Advertisement

ಪಂಜಾಬ್ ಚುನಾವಣೆ: ಮತದಾನ ದಿನಾಂಕ ಒಂದು ವಾರಗಳ ಕಾಲ ಮುಂದೂಡಿಕೆ

03:29 PM Jan 17, 2022 | Team Udayavani |

ನವದೆಹಲಿ : ಪಂಜಾಬ್ ವಿಧಾನಸಭೆ ಚುನಾವಣೆಗೆ ನಿಗದಿಯಾಗಿದ್ದ ಮತದಾನ ದಿನಾಂಕವನ್ನು ಒಂದು ವಾರಗಳ ಕಾಲ ಮುಂದೂಡಿ ಕೇಂದ್ರ ಚುನಾವಣಾ ಆಯೋಗ ಹೊಸ ಆದೇಶ ಪ್ರಕಟಿಸಿದೆ.

Advertisement

ಹಲವು ರಾಜಕೀಯ ಪಕ್ಷಗಳ ಮನವಿ ಮೇರೆಗೆ ಆಯೋಗ ಈ ನಿರ್ಧಾರ ತೆಗೆದುಕೊಂಡಿದೆ. ಫೆ.14ರಂದು ಒಂದೇ ಹಂತದಲ್ಲಿ ಮತದಾನ ನಡೆಸುವುದಕ್ಕೆ ಆಯೋಗ ನಿರ್ಧರಿಸಿತ್ತು. ಆದರೆ ಗುರು ರವಿದಾಸ್ ಜಯಂತಿ ಹಿನ್ನೆಲೆಯಲ್ಲಿ ಮತದಾನದ ದಿನಾಂಕವನ್ನು ಫೆ.20 ಕ್ಕೆ ಮುಂದೂಡಲಾಗಿದೆ.

ಗುರು ರವಿದಾಸ್ ಜಯಂತಿ ಪಂಜಾಬ್ ಹಾಗೂ ಉತ್ತರ ಪ್ರದೇಶದ ದಲಿತ ಸಮುದಾಯದಲ್ಲಿ ಮಹತ್ವದ ಆಚರಣೆಯಾಗಿದೆ. ಸುಮಾರು 20 ಲಕ್ಷಕ್ಕೂ ಹೆಚ್ಚು ಜನರು ಫೆ.10ರಿಂದ 16ರ ಅವಧಿಯಲ್ಲಿ ವಾರಣಸಿಗೆ ರವಿದಾಸ್ ಜಯಂತಿ ಆಚರಣೆಗೆ ತೆರಳುತ್ತಾರೆ. ಹೀಗಾಗಿ ದೊಡ್ಡ ಸಂಖ್ಯೆಯಲ್ಲಿ ಜನರು ಮತದಾನದಿಂದ ವಂಚಿತರಾಗುತ್ತಾರೆ ಎಂದು ಚುನಾವಣಾ ದಿನಾಂಕ ಬದಲಾಯಿಸುವಂತೆ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚೆನ್ನಿ ಕೇಂದ್ರ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದರು.

ಸಮಾಜವಾದಿ ಪಕ್ಷ ಹಾಗೂ ಬಿಜೆಪಿಯಿಂದಲೂ ಇದೇ ಬಗೆಯ ಬೇಡಿಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ತುರ್ತು ಸಭೆ ನಡೆಸಿದ ಆಯೋಗ ಮತದಾನದ ದಿನಾಂಕವನ್ನು ಫೆ.20ಕ್ಕೆ ಮುಂದೂಡಿದೆ. ಆದಾಗಿಯೂ ಪಂಜಾಬಿನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next