರೆಜಿಮೆಂಟ್ ನಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಬುಧವಾರ ಅಪರಿಚರು, ಪಂಜಾಬನ ಬಟಿಂಡಾ ಮಿಲಟರಿ‌‌ ಠಾಣೆಯ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಕರ್ತವ್ಯದಲ್ಲಿದ್ದ ಯೋಧ ಸಂತೋಷ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ‌ ಅಸುನೀಗಿದ್ದಾರೆ. ಪಾರ್ಥಿವ ಶರೀರ ಗುರುವಾರ ಗ್ರಾಮಕ್ಕೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಬಟಿಂಡಾ ಸೇನಾ ಘಟಕದೊಳಗೆ ಬುಧವಾರ ಮುಂಜಾನೆ ಈ ಘಟನೆ ನಡೆದಿರುವುದಾಗಿ ಆರ್ಮಿಯ ಸೌತ್ ವೆಸ್ಟರ್ನ್ ಕಮಾಂಡ್ ಪ್ರಕಟನೆಯಲ್ಲಿ ತಿಳಿಸಿದೆ. ದಾಳಿಯಲ್ಲಿ ನಾಲ್ವರು ಯೋಧರು ಮೃತಪಟ್ಟಿದ್ದು, ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next