Advertisement

ಬಜರಂಗದಳ ನಿಷೇಧ ವಿಚಾರ: ಮಲ್ಲಿಕಾರ್ಜುನ ಖರ್ಗೆಗೆ ಸಮನ್ಸ್ ನೀಡಿದ ಪಂಜಾಬ್ ಕೋರ್ಟ್

01:30 PM May 15, 2023 | Team Udayavani |

ಹೊಸದಿಲ್ಲಿ: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಿನಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಪಂಜಾಬ್ ಕೋರ್ಟ್ ಸಮನ್ಸ್ ನೀಡಿದೆ. ಕರ್ನಾಟಕ ಚುನಾವಣೆಯ ಸಮಯದಲ್ಲಿ ಬಲಪಂಥೀಯ ಸಂಘಟನೆ ಬಜರಂಗ ದಳ ನಿಷೇಧ ಮಾಡುವ ಬಗ್ಗೆ ನೀಡಿದ ಭರವಸೆಯ ಕುರಿತಾಗಿ ಕೋರ್ಟ್ ಸಮನ್ಸ್ ನೀಡಿದೆ.

Advertisement

ವರದಿಗಳ ಪ್ರಕಾರ, ಪಂಜಾಬ್‌ ನ ಸಂಗ್ರೂರ್ ನ್ಯಾಯಾಲಯವು ಇತ್ತೀಚೆಗೆ ಬಜರಂಗದಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಖರ್ಗೆ ವಿರುದ್ಧ ಹಿಂದೂ ಸುರಕ್ಷಾ ಪರಿಷತ್‌ ನ ಸಂಸ್ಥಾಪಕ ಹಿತೇಶ್ ಭಾರದ್ವಾಜ್ ಅವರು ಸಲ್ಲಿಸಿದ್ದ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖ್ಯಸ್ಥರಿಗೆ ಸಮನ್ಸ್ ಜಾರಿ ಮಾಡಿದೆ.

ಹಿತೇಶ್ ಭಾರದ್ವಾಜ್ ಅವರು ತನ್ನ ಅರ್ಜಿಯಲ್ಲಿ, ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳ ಸಂಘಟನೆಯನ್ನು ದೇಶದ್ರೋಹಿ ಸಂಘಟನೆಗಳಾದ ಸಿಮಿ ಮತ್ತು ಆಲ್ ಖೈದಾಗೆ ಹೋಲಿಸಿದೆ ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:Soft Signal ನಿಯಮವನ್ನೇ ತೆಗೆದು ಹಾಕಿದ ICC: ಏನಿದು ಸಾಫ್ಟ್ ಸಿಗ್ನಲ್? ಇಲ್ಲಿದೆ ಡಿಟೈಲ್ಸ್

ಕರ್ನಾಟಕ ವಿಧಾನಸಭಾ ಚುನಾವಣೆಯ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ಪಿಎಫ್ಐ ಮತ್ತು ಬಜರಂಗ ದಳದಂತಹ ಸಂಘಟನೆಗಳ ಮೇಲೆ ನಿಷೇಧ ಹೇರುವುದಾಗಿ ಭರವಸೆ ನೀಡಿದೆ. ಕರ್ನಾಟಕದ ಕಾಂಗ್ರೆಸ್ ಪ್ರಣಾಳಿಕೆಯು “ವಿವಿಧ ಸಮುದಾಯಗಳ ನಡುವೆ ದ್ವೇಷ ಮತ್ತು ದ್ವೇಷವನ್ನು ಉತ್ತೇಜಿಸುವ ಭಜರಂಗ ದಳದಂತಹ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ” ಎಂದು ಹೇಳಿತ್ತು. ಇದು ಅಲ್ಪಸಂಖ್ಯಾತರನ್ನು “ಕೋಮು ಹಿಂಸಾಚಾರ” ಮತ್ತು “ಸುಳ್ಳು ಪ್ರಕರಣಗಳಿಂದ” ರಕ್ಷಿಸುವುದಾಗಿ ಭರವಸೆ ನೀಡಿತ್ತು.

Advertisement

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 135 ಕ್ಷೇತ್ರಗಳಲ್ಲಿ ಗೆದ್ದು ಬಹುಮತ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next