Advertisement

ಸ್ಪರ್ಧೆ ನಡೆಸಿದ ಎರಡೂ ಕ್ಷೇತ್ರಗಳಲ್ಲೂ ಸೋಲಿನತ್ತ ಮುಖಮಾಡಿದ ಪಂಜಾಬ್ ಸಿಎಂ ಚನ್ನಿ

01:14 PM Mar 10, 2022 | Team Udayavani |

ಚಂಡೀಗಢ: ಪಂಜಾಬ್ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಚುನಾವಣೋತ್ತರ ಸಮೀಕ್ಷೆಯ ವರದಿಯಂತೆ ಆಮ್ ಆದ್ಮಿ ಪಕ್ಷವು ಭಾರೀ ಮುನ್ನಡೆ ಸಾಧಿಸಿದೆ. ಚುನಾವಣೆಗೂ ಮೊದಲು ಹಲವು ವಿದ್ಯಮಾನಗಳಿಗೆ ಸಾಕ್ಷಿಯಾಗಿದ್ದ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ.

Advertisement

ಪಕ್ಷದೊಳಗಿನ ತಿಕ್ಕಾಟದ ಕಾರಣದಿಂದ ಕೊನೆಯ ಹಂತದಲ್ಲಿ ಮುಖ್ಯಮಂತ್ರಿ ಪದವಿಗೇರಿದ ಚರಣ್ ಜಿತ್ ಸಿಂಹ್ ಚನ್ನಿ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಿದ್ದರು. ಆದರೆ ಎರಡೂ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ.

ಇದನ್ನೂ ಓದಿ:ಬಿಜೆಪಿಯೇ ನನ್ನ ಪರವಾಗಿ ಕೆಲಸ ಮಾಡಿಲ್ಲ!: ಗೆದ್ದ ಬಳಿಕ ಮಾನ್ಸೆರಾತ್ ಬಾಂಬ್

ಭದೌರ್ ಕ್ಷೇತ್ರದಲ್ಲಿ ಸ್ಪರ್ಧೆ ನಡೆಸಿದ್ದ ಸಿಎಂ ಚನ್ನಿ ಅವರು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಲಾಭ್ ಸಿಂಗ್ ಉಗೊಕೆ ವಿರುದ್ಧ ತೀವ್ರ ಹಿನ್ನಡೆಯಲ್ಲಿದ್ದಾರೆ. ಮಧ್ಯಾಹ್ನ 1 ಗಂಟೆಯವರೆಗಿನ ಅಪ್ಡೇಟ್ ನಲ್ಲಿ ಆಪ್ ಅಭ್ಯರ್ಥಿ ಉಗೊಕೆ ಅವರು 40,611 ಮತಗಳನ್ನು ಪಡೆದಿದ್ದರೆ, ಚನ್ನಿ ಅವರಿಗೆ ಕೇವಲ 17,768 ಮತಗಳು ಲಭ್ಯವಾಗಿದೆ. ಮೂರನೇ ಸ್ಥಾನದಲ್ಲಿರುವ ಶಿರೋಮನಿ ಅಕಾಲಿದಳದ ಸತ್ನಂ ಸಿಂಗ್ ರಾಹಿಗೆ 14250 ಮತಗಳು ಸಿಕ್ಕಿದೆ.

ಸಿಎಂ ಚರಣ್ ಜಿತ್ ಸಿಂಗ್ ಚನ್ನಿ ಸ್ಪರ್ಧೆ ಮಾಡಿರುವ ಮತ್ತೊಂದು ಕ್ಷೇತ್ರ ಚಂಕೌರ್ ಸಾಹಿಬ್ ನಲ್ಲಿ ತೀವ್ರ ಸ್ಪರ್ಧೆಯಿದೆ. ಇಲ್ಲಿಯೂ ಚನ್ನಿಗೆ ಆಪ್ ಅಭ್ಯರ್ಥಿಯು ಕಂಟಕವಾಗಿದ್ದಾರೆ.  ಸಿಎಂ ಚನ್ನಿ ಅವರು 42,718 ಮತಗಳನ್ನು ಪಡೆದಿದ್ದರೆ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಚರಣ್ ಜಿತ್ ಸಿಂಗ್ ಅವರಿಗೆ 45,612 ಮತಗಳು ಲಭ್ಯವಾಗಿದೆ. ಈ ಕ್ಷೇತ್ರದಲ್ಲಿ ತೀವ್ರ ಸ್ಪರ್ಧೆಯಿದ್ದು, ಅಂತಿಮ ಮತ ಎಣಿಕೆ ವೇಳೆ ಫಲಿತಾಂಶ ಬದಲಾವಣೆಯಾಗಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next