Advertisement

ಪಂಜಾಬ್: ಮತ್ತೆ 2 ವಾರ ಲಾಕ್ ಡೌನ್ ಮುಂದುವರಿಕೆ, ಪ್ರತಿದಿನ 4ಗಂಟೆ ಅಂಗಡಿ ಓಪನ್

08:08 AM Apr 30, 2020 | Nagendra Trasi |

ಚಂಡೀಗಢ್: ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ ಮೇ 3ರವರೆಗೆ ನಿಗದಿಯಾಗಿದ್ದು, ಇದೀಗ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಬುಧವಾರ ರಾಜ್ಯಾದ್ಯಂತ ಮತ್ತೆ 2 ವಾರಗಳ ಕಾಲ ಕರ್ಫ್ಯೂವನ್ನು ಮುಂದುವರಿಸಿರುವುದಾಗಿ ಘೋಷಿಸಿದ್ದಾರೆ.

Advertisement

ವಿಡಿಯೋ ಮೂಲಕ ಘೋಷಣೆ ಹೊರಡಿಸಿರುವ ಅವರು, ದಿನಂಪ್ರತಿ ನಾಲ್ಕು ಗಂಟೆಗಳ ಕಾಲ ಕರ್ಫ್ಯೂವನ್ನು ಸಡಿಲಿಕೆ ಮಾಡಲಾಗುವುದು. ಈ ವೇಳೆ ಮನೆಯಿಂದ ಹೊರಬರಲು ಅವಕಾಶ ಮಾಡಿಕೊಡಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.

ಬೆಳಗ್ಗೆ 7ಗಂಟೆಯಿಂದ 11ಗಂಟೆವರೆಗೆ ಮಾತ್ರ ಅಂಗಡಿಗಳನ್ನು ತೆರೆಯುವ ನಿಟ್ಟಿನಲ್ಲಿ ರಾಜ್ಯದ ಮಾಹಿತಿ ಮತ್ತು ಸಾರ್ವಜನಿ ಸಂಪರ್ಕ ಇಲಾಖೆ ನಿಯಮಾವಳಿಯನ್ನು ಬಿಡುಗಡೆ ಮಾಡಿದೆ. ಜನರು ಕಡ್ಡಾಯವಾಗಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಎಲ್ಲಾ ಸಣ್ಣ ಅಂಗಡಿಗಳು, ರೆಸಿಡೆನ್ಸಿಯಲ್ ಕಾಂಪ್ಲೆಕ್ಸ್ ನಲ್ಲಿರುವ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next