ಚಂಡೀಗಢ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಹಾಕಿ ಪದಕ ಗೆದ್ದ ಭಾರತದ ಸಾಧನೆಯಿಂದ ಅತೀ ಹೆಚ್ಚು ಸಂಭ್ರಮಿಸಿದ್ದು ಪಂಜಾಬ್. ತಂಡದಲ್ಲಿ ಪಂಜಾಬ್ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದುದು ಹಾಗೂ ಗೋಲುಗಳಲ್ಲಿ ಇವರದೇ ಸಿಂಹ ಪಾಲಾಗಿದ್ದುದೇ ಇದಕ್ಕೆ ಕಾರಣ.
ರಾಜ್ಯದ ಈ ಹಾಕಿಪಟುಗಳನ್ನು ಗೌರವಿಸಲು ಮುಂದಾಗಿರುವ ಪಂಜಾಬ್ ಸರಕಾರ, ಇಲ್ಲಿನ 10 ಸರ ಕಾರಿ ಶಾಲೆಗಳಿಗೆ ಹಾಕಿ ಆಟಗಾರರ ಹೆಸರನ್ನಿಡಲು ನಿರ್ಧರಿಸಿದೆ. ರಾಜ್ಯ ಕ್ರೀಡಾ ಸಚಿವ ವಿಜಯಿಂದರ್ ಸಿಂಗ್ಲಾ ಈ ವಿಷಯವನ್ನು ಪ್ರಕಟಿಸಿದರು. ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಇದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.
ಮನ್‌ಪ್ರೀತ್ ಸಿಂಗ್ ಸ್ಕೂಲ್! :
ಅದರಂತೆ ಜಲಂಧರ್‌ನ ಮಿಥಾ ಪುರ್ ಗವರ್ನ್ಮೆಂಟ್ ಸೀನಿಯರ್ ಸೆಕೆಂಡರಿ ಸ್ಕೂಲ್ ಇನ್ನು ಮುಂದೆ “ಒಲಿಂಪಿಯನ್ ಮನ್‌ಪ್ರೀತ್ ಸಿಂಗ್ ಗವರ್ನ್ಮೆಂಟ್ ಸೀನಿಯರ್ ಸೆಕೆಂಡರಿ ಸ್ಕೂಲ್’ ಎಂಬ ಹೆಸರಿನಿಂದ ಕರೆಯಲ್ಪಡಲಿದೆ. ಮನ್‌ಪ್ರೀತ್ ಕಂಚು ವಿಜೇತ ಭಾರತ ತಂಡದ ನಾಯಕರಾಗಿದ್ದರು.
ಉಪನಾಯಕ ಹಾಗೂ ಭಾರತದ ಪರ ಸರ್ವಾಧಿಕ 6 ಗೋಲು ಹೊಡೆದ ಹರ್ಮನ್‌ಪ್ರೀತ್ ಸಿಂಗ್ ಹೆಸರನ್ನು ಅಮೃತಸರದ ಜಿಎಸ್‌ಎಸ್‌ಎಸ್ ಟಿಮ್ಮೊವಾಲ್ ಶಾಲೆಗೆ ಇಡಲಾಗಿದೆ. ಅದೇ ರೀತಿ ಮನ್‌ದೀಪ್ ಸಿಂಗ್, ಶಮ್ಶೆàರ್ ಸಿಂಗ್, ರೂಪಿಂದರ್‌ಪಾಲ್ ಸಿಂಗ್, ಹಾರ್ದಿಕ್ ಸಿಂಗ್, ಸಿಮ್ರನ್‌ಜಿತ್ ಸಿಂಗ್ ಅವರ ಹೆಸರನ್ನು ರಾಜ್ಯದ ವಿವಿಧ ಸರಕಾರಿ ಶಾಲೆಗಳಿಗೆ ಇಡಲಾಗಿದೆ.