Advertisement

ಆರ್‌ಸಿಬಿ ಕೈಯಲ್ಲಿ ಪಂಜಾಬ್‌ ಭವಿಷ್ಯ

11:42 PM Oct 02, 2021 | Team Udayavani |

ಶಾರ್ಜಾ: ಪ್ಲೇ ಆಫ್ ಪ್ರವೇಶದ ಕ್ಷೀಣ ಅವಕಾಶ ಹೊಂದಿರುವ ಪಂಜಾಬ್‌ ಕಿಂಗ್ಸ್‌ ರವಿವಾರದ ಹಗಲು ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ವಿರುದ್ಧ ಅಗ್ನಿಪರೀಕ್ಷೆಗೆ ಇಳಿಯಲಿದೆ. ಇಲ್ಲಿ ರಾಹುಲ್‌ ಪಡೆ ಗೆದ್ದರಷ್ಟೇ ಮುಂದಿನ ಹಂತಕ್ಕೇರಲಿದೆ ಎಂಬುದು ಸದ್ಯದ ಲೆಕ್ಕಾಚಾರ.

Advertisement

ಅಹ್ಮದಾಬಾದ್‌ನಲ್ಲಿ ನಡೆದ ಮೊದಲ ಮುಖಾಮುಖಿಯಲ್ಲಿ ಪಂಜಾಬ್‌ ಪಡೆ ಆರ್‌ಸಿಬಿ ವಿರುದ್ಧ 34 ರನ್‌ಗಳ ಗೆಲುವು ಸಾಧಿಸಿತ್ತು. ಅನಂತರ ಆರ್‌ಸಿಬಿ ಉತ್ತಮ ಪ್ರದರ್ಶನ ಕಾಯ್ದುಕೊಂಡು ಬಂದಿದ್ದು, ಅಂಕಪಟ್ಟಿಯಲ್ಲಿ 3ನೇ ಸ್ಥಾನವನ್ನು ಗಟ್ಟಿಗೊಳಿಸಿದೆ. ಪಂಜಾಬ್‌ ವಿರುದ್ಧ ಸೇಡು ತೀರಿಸಿಕೊಂಡರೆ ಪ್ಲೇ ಆಫ್ ಪ್ರವೇಶವನ್ನು ಬಹುತೇಕ ಖಚಿತಗೊಳಿಸಲಿದೆ. ರನ್‌ರೇಟ್‌ನಲ್ಲಿ ಮೈನಸ್‌ ಇರುವುದಷ್ಟೇ ಕೊಹ್ಲಿ ಪಡೆಯ ಚಿಂತೆಯ ಸಂಗತಿ.

ಪಂಜಾಬ್‌ ಫಿನಿಶಿಂಗ್‌ ಫೇಲ್‌
ಪಂಜಾಬ್‌ ಕಿಂಗ್ಸ್‌ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗಗಳೆರಡರಲ್ಲೂ ಬಲಿಷ್ಠವಾಗಿದೆ. ಆದರೆ ಅಂತಿಮ ಹಂತದಲ್ಲಿ ಮುಗ್ಗರಿಸುತ್ತಿದೆ. ದೊಡ್ಡ ಮೊತ್ತವನ್ನು ಬೆನ್ನಟ್ಟುವ ಸವಾಲಿದ್ದರೂ ಮುನ್ನುಗ್ಗುತ್ತದೆ; ಆದರೆ ಇನ್ನೇನು ಗೆಲ್ಲುವ ಹಂತಕ್ಕೆ ಬಂದಾಗ ಪರದಾಡುತ್ತದೆ. ಕೆಕೆಆರ್‌ ಎದುರಿನ ಶುಕ್ರವಾರದ ಪಂದ್ಯ ಇದಕ್ಕೆ ಉತ್ತಮ ನಿದರ್ಶನ.

ಇದನ್ನೂ ಓದಿ:ಮುರಿದು ಬಿದ್ದ ಪುತ್ರನ ದಾಂಪತ್ಯ | ಭಾವುಕರಾದ ನಟ ನಾಗಾರ್ಜುನ್

ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಹಿಂದೆ ಸರಿದರೂ ತಂಡಕ್ಕೇನೂ ನಷ್ಟವಿಲ್ಲ. ಆದರೆ ಓಪನಿಂಗ್‌ ಕೈಕೊಟ್ಟರೆ ಪಂಜಾಬ್‌ಗ ಅಪಾಯ ತಪ್ಪಿದ್ದಲ್ಲ.

Advertisement

ಆರ್‌ಸಿಬಿಗೆ ಹರ್ಷಲ್‌, ಮ್ಯಾಕ್ಸಿ ಬಲ
ಈಗಾಗಲೇ ಪರ್ಪಲ್‌ ಕ್ಯಾಪ್‌ ಏರಿಸಿಕೊಂಡಿರುವ ಹರ್ಷಲ್‌ ಪಟೇಲ್‌ ಮತ್ತು ಪ್ರಚಂಡ ಫಾರ್ಮ್ ಗೆ ಮರಳಿರುವ ಗ್ಲೆನ್‌ ಮ್ಯಾಕ್ಸ್‌ವೆಲ್‌ ಆರ್‌ಸಿಬಿ ತಂಡಕ್ಕೆ ಹೆಚ್ಚಿನ ಶಕ್ತಿ ತುಂಬಿದ್ದಾರೆ. ಕೊಹ್ಲಿ, ಪಡಿಕ್ಕಲ್‌ ಕೂಡ ಉತ್ತಮ ಫಾರ್ಮ್ ನಲ್ಲಿದ್ದಾರೆ. ಶ್ರೀಕರ್‌ ಭರತ್‌ ನೂತನ ಬ್ಯಾಟಿಂಗ್‌ ಅಸ್ತ್ರವಾಗಿದ್ದಾರೆ. ಆದರೆ 360 ಡಿಗ್ರಿ ಖ್ಯಾತಿಯ ಎಬಿಡಿ ಅರಬ್‌ ನಾಡಿನಲ್ಲಿ ಅಬ್ಬರಿಸಲು ವಿಫ‌ಲರಾಗಿರುವುದು ಆರ್‌ಸಿಬಿಗೆ ಹಿನ್ನಡೆ ಎಂಬುದರಲ್ಲಿ ಆನುಮಾನವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next