Advertisement

ರೈತರಿಗೆ ಬೆಂಬಲ ಸೂಚಿಸಿ ರಾಜಿನಾಮೆ ಸಲ್ಲಿಸಿದ ಪಂಜಾಬ್ ಡಿಐಜಿ

04:23 PM Dec 13, 2020 | Mithun PG |

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ,  ರೈತರಿಗೆ ಬೆಂಬಲವಾಗಿ ಪಂಜಾಬ್ ಡಿಐಜಿ (ಕಾರಾಗೃಹ) ಲಖ್ಮಿಂದರ್ ಸಿಂಗ್ ಜಖರ್ ತಮ್ಮ ಸೇವೆಗೆ ರಾಜೀನಾಮೆ ನೀಡಿದ್ದಾರೆ.

Advertisement

ವರದಿಗಳ ಪ್ರಕಾರ, ಪಂಜಾಬ್ ಡಿಐಜಿ ಲಖ್ಮಿಂದರ್ ಸಿಂಗ್ ಜಖರ್ ಅವರು ರಾಜೀನಾಮೆ ಪತ್ರವನ್ನು ಪಂಜಾಬ್ ಸರ್ಕಾರಕ್ಕೆ ಸಲ್ಲಿಸಿದ್ದು, “ಕೃಷಿ ಕಾನೂನುಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ನನ್ನ ರೈತ ಸಹೋದರರೊಂದಿಗೆ ನಿಲ್ಲುವ ನನ್ನ ನಿರ್ಧಾರವನ್ನು ನಾನು ನಿಮಗೆ ತಿಳಿಸಲು ಬಯಸುತ್ತೇನೆ” ಎಂದು ತಿಳಿಸಿದ್ದಾರೆ.

ದೆಹಲಿ ಗಡಿ ಭಾಗದಲ್ಲಿ ಕಳೆದ 18 ದಿನಗಳಿಂದ ಪಂಜಾಬ್, ಹರ್ಯಾಣ ಮತ್ತು ಇತರ ರಾಜ್ಯಗಳ ರೈತರು ಹೋರಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: ದೇಶ-ವಿದೇಶಗಳಲ್ಲಿ 30,000 ಗಂಟೆ ಉಪನ್ಯಾಸ ಪ್ರವಚನಗೈದ ದಾಖಲೆ: ಬನ್ನಂಜೆ ಸಾಧನೆಯ ಹಾದಿ !

ಇದಕ್ಕೂ ಮೊದಲು ಪಂಜಾಬ್ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ತಮ್ಮ ಪದ್ಯವಿಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ತಿಳಿಸಿದ್ದರು. ಎಸ್ಎಡಿ ಮುಖಂಡ ಸುಖ್ ದೇವ್ ಸಿಂಗ್ ಕೂಡ ರೈತ ಹೋರಾಟ ಬೆಂಬಲಿಸಿ ಪದ್ಮ ಭೂಷಣ ಪ್ರಶಸ್ತಿ ಹಿಂದಿರುಗಿಸುವುದಾಗಿ ಘೋಷಿಸಿದ್ದರು.

Advertisement

ಮಾತ್ರವಲ್ಲದೆ ಪಂಜಾಬ್ ನ ಹಲವು ಅಂತರಾಷ್ಟ್ರೀಯ ಕ್ರೀಡಾಪಟುಗಳು ರೈತರಿಗೆ ಬೆಂಬಲ ಸೂಚಿಸಿ ತಮಗೆ ಸಿಕ್ಕಿರುವ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ತೀವ್ರಗೊಂಡ ಲಾಲೂ ಪ್ರಸಾದ್ ಯಾದವ್ ಕಿಡ್ನಿ ಸಮಸ್ಯೆ: ಶೇ.25% ಮಾತ್ರ ಕಾರ್ಯ; ವೈದ್ಯರ ಮಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next